ರಾಜ್ಯೋತ್ಸವ ವಿಶೇಷ- ಡಾ. ಗುರುಸಿದ್ಧಯ್ಯಾ ಸ್ವಾಮಿ

ಸರಕಾರಿ ಕನ್ನಡ ಶಾಲೆ ಬಲಪಡಿಸುವುದು ಹೇಗೆ?

* ಪ್ರತಿಯೊಂದು ಗ್ರಾಮದಲ್ಲಿಯ ಸಣ್ಣ ಮತ್ತು ದೊಡ್ಡ ವ್ಯಾಪಾರಿಗಳು ಪ್ರತಿ ತಿಂಗಳು ಕನಿಷ್ಠ ೧% ಆದಾಯವನ್ನು ಸರಕಾರಿ ಶಾಲೆಗಳಿಗೆ ಸ್ವಯಂ ಪ್ರೇರಿತ ದೇಣಿಗೆ ಕೊಡಬೇಕು. ಅಗತ್ಯ ಪುಸ್ತಕ ಅಥವಾ ವಸ್ತು ರೂಪದಲ್ಲಿಯೂ ಕೊಡಬಹುದು. ಈ ರೀತಿ ಮಾಡಿದರೆ ಸರಕಾರಿ ಕನ್ನಡ ಶಾಲೆಗಳು ಬಲಗೊಳ್ಳಬಹುದು.

* ಶಿಕ್ಷಕ ವೃತ್ತಿ ಮಾಡುವ ಶೇ.೯೭ ರಷ್ಟು ನೌಕರರು ತಮ್ಮ ಮಕ್ಕಳನ್ನೇಕೆ ಸರ್ಕಾರಿ ಶಾಲೆಗಳಿಗೆ ಕಳುಹಿಸಲ್ಲ?

* ಶಿಕ್ಷಕ ವೃತ್ತಿ ಮಾಡುವ ಬಹುತೇಕ ನೌಕರರಿಗೆ ಸರ್ಕಾರಿ ಶಾಲೆಗಳ ಗುಣಮಟ್ಟದ ಬಗ್ಗೆ ವಿಶ್ವಾಸವಿಲ್ಲ.

ಅದಕ್ಕಾಗಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸುವುದಿಲ್ಲ.

* ಶಿಕ್ಷಣ ಸಚಿವರು, ಅಧಿಕಾರಿಗಳು ಯಾಕೆ  ಸರಕಾರಿ ಶಾಲೆಗೆ ನಿಮ್ಮ ಮಕ್ಕಳನ್ನು ಕಳುಹಿಸಿ ಎಂದು ಸಾರ್ವಜನಿಕರನ್ನು ಒತ್ತಾಯಿಸಲ್ಲ?

* ಏಕೆಂದರೆ ಬಹುತೇಕ ಎಲ್ಲ ಶಿಕ್ಷಣ ಸಚಿವರು, ಅಧಿಕಾರಿಗಳು ಸ್ವತಃ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸಿರುವುದಿಲ್ಲ. ಅದಕ್ಕಾಗಿ ಸಾರ್ವಜನಿಕರನ್ನು ಒತ್ತಾಯಿಸುವ ನೈತಿಕತೆ ಇರುವುದಿಲ್ಲ.

* ಕನ್ನಡ ಉಳಿಸಲು ಸರ್ಕಾರ ಮತ್ತು ಸಾಹಿತ್ಯ ಪರಿಷತ್ತು ಏನು ಮಾಡಬೇಕು?

* ಕನ್ನಡ ಉಳಿಸಲು ಸರ್ಕಾರ ಎಲ್ಲ ಸರ್ಕಾರಿ ನೌಕರರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸುವುದು ಕಡ್ಡಾಯಗೊಳಿಸಬೇಕು. ಸಾಹಿತ್ಯ ಪರಿಷತ್ತಿನ ವತಿಯಿಂದ ಗ್ರಾಮ ಮಟ್ಟದಲ್ಲಿಯೂ ಸಹ ವರ್ಷಕ್ಕೆ ಕನಿಷ್ಠ ಒಂದು ಶಾಲೆಗೊಂದು ಕಾರ್ಯಕ್ರಮ ಆಯೋಜಿಸಬೇಕು.


Leave a Reply

Back To Top