ದೇಶಿಯ ಶಿಕ್ಷಣದ ಅಡಿಪಾಯಕ್ಕಾಗಿ ಹೊಸ ಶಿಕ್ಷಣ ನೀತಿ 

ಶಿಕ್ಷಣ ಸಂಗಾತಿ

ದೇಶಿಯ ಶಿಕ್ಷಣದ ಅಡಿಪಾಯಕ್ಕಾಗಿ ಹೊಸ ಶಿಕ್ಷಣ ನೀತಿ

ಶಿಕ್ಷಣ ನೀತಿಯ ಬಗ್ಗೆ  ಇರುವ ಈ ಲೇಖನ ಓದಿದ ನಂತರ ಈ ಶಿಕ್ಷಣ ನೀತಿಯ ಬಗ್ಗೆ ಒಂದಷ್ಟು ಭಿನ್ನಾಭಿಪ್ರಾಯಗಳು ಇರಬಹುದು. ದಯವಿಟ್ಟು ನಿಮ್ಮ ಅನಿಸಿಕೆಗಳನ್ನು ಲೇಖನರೂಪದಲ್ಲಿ ಬರೆದು ನಮಗೆ ಕಳಿಸಿ.ಇಲ್ಲ ಬಹುತೇಕ ಶಿಕ್ಷಕರಿದ್ದು ಇಂತಹ ವಿಚಾರಗಳ ಬಗ್ಗೆ ತೆರೆದ ಮನಸಿಂದ ಚರ್ಚೆಯಲ್ಲಿ ಬಾಗವಹಿಸುತ್ತೀರೆಂದು ನಂಬಿದ್ದೇನೆ.ಸಂಗಾತಿಗೆ ಬರೆಯುವ ಶಿಕ್ಷಕರುಗಳಿಂದ ಮುಕ್ತಚರ್ಚೆ ನಡೆಯಬಹುದೆಂದು ನಾನು ನಂಬಿದ್ದೇನೆ

ಡಾ. ದಾನಮ್ಮ ಝಳಕಿ

(ಶಿಕ್ಷಣ ನೀತಿಯ ಬಗ್ಗೆ  ಇರುವ ಈ ಲೇಖನ ಓದಿದ ನಂತರ ಈ ಶಿಕ್ಷಣ ನೀತಿಯ ಬಗ್ಗೆ ಒಂದಷ್ಟು ಭಿನ್ನಾಭಿಪ್ರಾಯಗಳು ಇರಬಹುದು. ದಯವಿಟ್ಟು ನಿಮ್ಮ ಅನಿಸಿಕೆಗಳನ್ನು ಲೇಖನರೂಪದಲ್ಲಿ ಬರೆದು ನಮಗೆ ಕಳಿಸಿ.ಇಲ್ಲ ಬಹುತೇಕ ಶಿಕ್ಷಕರಿದ್ದು ಇಂತಹ ವಿಚಾರಗಳ ಬಗ್ಗೆ ತೆರೆದ ಮನಸಿಂದ ಚರ್ಚೆಯಲ್ಲಿ ಬಾಗವಹಿಸುತ್ತೀರೆಂದು ನಂಬಿದ್ದೇನೆ.ಸಂಗಾತಿಗೆ ಬರೆಯುವ ಶಿಕ್ಷಕರುಗಳಿಂದ ಮುಕ್ತಚರ್ಚೆ ನಡೆಯಬಹುದೆಂದು ನಾನು ನಂಬಿದ್ದೇನೆ)

ಶಿಕ್ಷಣ ದೇಶದ ಬೆನ್ನೆಲಬು. ದೇಶದ ಸಂವಿಧಾನಿಕ ಮೌಲ್ಯಗಳನ್ನು ಹಾಗೂ ಆಶೆಯಗಳನ್ನು ಈಡೇರಿಸುವ ಮೂಲಕ ಜನಾಂಗವನ್ನು ಪ್ರಗತಿಪಥದಲ್ಲಿ ಸಾಗಿಸುವ ಮಹೋನ್ನತ ಕಾರ್ಯವನ್ನು ಶಿಕ್ಷಣ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಭಾರತದ ಶಿಕ್ಷಣ ವ್ಯವಸ್ಥೆಯ ಇತಿಹಾಸವನ್ನು ಇಣುಕಿ ನೋಡಿದಾಗ, ಅನೇಕ ವರದಿಗಳು, ಯೋಜನೆಗಳು, ಆಯೋಗಗಳು, ಸಮಿತಿಗಳು ಹಾಗೂ ಶಿಕ್ಷಣ ನೀತಿಗಳು ನಮ್ಮ ದೇಶದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಅನೇಕ ಬದಲಾವಣೆಗಳನ್ನು ತಂದಿರುವುದು ನಮ್ಮ ಗಮನಕ್ಕೆ ಬರುತ್ತದೆ. ಈ ರೀತಿಯ ಆಯೋಗಗಳಲ್ಲಿ ಸ್ವತಂತ್ರ್ಯ ಪೂರ್ವದ ಹಾಗೂ ಸ್ವಾತಂತ್ಯ್ರ ನಂತರದ ಆಯೋಗಗಳನ್ನು, ವರದಿಗಳನ್ನು ಕಾಣಬಹುದಾಗಿದೆ.

ಈ ಹಿನ್ನೆಲೆಯಲ್ಲಿ ಸ್ವತಂತ್ರ್ಯದ ಪೂರ್ವದಲ್ಲಿ 1854 ರ ವುಡ್ಸ ವರದಿ, 1882 ರ ಹಂಟರ್‌ ಆಯೋಗ, 1904 ರ ಭಾರತ ಸರಕಾರದ ಗೊತ್ತುವಳಿ,  1917 ರ ಸ್ಯಾಡ್ಲರ್‌ ಆಯೋಗ ಅಥವಾ ಕಲ್ಕತ್ತಾ ವಿಶ್ವವಿದ್ಯಾಲಯದ ಆಯೋಗ, 1929 ರ ಹರ್ಟಾಗ ಸಮಿತಿ ಮತ್ತು 1944 ರ ಸಾರ್ಜಂಟ್‌ ವರದಿ ಇತ್ಯಾದಿಗಳು. ಇವೆಲ್ಲವೂ ಸ್ವತಂತ್ಯ್ರ ಪೂರ್ವದಲ್ಲಿ  ಶಿಕ್ಷಣ ವ್ಯವಸ್ಥೆಯ ಬದಲಾವಣೆಗಳಿಗೆ ಕಾರಣವಾದರೂ ಸಹ ಈ ಇವೆಲ್ಲವೂ ಭಾರತದ ಸಮೃದ್ಧಿಗಾಗಿ ಇರದೇ ಬ್ರಿಟಿಷರ ಸೇವೆಗಾಗಿ ಇತ್ತು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ.

ಇನ್ನು ಸ್ವತಂತ್ರ್ಯ ನಂತರದಲ್ಲಿ 1948-49 ರ ವಿಶ್ವವಿದ್ಯಾಲಯ ಶಿಕ್ಷಣ ಆಯೋಗ (ರಾಧಾಕೃಷ್ಣನ್‌ ಆಯೋಗ), 1952-53 ರ ಮಾಧ್ಯಮಿಕ ಶಿಕ್ಷಣ ಆಯೋಗ ( ಮುದಲಿಯಾರ ಶಿಕ್ಷಣ ಆಯೋಗ), 1964-66 ಭಾರತೀಯ ಶಿಕ್ಷಣ ಆಯೋಗ ಅಥವಾ ಕೊಠಾರಿ ಆಯೋಗ, 1986 ರ ರಾಷ್ಟ್ರೀಯ ಶಿಕ್ಷಣ ನೀತಿ ಇತ್ಯಾದಿಗಳು ಶಿಕ್ಷಣದಲ್ಲಿ ಅನೇಕ ಬದಲಾವಣೆಗಳಿಗೆ ಕಾರಣವಾದವು.

