ದೀಪಿಕಾ ಚಾಟೆ ಕವಿತೆ-ಹೊನ್ನಿನ ನುಡಿ

ಕಾವ್ಯ ಸಂಗಾತಿ

ಹೊನ್ನಿನ ನುಡಿ

ದೀಪಿಕಾ ಚಾಟೆ

ಕರುನಾಡ ಐಸಿರಿ ಶಿಖರ
ಏರುತಿರಲಿ ಬಾನೆತ್ತರ
ಗಂಧದ ಚಿನ್ನದ ನಾಡಲಿ
ಕನ್ನಡ ಭಾಷೆ ಮಾರ್ದನಿಸಲಿ

ಹೊನ್ನಿನ ನುಡಿ ಕನ್ನಡ
ಭವ್ಯ ನಾಡಲಿ ಬೆಳಗಲಿ
ಭೂದೇವಿಯ ಮುಕುಟದಲಿ
ಹೊಳೆಯುತ ರಾರಾಜಿಸುತಿರಲಿ

ಶೃಂಗಾರದ ನಾಡು
ಬೇಲೂರ ಹಳೇಬೀಡು
ಸಹ್ಯಾದ್ರಿಯ ಚೆಲ್ವ ನಾಡು
ಸುತ್ತಲೆಲ್ಲ ಹಸಿರ ಕಾಡು

ಗೊಮ್ಮಟ,ಗುಮ್ಮಟಗಳು
ಕರುನಾಡ ಸಿರಿಯ ಹೆಚ್ಚಿಸಿವೆ
ಎದೆಯಲಿ ಕನ್ನಡ ಸರಿಗಮ
ಹುಚ್ಚೆದ್ದು ಕುಣಿದಾಡಿವೆ

ಸಾವಿರ ಜನುಮವೇ ಬರಲಿ
ಕನ್ನಡ ನಾಡಲಿ ಜನ್ಮವಿರಲಿ
ಉಸಿರು ಉಸಿರಲೂ
ಕನ್ನಡ ಬೆರೆಯುತಿರಲಿ


ದೀಪಿಕಾ ಚಾಟೆ

ಹೊನ್ನಿನ

Leave a Reply

Back To Top