ಇಮಾಮ್ ಮದ್ಗಾರ ಕವಿತೆ-ಬಂದುಬಿಡು

ಕಾವ್ಯ ಸಂಗಾತಿ

ಬಂದುಬಿಡು

ಇಮಾಮ್ ಮದ್ಗಾರ

ಹಳೆಯನೆನಪುಗಳನ್ನೆಲ್ಲಾ ಕಾಡುವ ಈ ಹಾಳುಚಳಿಯಲಿ ಕಾಡತೂಸು ಹಾರಿಸಿಸುಟ್ಟು
ಚಳಿಗೆ ಬಿಸಿಕಾಯಿಸ ಬೇಕೆಂದುಕೊಂಡೆ ಕಾಲ್ತೊಡಕಾಗುತ್ತಿವೆ ಕನಸುಗಳು ತರಲೆ ತಕರಾರುಮಾಡದೇ ಬಂದುಬಿಡು

ಮಾತುಗಳೇಕೋ ಮೌನವಾಗಿವೆ
ಮನಸ್ಸೇಕೋ ಧರಣಿಹೂಡಿದೆ ಮಾತಗಳೇಕೊ ತಡವರಿಸುತ್ತಿವೆ ಮಾತನಾಡಲಾದರೂ ಬಂದುಬಿಡು

ನೀನಿಲ್ಲದ ಈ ನೀರವರಾತ್ರಿ.. ನಿದಿರಾದೇವಿಯೊಂದಿಗೆ ಜಗಳಕ್ಕಿಳಿದು
ನಿನ್ನ ಹೆಜ್ಜೆಸದ್ದಿಗಾಗಿ ಸ್ತಬ್ದವಾಗಿ ಕಾಯುತ್ತಿದೆ ನೀ ಬಂದೆಬರುವೆ ಎಂಬ ಭರವಸೆಯಿಂದ ಬಂದುಬಿಡು

ಕನಸುಗಳು ಕನವರಿಸುತ್ತಿವೆ
ಗೆದ್ದಲಿಡಿಸಬೇಡ ಮನಸಿಗೆ ಸಂತೈಸಲಾದರೂ ಬಾ
ನಿನ್ನನಡುಗೆಯಸದ್ದು ನಂಗೇನೂ ಹೊಸದಲ್ಲ ಲಜ್ಜೆಬಿಟ್ಟು ಕಾಯುತ್ತಿದ್ದೆನೆ
ಬೇಗ ಬಂದುಬಿಡು

ಕಾಯುವಿಕೆಗೂ ಚಳಿಯಾಗುವ
ಮುಂಚೆ


One thought on “ಇಮಾಮ್ ಮದ್ಗಾರ ಕವಿತೆ-ಬಂದುಬಿಡು

Leave a Reply

Back To Top