ಆದಾಗ್ಯೂ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಇನ್ನಷ್ಟು ಒತ್ತು ಕೊಟ್ಟು ಶೈಕ್ಷಣಿಕ ಹಂತಗಳ ಒಳಗೆ ಅದನ್ನು ಪರಿಗಣಿಸುವ ಅವಶ್ಯಕತೆ ಇತ್ತು. ಏಕೆಂದರೆ 3 ವರ್ಷದ ಬುದ್ಧಿ ನೂರು ವರ್ಷದ ತನಕ ಎಂಬ ಹಿರಿಯರು ಹೇಳಿದ ಅನುಭವದ ಮಾತುಗಳಂತೆ ಶಿಕ್ಷಣ ವ್ಯವಸ್ಥೆಯಲ್ಲಿ  ಮಗುವಿನ ಬೆಳವಣೆಗೆಯ ಅತೀ ಪ್ರಮುಖ ಹಂತವನ್ನು 3 ವರ್ಷದಿಂದಲೇ ಪರಿಗಣಿಸುವ ಅವಶ್ಯಕತೆ ಇತ್ತು ಆದ್ದರಿಂದ ಇದು ಸಹ ಶೈಕ್ಷಣಿಕ ವ್ಯವಸ್ಥೆಯ ಭಾಗವಾಗಬೇಕಿತ್ತು.  ಇನ್ನು ಪ್ರೌಢ ಹಂತದ ಶಿಕ್ಷಣ ವ್ಯವಸ್ಥೆಯಲ್ಲಿ  ವಿಜ್ಞಾನ, ವಾಣಿಜ್ಯ ಹಾಗೂ ಕಲೆ ಎಂದು ನಿರ್ದಿಷ್ಟವಾಗಿ ಗೆರೆ ಎಳೆದು ವಿಭಿನ್ನ ವಿಷಯಗಳ ಆಸಕ್ತಿ ಹೊಂದಿದ ಮಗುವಿಗೆ ಅಡೆತಡೆಯಾಗಿತ್ತು. ಅಂದರೆ ೧೦ ನೇಯ ತರಗತಿಯನ್ನು ಓದಿದ ಮಗುವಿಗೆ ಗಣಿತ ಹಾಗೂ ಸಾಹಿತ್ಯದಲ್ಲಿ ಆಸಕ್ತಿ ಇದ್ದರೆ ಆ ವಿಷಯಗಳನ್ನು ಓದಲು ವಿಜ್ಞಾನದಲ್ಲಿ ಅಥವಾ ಕಲೆಯಲ್ಲಿ ಅವಕಾಶಗಳೇ ಇರಲಿಲ್ಲ.

 ಅಲ್ಲದೇ ನಮ್ಮ ದೇಶ ಸ್ವತಂತ್ರ್ಯವಾಗಿ 75 ವರ್ಷಗಳು ಕಳೆದರೂ ನಿರುದ್ಯೋಗ ಹಾಗೂ ಬಡತನ ಕಡಿಮೆಯಾಗಿರಲಿಲ್ಲ. ಕಾರಣ ಕೌಶಲ್ಯಾಧಾರಿತ ಶಿಕ್ಷಣ ವ್ಯವಸ್ಥೆಗೆ ಒತ್ತು ಕೊಟ್ಟರಲಿಲ್ಲ. ಇನ್ನು ಕ್ರೀಡಾ ರಂಗದಲ್ಲಿ ಅಂತರಾಷ್ಟ್ರೀಯ ಆಟೋಟಗಳಲ್ಲಿ ಹಾಗೂ ಒಲಂಪಿಕ್‌ ಆಟಗಳಲ್ಲಿ  ಪದಕಗಳು  ತೃಪ್ತಿ ತರುವಷ್ಟು ಲಭಿಸಿಲ್ಲ. ಏಕೆಂದರೆ ಶಿಕ್ಷಣ ವ್ಯವಸ್ಥೆಯಲ್ಲಿ ಕ್ರೀಡೆಗೆ ಅಷ್ಟೊಂದು ಮಹತ್ವವನ್ನು ನೀಡದೇ ಕೇವಲ ಬೌದ್ಧಿಕ ಮಟ್ಟವನ್ನು ಅಳೆಯುವ ಅಂಕಗಳೇ ಮುಖ್ಯವಾಗಿ ಬಿಟ್ಟಿದ್ದವು.  ಹೀಗೆ ಪಟ್ಟಿ ಮಾಡುತ್ತಾ ಹೋದರೆ ಶೈಕ್ಷಣಿಕ ವ್ಯವಸ್ಥೆಯಲ್ಲಿ ಇನ್ನೂ ಸಾಧಿಸಬೇಕಾಗಿರುವುದು ಬಹಳಷ್ಟಿದೆ. ಏಕೆಂದರೆ ನಮ್ಮ ದೇಶೀಯ ಕೌಶಲಗಳು ಹಾಗೂ ಶೈಕ್ಷಣಿಕ ಚಟುವಟಿಕೆಗಳು ನಮ್ಮ ಶಿಕ್ಷಣದ ಭಾಗವಾಗುವುದರ ಮೂಲಕ ದೇಶೀಯ ಶಿಕ್ಷಣದ ಸೋಗಡನ್ನು ಆನಂದಿಸುವ ವ್ಯವಸ್ಥೆಯ ಅವಶ್ಯಕತೆ ಇತ್ತು.

 ಅಷ್ಟೇ ಅಲ್ಲದೇ ಸುಸ್ಥಿರ ಬೆಳವಣೆಗೆ ಕಾರ್ಯಸೂಚಿ 2030 (Agenda for Sustainable Development) ಇದರ ಗುರಿ 4 ರಲ್ಲಿ (ಎಸ್.ಡಿ.ಜಿ 4) ಪ್ರಸ್ತಾಪಿಸಲಾಗಿರುವ ಜಾಗತಿಕ ಶಿಕ್ಷಣಬೆಳವಣೆಗೆ ಕಾರ್ಯಸೂಚಿಯನ್ನು ಭಾರತ 2015 ರಲ್ಲಿ ಅಳವಡಿಸಿಕೊಂಡಿದ್ದು ಇದು 2030 ರ ವೇಳೆಗೆ ಪ್ರತಿಯೊಬ್ಬರಿಗೂ ಸಮಾವಿಷ್ಟವಾದ ಮತ್ತು ಸಮಾನವಾದ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಹಾಗೂ ಜೀವನಪರ್ಯಂತ ಕಲಿಕೆಯ ಸದಾವಕಾಶಗಳನ್ನು ಖಾತರಿಯಾಗಿ ಒದಗಿಸಿಕೊಡುವ ಉದ್ದೇಶವನ್ನು ಹೊಂದಿದೆ. ಇಂಥ ಉನ್ನತ ಗುರಿ ಸಾಧನೆ ಮಾಡಬೇಕಾದರೆ 2030 ರ ಸುಸ್ಥಿರ ಬೆಳವಣೆಗೆಯ ಕಾರ್ಯಸೂಚಿಯ ಎಲ್ಲ ಮಹತ್ವಪೂರ್ಣವಾದ ಉದ್ದೇಶಗಳನ್ನು ಮತ್ತು ಗುರಿಗಳನ್ನು ಸಾಧಿಸಲು ಸಾಧ್ಯವಾಗುವಂತಹ ಕಲಿಕೆಯನ್ನು ಪೋಷಿಸಿ ಅದಕ್ಕೆ ಬೆಂಬಲ ನೀಡಲು ಸಮರ್ಥವಾಗುವಂತೆ ನಮ್ಮ ಇಡೀ ಶಿಕ್ಷಣ ವ್ಯವಸ್ಥೆಯನ್ನು ಮರುವಿನ್ಯಾಸ ಮಾಡುವ ಅಗತ್ಯಯೆ ಇದೆ.

