ಕಾವ್ಯಶೈಲ-ಡಾ.ಮಮತ, ಕಾವ್ಯಬುದ್ಧ

ಕಾವ್ಯ ಸಂಗಾತಿ

ಕಾವ್ಯಶೈಲ

ಡಾ.ಮಮತ, ಕಾವ್ಯಬುದ್ಧ

ನೋಡು ನೋಡಲ್ಲಿ ಕವಿಮನೆಯು
ದಿಬ್ಬವ ಏರಲು ಕವಿಶೈಲ
ಅದುವೇ ಕಾವ್ಯ ಶೈಲ
ಮನುಜ ಮತ ವಿಶ್ವಪಥ
ಉಸುರಿದೆ ಜೇನ್ಗಲ್ಲು
ಹಸು ರಿಗ್ ತಲೆ ಹಸಿರೆತ್ತಲ್ ಹಸಿರ್ ಎತ್ತತ್ತಲ್
ಆಹಹಾ ಆಹಹಾ ತಿರುಗಿದರೂ
ಹಸಿರೇ ಹಸಿರು ಬಾನ್ ಬಯಲಲು ಹಸಿರು,
ತುಂಗೆ ಹಸಿರು ಕವಿಮನೆ ಉಸಿರು. ಕೇಳ್ ಕೇಳಲ್ಲಿ ಹಸಿರಿನ ಸಿರಿ ಕವನ ಕರ್ಣಕ್ಕೆ ಇಂಪನುನಾ ಸಿಕ ಕಂಪನು ಹೆಜ್ಜೆ ಹೆಜ್ಜೆಗೆ ಗೆಜ್ಜೆನಾದ ಗಂಧರ್ವ ಹಸಿರು
ಚಿಲಿಪಿಲಿ ಇಂಚರ ಕುಹೂ ಕುಹೂ ಮಧುರ
ಚೆಲುವಿನ ಖಿನಿ ನೋಡು
ನೋಡು ನೋಡಲ್ಲಿ ಕವಿ ಮನೆಯು.

ಉತ್ತಮ ಮಾರುತಿ ಸಗ್ಗದ ಕೀರುತಿ ಅಂಗಳ ನಗೆದಾರುತಿ ಚೆಲ್ಲಿದೆ ಅಲ್ಲೆಲ್ಲಾ ಕನ್ನಡ ಕೋಗಿಲೆ ಕಾವ್ಯ ಮಂದಾರ ಹಸಿರಿನ ಝೇಂಕಾರ ಭಾರಿಸು ಕನ್ನಡ ಡಿಂಡಿಮವ
ದಶದಿಕ್ಕುಗಳಲಿ ಕನ್ನಡ ಕನ್ನಡ ಮಮಕಾರ
ಕನ್ನಡ ಜನಪದ ಕನ್ನಡ ತನುಪದ ಕುಣಿಯಿತು ಎದೆ ಎದೆಯಲ್ಲಿ
ಕನ್ನಡ ಕವಿ ಸಾಮ್ರಾಟನು ನಡೆದಾಡಿದನು ಕಾವ್ಯದ ಹಸಿರಲ್ಲಿ
ಕನ್ನಡ ಕಂದ ಕನ್ನಡ ನಂದನ ಹಾಡಿತು ತೆರೆಯಿತು ಕಿವಿಗಣ್ಣು
ಕನ್ನಡ ವಕಬ್ಬಿಗ ಕನ್ನಡ ಕಾಜಾಣ ಕುಣಿದಿದೆ ನವಿಲಾಗಿ
ನೋಡು ನೋಡಲ್ಲಿ ಕವಿಮನೆಯು ಕವಿ ಮನವೂ.



ಡಾ.ಮಮತ, ಕಾವ್ಯಬುದ್ಧ

Leave a Reply

Back To Top