ವಾಸ್ತವವಾಗಿ, ವೇಗವಾಗಿ ಬದಲಾಗುತ್ತಿರುವ ಉದ್ಯೋಗವಕಾಶಗಳ ಸ್ಥಿತಿಗತಿಗಳು ಮತ್ತು ಜಾಗತಿಕ ಪರಿಸರ ವ್ಯವಸ್ಥೆ ಈ ಸನ್ನಿವೇಶಗಳಲ್ಲಿ ಮಕ್ಕಳು ಇಂದು ಕಲಿಯಬೇಕಾಗಿರುವುದು ಮಾತ್ರವಲ್ಲ. ಅದಕ್ಕಿಂತಲೂ ಮಿಗಿಲಾಗಿ ಕಲಿಯುವುದು ಹೇಗೆಂದು ಕಲಿಯುವುದಕ್ಕೆ ಹೆಚ್ಚು ಮಹತ್ವ ಬರುತ್ತಿದೆ. ಹೀಗಾಗಿ ಇಂದು ಶಿಕ್ಷಣ ಎಂಬುದು ಕಠ್ಯಕ್ರಮಗಳಲ್ಲಿ ಪಡೆಯುವ ಜ್ಞಾನಸಂಚಯಕ್ಕಿಂತ ಮಿಗಿಲಾಗಿ ತಾರ್ಕಿಕವಾಗಿ ಇಲ್ಲವೇ ವಿಮರ್ಶಾತ್ಮಕವಾಗಿ ಹೇಗೆ ಆಲೋಚನೆ ಮಾಡಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು. ಯಾವ ರೀತಿಯಲ್ಲಿ ಸೃಜನಾತ್ಮಕವಾಗಿ ಮತ್ತು ಬಹುಶಿಸ್ತೀಯ ರೀತಿಯಲ್ಲಿ ಚಿಂತನೆ ನಡೆಸುವುದು. ಹೊಸ ಸಂಗತಿಗಳನ್ನು ಆವಿಷ್ಕರಿಸುವುದು, ಅಳವಡಿಸಿಕೊಳ್ಳುವುದು ಮತ್ತು ದಕ್ಕಿಸಿಕೊಳ್ಳುವುದು ಹೇಗೆ, ಜ್ಞಾನ ಕ್ಷೇತ್ರಗಳಲ್ಲಿ ಹಾಗೂ ಬದಲಾಗುತ್ತಿರುವ ವಿಷಯವ್ಯಾಪ್ತಿಯಲ್ಲಿ ಹೊಸದನ್ನುಮೈಗೂಡಿಸಿಕೊಳ್ಳುವುದು ಹೇಗೆ ಇಂಥ ವಿಚಾರಗಳತ್ತ ಚಿಂತನೆ ನಡೆಸುತ್ತಿದೆ. ಇವತ್ತಿನ ಕಲಿಕೆಯ ಕ್ರಮ ಶಿಕ್ಷಣವನ್ನು ಇನ್ನೂ ಹೆಚ್ಚು ಪ್ರಾಯೋಗಿಕ, ಸಮಗ್ರವಾಗಿ ಸರ್ವವ್ಯಾಪಿಯಾಗಿ ಪ್ರಶ್ನೆ ಮೂಲವಾಗಿ ಮಾಡುವ ನಿಟ್ಟಿನಲ್ಲಿ ಬದಲಾಗುತ್ತಾ ಹೋಗಬೇಕು ಅಂತೆಯೇ ಅದು ಕಲಿಯುವವರನ್ನು ಕೇಂದ್ರವಾಗಿಟ್ಟುಕೊಳ್ಳಬೇಕು. ಚರ್ಚೆಯನ್ನು ಆಧಾರವಾಗಿಟ್ಟುಕೊಳ್ಳಬೇಕು. ಸುಲಭವಾಗಿ ಬದಲಾವಣೆಗೆ ಹೊಂದಿಕೊಳ್ಳುವಂತಿರಬೇಕು. ಇವುಗಳೊಟ್ಟಿಗೆ ಅದು ಆನಂದಪ್ರದಾಯಕವಾಗಿ ಕೂಡ ಇರಬೇಕು ಎಂಬುದನ್ನು ಒತ್ತಿ ಹೇಳಬೇಕಾಗಿಲ್ಲ. ಪಠ್ಯಕ್ರಮದಲ್ಲಿ ವಿಜ್ಞಾನ ಮತ್ತು ಗಣಿತಗಳ ಜೊತೆಯಲ್ಲಿ ಮೂಲ ಕಲಾವಿಷಯಗಳು, ಮಾನವಿಕಗಳು, ಆಟಗಳು, ಕ್ರೀಡೆಗಳು, ದೈಹಿಕ ದಾರ್ಢ್ಯ, ಭಾಷೆಗಳು, ಸಾಹಿತ್ಯ, ಸಂಸ್ಕೃತಿ ಇವೆಲ್ಲ ಸೇರಿರಬೇಕು. ಒಟ್ಟಿನಲ್ಲಿ ಕಲಿಯುವವರಲ್ಲಿ ಕಲಿಕೆಯ ಎಲ್ಲ ಮುಖಗಳನ್ನು ಮತ್ತು ಸಾಮರ್ಥ್ಯಗಳನ್ನು ಪಡಿಮೂಡಿಸುವಂತಿರಬೇಕು. ಕಲಿಯುವವರ ಪಾಲಿಗೆ ಕಲಿಕೆ ಸಮಗ್ರವಾಗಿ, ಉಪಯುಕ್ತವಾಗಿ ಹಾಗೂ ಜ್ಞಾನತೃಷೆಯನ್ನು ತಣಿಸುವಂತಹದಾಗಿ ಇರಬೇಕು. ಶಿಕ್ಷಣ ಚಾರಿತ್ರ್ಯವನ್ನು ನಿರ್ಮಾಣ ಮಾಡಬೇಕು. ಕಲಿಯುವವರ ಪಾಲಿಗೆ ಅದು ಸನ್ಮಾರ್ಗಬೋದಕವಾಗಿ, ತಾರ್ಕಿಕವಾಗಿ, ಸಹಾನುಭೂತಿಸಂಪನ್ನವಾಗಿ, ಹಿತಕರವಾಗಿ ಇರಬೇಕಾದುದು ಅಲ್ಲದೇ ಅವರಿಗೆ ಉಪಯುಕ್ತವಾಗಿರುವ, ಲಾಭಪ್ರರದವಾಗಿರುವ ಉದ್ಯೋಗವಕಾಶಗಳನ್ನು ಒದಗಿಸುವಂತಿರಬೇಕು.

ಇದಕ್ಕೆಲ್ಲ ಉತ್ತರ ಎನ್ನುವಂತೆ ನಮ್ಮ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ 2020 ಅಮೂಲಾಗ್ರಹ ಬದಲಾವಣೆಯೊಂದಿಗೆ ಹೊಸ ಯುಗಕ್ಕೆ ಕಾಲಿಟ್ಟಿದೆ. ಹಾಗಾದರೆ ಅದರಲ್ಲಿರುವ ಕೆಲವು ಪ್ರಮುಖ ಅಂಶಗಳನ್ನು ತಿಳಿಯೋಣ

ರಾಷ್ಟ್ರೀಯ ಶಿಕ್ಷಣ ನೀತಿ 2020

ಮುನ್ನೋಟ – ರಾಷ್ಟ್ರೀಯ ಶಿಕ್ಷಣ ನೀತಿಯು ಭಾರತ ಕೇಂದ್ರಿತ ಶಿಕ್ಷಣ ವ್ಯವಸ್ಥೆಯೊಂದಿಗೆ ಸರ್ವರಿಗೂ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ನಮ್ಮಸಮಾಜವನ್ನು ಒಂದು ಸುಸ್ಥಿರ, ಸಮಾನ ಹಾಗೂ ಜೀವಂತಿಕೆಯುಳ್ಳ ಸಮಾಜವನ್ನಾಗಿ ಮಾರ್ಪಡಿಸಲು ಶ್ರಮಿಸುತ್ತದೆ.  MHRD ಮಾನವ ಸಂಪನ್ಮೂಲ ಇಲಾಖೆ ಇನ್ನು ಮುಂದೆ ಕೇಂದ್ರ ಶಿಕ್ಷಣ ಇಲಾಖೆ ಎಂದು ಬದಲಾವಣೆ ಹೊಂದಲಿದೆ

ಈ ಶಿಕ್ಷಣ ನೀತಿಯು ಪ್ರಮುಖವಾಗಿ ೪ ಪಾರ್ಟಗಳನ್ನು ಹೊಂದಿದೆ.

1 School education – ಶಾಲಾ ಶಿಕ್ಷಣ ವ್ಯವಸ್ಥೆ

2 Higher Education – ಉನ್ನತ ಶಿಕ್ಷಣ

3 Other Key Areas of Focus – ಭಾಗ ೩ ರಲ್ಲಿ ಇತರ ಕ್ಷೇತ್ರಗಳ ಮೇಲೆ ಗಮನಹರಿಸಲಾಗಿದೆ ಉದಾ: ವೃತ್ತಿ ಶಿಕ್ಷಣ, ವಯಸ್ಕರ ಶಿಕ್ಷಣ, ಭಾರತೀಯ ಭಾಷೆ, ಕಲೆ ಹಾಗೂ ಸಂಸ್ಕೃತಿಯ ಪ್ರಚಾರ, ತಂತ್ರಜ್ಞಾನದ ಬಳಕೆಯನ್ನು ಖಚಿತಪಡಿಸುವುದು ಇತ್ಯಾದಿ

4 Making it Happen – ಇದರಲ್ಲಿ ಕೇಂದ್ರ ಶಿಕ್ಷಣ ಸಲಹಾ ಮಂಡಳಿ ಬಲಪಡಿಸುವಿಕೆ, ಹಣಕಾಸು ಹಾಗೂ ಎಲ್ಲರಿಗೂ ಕೈಗೆಟುಕುವ ಗುಣಮಟ್ಟದ ಶಿಕ್ಷಣ ಮತ್ತು ಅನುಷ್ಠಾನದ ಬಗ್ಗೆ ಚರ್ಚಿಸಲಾಗಿದೆ

ನೀತಿ ಅವಲೋಕನ –  ಮುಖ್ಯ ಅಂಶಗಳು

        ಶಾಲಾ ಶಿಕ್ಷಣ

            ಉನ್ನತ ಶಿಕ್ಷಣ

            ಶಿಕ್ಷಕರ ಶಿಕ್ಷಣ ಮತ್ತು ತರಬೇತಿ

            ವೃತ್ತಿಪರ ಶಿಕ್ಷಣ

            ಔದ್ಯೋಗಿಕ ಶಿಕ್ಷಣ

            ರಾಷ್ಟ್ರೀಯ ಸಂಶೋಧನಾ ಸಂಸ್ಥೆ

        ಶಿಕ್ಷಣದಲ್ಲಿ ತಂತ್ರಜ್ಞಾನ

            ವಯಸ್ಕರ ಶಿಕ್ಷಣ

            ಭಾರತೀಯ ಭಾಷೆಗಳಿಗೆ ಉತ್ತೇಜನ

            ಶಿಕ್ಷಣಕ್ಕಾಗಿ ಹಣಕಾಸು ಪೂರೈಕೆ

            ರಾಷ್ಟ್ರೀಯ ಶಿಕ್ಷಣ ಆಯೋಗ

        ಕಡ್ಡಾಯ ಶಿಕ್ಷಣ ಆರ್‌ ಟಿ ಇ ೩ ವರ್ಷದಿಂದ ೧೮ ವರ್ಷದವರೆಗೆ ವಿಸ್ತರಣೆ

        THE GLOBAL EDUATION DEVELOPMENT AGENDA ದಡಿಯಲ್ಲಿ ಸುಸ್ಥಿರ ಅಭಿವೃದ್ಧಿ 2015 ನ್ನು ಅಳವಡಿಸಲಾಗಿತ್ತು  ಇದರ ಗುರಿಯಾದ ಎಲ್ಲರಿಗೂ ಸಮಾನ ಶಿಕ್ಷಣ ಮತ್ತು ಜೀವನಪರ್ಯಂತ ಅವಕಾಶಗಳ ಕಲ್ಪಿಸುವಿಕೆಯನ್ನು ಸಾಧಿಸಲಾಗಲಿಲ್ಲ. ಅದನ್ನು 2030 ರವರೆಗೆ ಸಾಧಿಸುವಗೋಸ್ಕರ ಈ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದೆ.

        ಸರಕಾರಿ ಶಾಲೆಗಳಲ್ಲಿ ಸೌಲಭ್ಯದ ಕೊರತೆ ಹಾಗೂ ಖಾಸಗಿ ಶಾಲೆಗಳ ಹೆಚ್ಚಳದಿಂದ ಈ ಗುರಿ ಸಾಧಿಸಲು ಆಗಿರಲಿಲ್ಲ. ಏಕೆಂದರೆ ಸಾಮಾಜಿಕ ಹಾಗೂ ಆರ್ಥಿಕ ಅನನುಕೂಲ ಗುಂಪಿನವರು ಹೆಚ್ಚಾಗಿ ಸರಕಾರಿ ಶಾಲೆಗಳಲ್ಲಿದ್ದು ಅವರು ಶಾಲೆಯಿಂದ ಹೊರಗುಳಿವವರಲ್ಲಿ ಹೆಚ್ಚಾಗಿದ್ದಾರೆ.(ಡ್ರಾಪ್‌ ಔಟ್‌ ಹೆಚ್ಚಾಗಿದ್ದಾರೆ)

        ಶಿಕ್ಷಣ ವ್ಯವಸ್ಥೆಯ ಪ್ರಮುಖ ಉದ್ದೇಶ – ತರ್ಕಬದ್ಧ ಚಿಂತನೆಗೆ ಸಮರ್ಥರಾದ ಉತ್ತಮ ಮನುಷ್ಯರನ್ನು ಬೆಳೆಸುವುದು. ಸೃಜನಶೀಲತೆ, ಉತ್ತಮ ನೈತಿಕತೆ, ಮೌಲ್ಯಗಳು, ಸಹಾನುಭೂತಿ, ಅನುಭೂತಿ, ಧೈರ್ಯ, ಸ್ಥಿತಿಸ್ಥಾಪಕತ್ವ,  ವೈಜ್ಞಾನಿಕ ಮನೋಭಾವ, ಇತ್ಯಾದಿಗಳ ಬೆಳವಣೆಗೆಯ ಆಶಯ ಹೊಂದಿದೆ.

Principles of this Policy

ಒಳ್ಳೆಯ ಶಿಕ್ಷಣ ಸಂಸ್ಥೆ ಎಂದರೆ – ಅಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ರಕ್ಷಣೆ, ಕಾಳಜಿ, ಸ್ವೀಕಾರ ಮನೋಭಾವ, ಒಳ್ಳೆಯ ಸೌಲಭ್ಯಗಳು ಹಾಗೂ ಸಂಪನ್ಮೂಲಗಳು ಇರಬೇಕು.

ತತ್ವಗಳು

        ಪ್ರತಿ ವಿದ್ಯಾರ್ಥಿಗಳನ್ನು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿರುವ ಪ್ರಬುದ್ಧತೆ ಗುರುತಿಸುವುದು ಮತ್ತು ಪೋಷಿಸುವುದು.

        ಬುನಾದಿ ಹಂತದಲ್ಲಿ ಸಾಕ್ಷರೆತೆ ಮತ್ತು ಗಣಿತ ಕೌಶಲಗಳ ಸಾಧನೆ

        ನಮ್ಯತೆ ಲಕ್ಷಣ – ಆಸಕ್ತಿ ಹಾಗೂ ಅಭಿರುಚಿಗೆ ಅನುಗುಣವಾಗಿ ವಿಷಯಗಳ ಆಯ್ಕೆಯ ಸ್ವಾತಂತ್ರ್ಯ

        ಕಲೆ ವಿಜ್ಞಾನ ಇತ್ಯಾದಿಗಳ ಕಡ್ಡಾಯ ಪ್ರತ್ಯೇಕತೆ ಇಲ್ಲ.

        ಬಹುಶಿಸ್ತೀಯ ಹಾಗೂ ಸಮಗ್ರ ಶಿಕ್ಷಣ

        ಪರಿಕಲ್ಪನೆಗಳ ಆಳವಾದ ಅಧ್ಯಯನ – ಕಂಠಪಾಠಕ್ಕೆ ತಡೆ

        ಸೃಜನಶೀಲತೆ ಹಾಗೂ ವಿಮರ್ಶಾತ್ಮಕ ಚಿಂತನೆ.

        ಮಾನವೀಯತೆ, ಸಂವಿಧಾನಿಕ ಮೌಲ್ಯಗಳು ಹಾಗೂ ನೈತಿಕತೆಯುಳ್ಳ ಪಠ್ಯಕ್ರಮ

        ಬಹುಭಾಷೆ ಮತ್ತು ಮಾತೃಭಾಷೆಗೆ ಒತ್ತು ನೀಡುವುದು.

        ಜೀವನ ಕೌಶಲಗಳ ಬೆಳವಣೆಗೆ

        ನಿರಂತರ ರೂಪಣಾತ್ಮಕ ಮೌಲ್ಯಮಾಪನ

        ತಂತ್ರಜ್ಞಾನದ ಹೆಚ್ಚಿನ ಬಳಕೆ

        ವೈವಿದ್ಯತೆಗೆ ಗೌರವ

        ಸಮಾನತೆ ಹಾಗೂ ಒಳಗೊಳ್ಳುವ ಶಿಕ್ಷಣ

        ಎಲ್ಲ ಶಿಕ್ಷಣ ಹಂತಗಳ ಪಠ್ಯಕ್ರಮದಲ್ಲಿ ಅನ್ವಯಿಕ ಕಲಿಕೆ

        ಶಿಕ್ಷಕರು ಹಾಗೂ ಅಧ್ಯಾಪಕರ ಕಲಿಕೆ ಪ್ರಕ್ರಿಯೆ

        ಕಡಿಮೆಯಾಗಿರುವ ಬಿಗಿಯಾದ ನಿಯಂತ್ರಣ –”Light but tight” regulatory framework

        ಐಕ್ಯತೆ, ಪಾರದರ್ಶಕತೆ, ಸಂಪನ್ಮೂಲ ಸದ್ಬಳಕೆ

        ಮಹೋನ್ನತ ಸಂಶೋಧನೆಗೆ ಒತ್ತು ಮತ್ತು ನಿರಂತರ ವಿಮರ್ಶೆ

        ಸಮೃದ್ಧ ಭಾರತದ ಪರಿಕಲ್ಪನೆ

        ಶಿಕ್ಷಣವು ಸಾರ್ವಜನಿಕ ಸೇವೆಯಾಗಿದೆ.

        ಖಾಸಗಿ ಮತ್ತು ಸಮುದಾಯದ ಭಾಗವಹಿಸುವಿಕೆ ಪ್ರೋತ್ಸಾಹ

Vision Of the Policy

        ಪ್ರತಿಯೊಬ್ಬ ಪ್ರಜೆಗೂ ಸುಸ್ಥಿರ, ಸಮಾನ ಮತ್ತು ರೋಮಾಂಚಕವಾಗಿರುವ ಜ್ಞಾನವನ್ನು ಉನ್ನತ ಶಿಕ್ಷಣದ ಮೂಲಕ  ಕಲ್ಪಸುವುದು

        ಭಾರತವನ್ನು ಜಾಗತಿಕ ಜ್ಞಾನದ ಮೂಲಕ ಸುಪರ್‌ ಪಾವರ್‌ ದೇಶವನ್ನಾಗಿ ಮಾಡುವುದು.

        ಈ ಶಿಕ್ಷಣ ನೀತಿಯಲ್ಲಿ ಪಠ್ಯಕ್ರಮ ಹಾಗೂ ಬೋಧನಾಶಾಸ್ತ್ರದಿಂದ ಮೂಲಭೂತ ಕರ್ತವ್ಯಗಳ ಬಗ್ಗೆ ಆಳವಾದ ಗೌರವವನ್ನು ಮತ್ತು ಸಂವಿಧಾನಿಕ ಮೌಲ್ಯಗಳನ್ನು ವಿದ್ಯಾರ್ಥಿಗಳು ಅನ್ವಯಿಸಿಕೊಳ್ಳುವಂತೆ ಮಾಡುವುದು

        ವಿದ್ಯಾರ್ಥಿಗಳು ದೇಶಪ್ರೇಮ ಹಾಗೂ ಜಗತ್ತಿನಲ್ಲಿ ಭಾರತ ದೇಶವನ್ನು ಮುಂದೆ ತರುವ ಜವಾಬ್ದಾರಿ ಹಾಗೂ ಬದ್ಧತೆ ಬೆಳೆಸುವುದು

ಪ್ರಮುಖಾಂಶಗಳು

ಶಿಕ್ಷಣ ವ್ಯವಸ್ಥೆ- 5+3+3+4

      Foundational  ಬುನಾದಿ ಹಂತ (೩ ರಿಂದ ೮ ವರ್ಷ) – ಪ್ರೀಪ್ರೈಮರಿಯ ೩ ವರ್ಷ ಹಾಗೂ ೧&೨ ನೇಯ     ತರಗತಿಗಳು.  ಪುಸ್ತಗಳ ಬಾರ ತುಂಬಾ ಕಡಿಮೆ ಕೇವಲ ಆಟ, ಚಟುವಟಿಕೆ, ಹೊಸದನ್ನು ಹುಡುಕುವ ಆಧಾರಿತ ಕಲಿಕೆ. NCERT ಯಿಂದ ಪಠ್ಯಕ್ರಮ ರಚನೆಅಸವ

•          Preparatory ಪೂರ್ವ ಸಿದ್ಧತಾ ಹಂತ(8 ರಿಂದ 11 ವರ್ಷ)  ೩ ರಿಂದ ೫ ನೇಯ ತರಗತಿಯವರೆಗೆ, ಭಾಷೆ, ಗಣಿತ, ವಿಜ್ಞಾನ,ಕಲೆ ಹಾಗೂ ಸಮಾಜ ವಿಜ್ಞಾನದ ಪರಿಚಯ  ಆಟಗಳ ಮೂಲಕ ಹಾಗೂ ಹೊಸದನ್ನು ಹುಡುಕುವ ಆಧಾರಿತ ಕಲಿಕೆ, ರಚನಾತ್ಮಕ ಕಲಿಕೆಯ ಪ್ರಾರಂಭ

•          Middle ಮಧ್ಯಮ ಹಂತ (11 ರಿಂದ 14 ವರ್ಷ)  ೬ ರಿಂದ ೮ ನೇಯ ತರಗತಿ. ವಿಷಯಗಳ ಪರಿಕಲ್ಪನೆಗಳ ಕಲಿಕೆ ಮುಂದುವರಿಕೆ , ಹದಿಹರೆಯದ ಅನುಭವಗಳು

•          Secondary ಪ್ರೌಢ ಹಂತ(14 ರಿಂದ 18 ವರ್ಷ) ೯ ರಿಂದ ೧೨ ತರಗತಿ ಶಾಲಾ ಶಿಕ್ಷಣದ ವ್ಯಾಪ್ತಿಗೆ, ವಿಷಯಗಳ ಬಗ್ಗೆ ಆಳವಾದ ಜ್ಞಾನ, ವಿಶ್ಲೇಷಣಾ ಸಾಮರ್ಥ್ಯ ರೂಪಿಸುವಿಕೆ,  ಜೀವನೋಪಾಯ ಮತ್ತು ಉನ್ನತ ಶಿಕ್ಷಣಕ್ಕಾಗಿ ತಯಾರಿ, ಮತ್ತು ಯೌವನಕ್ಕೆ ಪಾದಾರ್ಪಣೆ

ಪ್ರೌಢ ಹಂತ

        ಶೇ ೮೫ ರಷ್ಟು ಮೆದುಳಿನ ಸರ್ವತೋಮುಖ ಬೆಳವಣೆಗೆಯು ೬ ವರ್ಷದ ಒಳಗೆ ಆಗುತ್ತದೆ –  ಆದ್ದರಿಂದ ECCE (Early childhood care and education)

        MHRD – National Mission on Foundational Litercy  and Numeracy ಸಹಯೋಗದಿಂದ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶ ಸರ್ಕಾರ ತತ್‌ ಕ್ಷಣ ಕ್ರಿಯಾಯೋಜನೆ ತಯಾರಿಸಬೇಕು. ಸ್ಟೇಜ್ ವೈಜ್‌ ಹಂತವಾರು ಗುರಿಗಳನ್ನು ಗುರುತಿಸುವುದು ಮತ್ತು ಅದರ ಪ್ರಗತಿಯನ್ನು ನಿಕಟವಾಗಿ ಪತ್ತೆ ಹಚ್ಚುವುದು ಹಾಗೂ ಮೇಲ್ವಿಚಾರಣೆ ಮಾಡುವುದು.

        PTR  – ಮಕ್ಕಳ ಶಿಕ್ಷಕರ ಅನುಪಾತವನ್ನು 30:1 ಮಾಡುವುದು ಹಾಗೂ ಸಾಮಾಜಿಕ ಮತ್ತು ಆರ್ಥಿಕ ಅನನುಕೂಲ ಮಕ್ಕಳಿಗೆ 25:1ನಿಗದಿಪಡಿಸುವುದು.

        National Repository of High Quality Resourcess – Diksha ದಲ್ಲಿ ಪ್ರಾಂತೀಯ ಭಾಷೆಯಲ್ಲಿ ಸಂಪನ್ಮೂಲಗಳ ಶ್ರೀಮಂತಿಕೆ ಹೆಚ್ಚಿಸುವುದು.

        Area wise Data Base – ಪ್ರಾದೇಶಿಕವಾಗಿ ನಿವೃತ್ತ ಅಧಿಕಾರಿಗಳು, ಮಿಲಟರಿ ಆಫಿಸರ್, ಕೌಶಲಭರಿತ ವ್ಯಕ್ತಿಗಳು,ಹಳೆಯ ವಿದ್ಯಾರ್ಥಿಗಳು ಇವರ ಡಾಟಾ ಬೇಸ್‌ ತಯಾರಿ ಮಾಡುವುದು ಹಾಗೂ ಪ್ರಾದೇಶಿಕವಾಗಿ ಇವರ ಸದುಪಯೋಗವನ್ನು ಅಲ್ಲಿಯ ನೆರೆಹೊರೆ ಶಾಲೆಗಳಿಗೆ ಬಳಸುವ ಮೂಲಕ ಶಿಕ್ಷಕ ಮತ್ತು ವಿದ್ಯಾರ್ಥಿಗಳ ನಡುವಿನ ಅಂತರ ಕಡಿಮೆ ಮಾಡುವುದು. ಹೇಗೆಂದರೆ ಸ್ಥಳೀಯ ಭಾಷೆ ಹಾಗೂ ಕೌಶಲಗಳ ಸಹಾಯದಿಂದ

        ಸಾಕ್ಷರತೆಯ ಅಂಕಿ ಸಾಧನೆಗೆ ಸ್ಥಳೀಯ ಸಾರ್ವಜನಿಕ ಗ್ರಂಥಾಲಯ ಹಾಗೂ ಶಾಲೆಯ ಗ್ರಂಥಾಲಯವನ್ನು ಉನ್ನತೀಕರಣ ಹಾಗೂ ಡಿಜಟಲೀಕರಣಗೊಳಿಸುವುದು

        ಬಿಯೂಟ ಯೋಜನೆಯನ್ನು ವಿಸ್ತರಿಸುವುದು

        ಅನಾರೋಗ್ಯದ ಕಾರಣದಿಂದಾಗುವ ಡ್ರಾಪ್‌ ಔಟ್‌ ಕಡಿಮೆ ಮಾಡಲು ಆರೋಗ್ಯದ ಅರಿವು ಮೂಡಿಸುವುದು

Curtailing Dropout Rates and Ensuring Universal Access

•          GER(Gross enrolment Ratio) –

6-8 = 90.9%, 9-10 = 79.3%, 11-12= 56.5%, ಈ ಹಂತದಲ್ಲಿ Drop out ಹೆಚ್ಚಾಗಿರುವುದನ್ನು ಕಾಣಬಹುದು. NSSO Survey 2017-18 ರಲ್ಲಿ ೬ ರಿಂದ 17 ವಯಸ್ಸಿನ ವಿದ್ಯಾರ್ಥಿಗಳಲ್ಲಿ 3.22 ಕೋಟಿ Drop out ಇರುವುದನ್ನು ಗುರುತಿಸಿದೆ. ಈ ಹಿನ್ನೆಲೆಯಲ್ಲಿ ಶೇ ೧೦೦ ರಷ್ಟು ದಾಖಲಾತಿಯನ್ನು 2030 ರ ಒಳಗೆ ಸಾಧಿಸುವಗೊಸ್ಕರ ಈ ನೀತಿ ಜಾರಿಗೊಳಿಸಿದೆ.

•          ಶಾಲೆ ಬಿಟ್ಟ ಮಕ್ಕಳನ್ನು ಕರೆತರಲು ಒಟ್ಟು ೨ ಉಪಕ್ರಮಗಳನ್ನು ಕೈಗೊಳ್ಳಲಾಗುವುದು.

೧ ಪೂರ್ವ ಪ್ರಾಥಮಿಕ ಶಾಲೆಯಿಂದ 12 ನೇ ತರಗತಿಯವರೆಗೆ ಪ್ರತಿ ಹಂತದಲ್ಲಿ ತರಬೇತಿ ಪಡೆದ ಶಿಕ್ಷಕರು, ಶಾಲೆಗಳಿಗೆ ಮೂಲ ಸೌಕರ್ಯಗಳು, ಶಾಲೆಗೆ ಬೆಂಬಲ ನೀಡುವುದು, ನವೀಕರಣ ಸುರಕ್ಷಿತ ಪ್ರಾಯೋಗಿಕ ಸಂವಹನ ಮತ್ತು ಹಾಸ್ಟೇಲ್‌ ಒದಗಿಸುವುದು. ವಿಶೇಷವಾಗಿ ಹೆಣ್ಣುಮಕ್ಕಳಿಗೆ ಸೂಕ್ತ ಕಲಿಯುವ ಅವಕಾಶ, ಗುಣಮಟ್ಟದ ಶಾಲೆ ಒದಗಿಸುವುದು ನಾಗರಿಕ ಸಮಾಜದೊಂದಿಗೆ ಪರ್ಯಾಯ ನವೀನ ಶಿಕ್ಷಣ ಕೇಂದ್ರಗಳ ಜಾರಿಗೊಳಿಸಿ, ವಲಸೆ ಮಕ್ಕಳು ಹಾಗೂ ಶಾಲೆಯಿಂದ ಹೊರಗುಳಿಯುತ್ತಿರುವ ಇತರೆ ಮಕ್ಕಳನ್ನು ಪತ್ತೆ ಹಚ್ಚಿ ಮುಖ್ಯವಾಹಿನಿಗೆ ತರುವುದು.

•          ವಿದ್ಯಾರ್ಥಿಗಳನ್ನು ಎಚ್ಚರಿಕೆಯಿಂದ ಪತ್ತೆ ಹಚ್ಚುವ ಮೂಲಕ ಸಾರ್ವತ್ರಿಕ ಭಾಗವಹಿಸುವಿಕೆಯನ್ನು ಸಾಧಿಸುವುದು. ೧೨ ನೇಯ ತರಗತಿಯವರೆಗೆ ಸಮಾನ ಮತ್ತು ಗುಣಮಟ್ಟ ಶಿಕ್ಷಣ ಒದಗಿಸಲು ೧೮ ವರ್ಷ ವಯಸ್ಸಿನ ಎಲ್ಲ ಮಕ್ಕಳಿಗೆ ಸೂಕ್ತ ಸೌಲಭ್ಯ ಜಾರಿಗೊಳಿಸುವುದು

•          ಡ್ರಾಪ್‌ ಔಟ್‌ ಹೊಂದಿರುವ ಸ್ಥಳಗಳಲ್ಲಿ ಸ್ಥಳೀಯ ಭಾಷೆ ಹೊಂದಿರುವ ಶಿಕ್ಷಕರು ಹಾಗೂ ಆಕರ್ಷಕವಾಗಿ ಉಪಯುಕ್ತವಾಗಿಸಲು ಕೂಲಂಕುಷವಾಗಿ ಪರಿಶೀಲನೆ ಮಾಡುವುದು

•          ಸಾಮಾಜಿಕ ಹಾಗೂ ಆರ್ಥಿಕ ಅನನುಕೂಲ ಗುಂಪುಗಳಿಗೆ ವಿಶೇಷ ಒತ್ತು ನೀಡಿ ಎಲ್ಲಾ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗುವಂತೆ ಶಿಕ್ಷಣದ ವ್ಯಾಪ್ತಿ ಸುಲಭಗೊಳಿಸಲು ವಿಸ್ತರಿಸಲಾಗುವುದು. ಔಪಚಾರಿಕ ಹಾಗೂ ಅನೌಪಚಾರಿಕ ಶಿಕ್ಷಣದ ವಿಧಾನಗಳನ್ನು ಒಳಗೊಂಡ ಬಹುಮಾರ್ಗಗಳನ್ನು ಜಾರಿಗೊಳಿಸುವುದು. National Institute of Open Schooling ಗಳನ್ನು ವಿಸ್ತರಿಸಲಾಗುವುದು ಮತ್ತು ಬಲಪಡಿಸಲಾಗುವುದು. ಯಾರು ಭೌತಿಕ ಶಾಲೆಗಳಿಗೆ ಹೋಗಲು ಸಾಧ್ಯವಾಗುವುದಿಲ್ಲವೋ ಅವರಿಗಾಗಿ Open School ಜಾರಿ ಮಾಡಲಾಗುವುದು. ಇದು ವಯಸ್ಕರ ಶಿಕ್ಷಣಕ್ಕೂ ಅನ್ವಯಿಸುವುದು.

•          ಸಹಚರ ಬೋಧನೆಗೆ ಒತ್ತು ನೀಡುವುದು ಮತ್ತು  ವಿಜ್ಞಾನಿಗಳು, ನಿವೃತ್ತರು, ಕುಶಲಕರ್ಮಿಗಳು, ಸರಕಾರಿ ನೌಕರರು, ಹಳೆಯ ವಿದ್ಯಾರ್ಥಿಗಳ ಡಾಟಾ ಬೇಸ್‌ ತಯಾರಿಸಿ ಬಳಸುವುದು

ಪಠ್ಯಕ್ರಮ

•          ಪಠ್ಯಕ್ರಮವನ್ನು ಕಡಿತಗೊಳಿಸಿ, ಪಠ್ಯಕ್ರಮದಲ್ಲಿ ಪ್ರಮುಖವಾಗಿ ಅಗತ್ಯತೆಗನುಗುಣವಾಗಿ ರಚನೆ ಮಾಡುವುದು. ಹೆಚ್ಚು ವಿಮರ್ಶಾತ್ಮಕ ಚಿಂತನೆ ಹಾಗೂ ಸಮಗ್ರತೆಗೆ ಒತ್ತು ನೀಡುವುದು. ಅನ್ವೇಷಣೆ, ಅವಿಷ್ಕಾರ ವಿಶ್ಲೇಷಣೆ ಆಧರಿತ ಕಲಿಕೆಗೆ ಒತ್ತು ನೀಡುವುದು.

•          ಪರಿಕಲ್ಪನೆ, ವಿಚಾರಾತ್ಮಕ, ಅನ್ವಯಿಕ, ಸಮಸ್ಯೆ ಪರಿಹಾರ ಆಧರಿತ ಕಲಿಕಾಂಶಗಳ ತಯಾರಿಕೆ

•          ಕಲಿಕಾ ಬೋಧನಾ ಪ್ರಕ್ರಿಯೆಯನ್ನು ಸಂವಾದಾತ್ಮಕ ರೀತಿಯಲ್ಲಿ ನಡೆಸುವುದು. ಪ್ರಶ್ನೆಗಳನ್ನು ಪ್ರೋತ್ಸಾಹಿಸುವ ಹಾಗೂ ತರಗತಿಗಳಲ್ಲಿ ನಿಯಮಿತವಾಗಿ ಮೋಜು, ಸೃಜನಶೀಲತೆ, ಸಹಕಾರ ಮತ್ತು ಆಳ ಅನುಭವಿಕ ಕಲಿಕೆಗೆ, ಪರಿಶೋಧನ ಚಟುವಟಿಕೆಗೆ ಒತ್ತು ನೀಡುವುದು.

•          ಈ ಮೇಲಿನ ಎಲ್ಲ ಅಂಶಗಳು ಒಳಗೊಳ್ಳುವಂತೆ ಎಸ್‌ ಸಿ ಇ ಆರ್‌ ಟಿ ಸಂಯೋಜನೆಯೊಂದಿಗೆ ಪಠ್ಯಕ್ರಮವನ್ನು ಎನ್‌ ಸಿ ಇ ಆರ್‌ ಟಿ ರಚಿಸುವುದು

•          ಅನುಭವಿಕ ಕಲಿಕೆ ಎಲ್ಲ ಹಂತಗಳಲ್ಲೂ ಅನುಭವಿಕೆ ಕಲಿಕೆ ಹಾಗೂ ಸಾಮರ್ಥ್ಯ ಆಧರಿತ ಕಲಿಕೆಗೆ ಒತ್ತು ನೀಡುವುದು

•          ಕ್ರೀಡೆ ಸಂಯೋಜಿತ ಕಲಿಕೆ ಮೂಲಕ ಪಿಟ್‌ನೆಸ್‌ ಮಟ್ಟ ಹೆಚ್ಚಿಸಿ ಫಿಟ್‌ ಇಂಡಿಯಾ ಮೂವ್‌ಮೇಂಟ್ ಮಾಡುವುದು

•          ಕೋರ್ಸ ಆಯ್ಕೆಗಳಲ್ಲಿ ನಮ್ಯತೆ ಮಾಧ್ಯಮಿಕ ಶಾಲೆಗಳಲ್ಲಿ ದೈಹಿಕ ಶಿಕ್ಷಣ, ಕಲೆ, ಕರಕುಶಲ ಮತ್ತು ವೃತ್ತಿಪರ ಕೌಶಲ ಒಳಗೊಂಡಂತೆ ಆಯ್ಕೆಯಲ್ಲಿ ನಮ್ಯತೆ ತರುವುದು. (ಆಯ್ಕೆಯಲ್ಲಿ ವಿಜ್ಞಾನ ಕಲೆ ಎಂಬ ತಾರತಮ್ಯತೆ ಇಲ್ಲ)

•          ಬಹುಭಾಷಾ ಮತ್ತು ಭಾಷೆಯ ಶಕ್ತಿಗೆ ಒತ್ತು ನೀಡುವುದು 3-5= ಮಾತೃಭಾಷೆ, 6-8= ೨ ಭಾಷೆಗಳ ಕಲಿಕೆ, 9-12 ತ್ರಿಭಾಷಾ ಸೂತ್ರ

•          ರಾಜ್ಯ ಸರ್ಕಾರ, ಸಚಿವಾಲಯ, ತಜ್ಞ ಸಂಸ್ಥೆಗಳು, ಕೇಂದ್ರದ ಸಂಬಂಧಿತ ಇಲಾಖೆಗಳ ಸಂಯೋಜನೆಯೊಂದಿಗೆ NCFSE – National Curriculam Framework for School education ಇದನ್ನು NCERT ಮಾಡುವುದು. 5-10 ವರ್ಷಕ್ಕೊಮ್ಮೆ ಮರುಪರಿಶೀಲನೆ ಮಾಡುವುದು ಮತ್ತು ನವೀಕರಿಸುವುದು

•          ವಿದ್ಯಾರ್ಥಿಗಳ ಅಭಿವೃದ್ಧಿಗೆ ಮೌಲ್ಯಮಾಪನ ರಚನಾತ್ಮಕವಾಗಿರುತ್ತದೆ. 360 ಡಿಗ್ರಿ ಬಹುಆಯಾಮದ ಮೌಲ್ಯಮಾಪನ ಜಾರಿಗೊಳಿಸಲಾಗುವುದು. ಜ್ಞಾನಾತ್ಮಕ, ಭಾವನಾತ್ಮಕ, ಸೈಕೋಮೋಟಾರ ಡೊಮೈನ್‌ ಹೊಂದಿದೆ ಹಾಗೂ ಸ್ವಮೌಲ್ಯಮಾಪನ, ಸಹಚರ ಮೌಲ್ಯಮಾಪನ, ಶಿಕ್ಷಕರ ಮೌಲ್ಯಮಾಪನ ಹಾಗೂ ಪಾಲಕರ ಮೌಲ್ಯಮಾಪನವನ್ನು ಒಳಗೊಂಡಿದೆ.

•          ಬೋರ್ಡ ಪರೀಕ್ಷೆಗಳು 10 ಮತ್ತು 12 ನೇಯ ತರಗತಿಗೆ ಮುಂದುವರೆಯುವುದ. ಮಂಡಳಿಯ ಪರೀಕ್ಷೆ ಮರುವಿನ್ಯಾಸಗೊಳಿಸಲಾಗುವುದು.ಸಮಗ್ರ ಅಭಿವೃದ್ಧಿಗೆ ಪ್ರೋತ್ಸಾಹಿಸಿ ಅನೇಕ ವಿಷಯಗಳ ಆಯ್ಕೆಗೆ ಅವಕಾಶ ನೀಡುವುದು. ವೈಯಕ್ತಿಕ ಆಸಕ್ತಿಗೆ ಅನುಗುಣವಾಗಿ ಪರೀಕ್ಷೆ ನಡೆಯುವುದು. ವಸ್ತುನಿಷ್ಠ ಹಾಗೂ ವಿವರಣಾತ್ಮಕ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.

•          ಕಲೆ ಏಕೀಕರಣದಿಂದ ಶಿಕ್ಷಣ ಮತ್ತು ಸಾಂಸ್ಕೃತಿಕ ಕಲಾ ಸಂಯೋಜಿತ ವಿಧಅನ ಮೂಲಕ ಶಿಕ್ಷಣ ಮತ್ತು ಸಂಸ್ಕೃತಿಯ ನಡುವಿನ ಸಂಪರ್ಕ ಬಲಪಡಿಸುವುದು

•          ಕ್ರೀಡೆ ಸಂಯೋಜಿತ ಕಲಿಕೆ ಮೂಲಕ ಪಿಟ್‌ನೆಸ್‌ ಮಟ್ಟ ಹೆಚ್ಚಿಸಿ ಫಿಟ್‌ ಇಂಡಿಯಾ ಮೂವ್‌ಮೇಂಟ್ ಮಾಡುವುದು

•          ಕೋರ್ಸ ಆಯ್ಕೆಗಳಲ್ಲಿ ನಮ್ಯತೆ ಮಾಧ್ಯಮಿಕ ಶಾಲೆಗಳಲ್ಲಿ ದೈಹಿಕ ಶಿಕ್ಷಣ, ಕಲೆ, ಕರಕುಶಲ ಮತ್ತು ವೃತ್ತಿಪರ ಕೌಶಲ ಒಳಗೊಂಡಂತೆ ಆಯ್ಕೆಯಲ್ಲಿ ನಮ್ಯತೆ ತರುವುದು. (ಆಯ್ಕೆಯಲ್ಲಿ ವಿಜ್ಞಾನ ಕಲೆ ಎಂಬ ತಾರತಮ್ಯತೆ ಇಲ್ಲ)

•          ಬಹುಭಾಷಾ ಮತ್ತು ಭಾಷೆಯ ಶಕ್ತಿಗೆ ಒತ್ತು ನೀಡುವುದು 3-5= ಮಾತೃಭಾಷೆ, 6-8= ೨ ಭಾಷೆಗಳ ಕಲಿಕೆ, 9-12 ತ್ರಿಭಾಷಾ ಸೂತ್ರ

•          ರಾಜ್ಯ ಸರ್ಕಾರ, ಸಚಿವಾಲಯ, ತಜ್ಞ ಸಂಸ್ಥೆಗಳು, ಕೇಂದ್ರದ ಸಂಬಂಧಿತ ಇಲಾಖೆಗಳ ಸಂಯೋಜನೆಯೊಂದಿಗೆ NCFSE – National Curriculam Framework for School education ಇದನ್ನು NCERT ಮಾಡುವುದು. 5-10 ವರ್ಷಕ್ಕೊಮ್ಮೆ ಮರುಪರಿಶೀಲನೆ ಮಾಡುವುದು ಮತ್ತು ನವೀಕರಿಸುವುದು

•          ವಿದ್ಯಾರ್ಥಿಗಳ ಅಭಿವೃದ್ಧಿಗೆ ಮೌಲ್ಯಮಾಪನ ರಚನಾತ್ಮಕವಾಗಿರುತ್ತದೆ. 360 ಡಿಗ್ರಿ ಬಹುಆಯಾಮದ ಮೌಲ್ಯಮಾಪನ ಜಾರಿಗೊಳಿಸಲಾಗುವುದು. ಜ್ಞಾನಾತ್ಮಕ, ಭಾವನಾತ್ಮಕ, ಸೈಕೋಮೋಟಾರ ಡೊಮೈನ್‌ ಹೊಂದಿದೆ ಹಾಗೂ ಸ್ವಮೌಲ್ಯಮಾಪನ, ಸಹಚರ ಮೌಲ್ಯಮಾಪನ, ಶಿಕ್ಷಕರ ಮೌಲ್ಯಮಾಪನ ಹಾಗೂ ಪಾಲಕರ ಮೌಲ್ಯಮಾಪನವನ್ನು ಒಳಗೊಂಡಿದೆ.

•          ಬೋರ್ಡ ಪರೀಕ್ಷೆಗಳು 10 ಮತ್ತು 12 ನೇಯ ತರಗತಿಗೆ ಮುಂದುವರೆಯುವುದ. ಮಂಡಳಿಯ ಪರೀಕ್ಷೆ ಮರುವಿನ್ಯಾಸಗೊಳಿಸಲಾಗುವುದು.ಸಮಗ್ರ ಅಭಿವೃದ್ಧಿಗೆ ಪ್ರೋತ್ಸಾಹಿಸಿ ಅನೇಕ ವಿಷಯಗಳ ಆಯ್ಕೆಗೆ ಅವಕಾಶ ನೀಡುವುದು. ವೈಯಕ್ತಿಕ ಆಸಕ್ತಿಗೆ ಅನುಗುಣವಾಗಿ ಪರೀಕ್ಷೆ ನಡೆಯುವುದು. ವಸ್ತುನಿಷ್ಠ ಹಾಗೂ ವಿವರಣಾತ್ಮಕ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.

•          ಬೋರ್ಡ ಪರೀಕ್ಷೆಯ ನಂತರ Imporvement ಗಾಗಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ.

•          ಎನ್‌ ಸಿ ಇ ಆರ್ ಟಿ ಹಾಗೂ ಎಸ್‌ ಸಿ ಇ ಆರ್ ಟಿ ಬೋರ್ಡ ಪರೀಕ್ಷೆಯ ವಿನ್ಯಾಸವನ್ನು ನಿರ್ಧರಿಸುವವು.

•          3,5,8,10,12,ಸೂಕ್ತ ಪ್ರಾಧಿಕಾರದಿಂದ ಪರೀಕ್ಷೆ. 5,8,10,12 ನೇ ತರಗತಿಗೆ ನೈಜ ಜೀವನಕ್ಕೆ ಅನ್ವಯಿಸುವ ಪ್ರಶ್ನೆಗಳನ್ನು ಮೌಲ್ಯಮಾಪನದಲ್ಲಿ ಅಳವಡಿಸುವುದು.

•          PARAK (Performance Assessment Review and Analysis of Knowledge for Holistic Development) ಮೌಲ್ಯಮಾಪನ ಕೇಂದ್ರ ಸ್ಥಾಪನೆ. NAS, SAS ಮೇಲ್ವಿಚಾರಣೆ ಸಂಸ್ಥೆಗಳು ತಮ್ಮ ಅಧೀನದ ಶಾಲೆಗಳಿಗೆ ಮಾರ್ಗದರ್ಶನ ಮಾಡುವುದು.

ಶಿಕ್ಷಕರು

•          ಸಂಯೋಜಿತ ಬಿ ಎಡ್‌ ಮಾಡಿದ ಸ್ಥಳೀಯ ವ್ಯಕ್ತಿಗಳಿಗೆ ಸ್ಥಳೀಯ ಶಿಕ್ಷಕರಾಗಿ ನೇಮಕ. ಅತೀಯಾದ ಶಿಕ್ಷಕರ ವರ್ಗಾವಣೆ ತಡೆಹಿಡಿಯಲಾಗುವುದು.

•          ಟಿ ಇ ಟಿ ಗೆ ಒತ್ತು ಹಾಗೂ ಬಲಪಡಿಸುವಿಕೆ. ಖಾಸಗಿ ಶಾಲೆಗಳಲ್ಲಿ ಟಿ ಇ ಟಿ ಕಡ್ಡಾಯ

•          ಆರ್ಟ್, ದೈಹಿಕ, ಸಂಗೀತ ಶಿಕ್ಷಕರನ್ನು ಸ್ಕೋಲ್‌ ಕಾಂಪ್ಲೆಕ್ಷ ಮಾಡಿ ನೇಮಕ ಮಾಡಿಕೊಳ್ಳುವುದು.

•          CPD (Continuous Proffessional Development)ಗೆ ಒತ್ತು. ನಿರಂತರ ವೃತ್ತಿಪರ ಅಭಿವೃದ್ಧಿಗೆ ಕನಿಷ್ಠ ಒಂದು ವರ್ಷಕ್ಕೆ ೫೦ ಗಂಟೆ ಕಡ್ಡಾಯ. ಇದರಲ್ಲಿ ನಾಯಕತ್ವ ಹಾಗೂ ನಿರ್ವಹಣೆ  ಒಳಗೊಂಡಿರುತ್ತದೆ

•          CMP(Career Management and Progression) ವೃತ್ತಿ ನಿರ್ವಹಣೆ ಮತ್ತು ಪ್ರಗತಿ – ಅತ್ಯುತ್ತಮ ಕೆಲಸ ಮಾಡಿದ ಶಿಕ್ಷಕರಿಗೆ ಬಡ್ತಿ ಹಾಗೂ ವೇತನ ಹೆಚ್ಚಳ ಮಾಡುವುದು. ಕಾರ್ಯಕ್ಷಮತೆಗೆ ಆಧರಿತ ಬಡ್ತಿ ನೀಡುವುದು ಇನ್ನು ಬಡ್ತಿಗಾಗಿ ಸೇವಾವಧಿಯನ್ನು ಗಣನೆಗಿಲ್ಲ

•          ಗುಣಮಟ್ಟ ಹೆಚ್ಚಿಸಲು ಬಿ ಆರ್ ಸಿ ಹಾಗೂ ಡಯಟ್‌ ಮೂಲಕ ತರಬೇತಿ

•          ಶಿಕ್ಷಕರ ರಾಷ್ಟ್ರೀಯ ವೃತ್ತಿಪರ ಮಾನದಂಡಗಳನ್ನು NPST( National Proffessional standard for teachers) ತಯಾರಿಸುತ್ತದೆ.

•          NCTE  ಪುನಃರಚನೆಯಾಗಿ PSSB(Proffessional Standard Setting Body) ಯು ಜನರಲ್ Education Body ಕೆಳಗೆ ಬರುತ್ತದೆ.

•          ಶಿಕ್ಷಕರ ಕಾರ್ಯಕ್ಷಮತೆಯನ್ನು ಆವರ್ತಕ ಆಧಾರದಲ್ಲಿ 10 ವರ್ಷಕ್ಕೊಮ್ಮೆ ಮೌಲ್ಯಮಾಪನ ಮಾಡುತ್ತವೆ.

•          NPST- Pre education program ನ್ನು ಮಾಡುತ್ತವೆ

•          ವೇತನ ಮತ್ತು ಬಡ್ತಿಗಳು ಸೇವಾ ಜೇಷ್ಠತೆ ಆಧಾರದಲ್ಲಿ ನಿರ್ಧಾರವಾಗದೇ, ಅಪ್ರೈಜಲ್‌ ಆಧಾರದಲ್ಲಿ ಇರುತ್ತವೆ. ಇದು ಸ್ವ ಮೌಲ್ಯಮಾಪನ, ವಿದ್ಯಾರ್ಥಿಗಳು, ಪಾಲಕರು, ಸಹಚರ, ಹಾಗೂ ಅಧಿಕಾರಿಗಳ ಮೌಲ್ಯಮಾಪನ ಒಳಗೊಂಡಿರುತ್ತದೆ.

•          NCFTE ಯು NCTE  ಹಾಗೂ NCERT ಜೊತೆಗೂಡಿ 2021 ರೊಳಗೆ ಹೊಸ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟನ್ನು ರಚಿಸುವುದು. 5-10 ವರ್ಷಕ್ಕೊಮ್ಮೆ ಪರಿಷ್ಕರಣೆಗೆ ಒಳಪಡುವುದು.

Equitable and Inclusive Education : Learning For All

•          SEZ(Special education Zone) – ಆರ್ಥಿಕ ಹಾಗೂ ಸಾಮಾಜಿಕ ಅನನುಕೂಲ ಮಕ್ಕಳನ್ನು ಹೊಂದಿದ ಶಾಲೆಗಳನ್ನು SEZ ಎಂದು ಗುರುತಿಸಿ ಅಲ್ಲಿ ಹಾಸ್ಟೇಲ್‌, ಬಸ್‌ ಸೌಲಭ್ಯ,ಪೀ ರಿಯಾಯತಿ,ಹೀಗೆ ಎಲ್ಲ ಸೌಲಭ್ಯಗಳನ್ನು ನೀಡುವುದು

•          ರಕ್ಷಣಾ ಸಚಿವಾಲಯದಡಿಯಲ್ಲಿ ಎನ್‌ ಸಿ ಸಿ ಗೆ ಪ್ರೋತ್ಸಾಹ

School Complex

•          School Comlex – ನೆರೆಹೊರೆ ಶಾಲೆಯ ಗುಂಪು, ಪ್ರಯೋಗಾಲಯ, ಗ್ರಂಥಾಲಯ, ಕ್ರೀಡಾ ಸಾಮಗಿಗಳನ್ನುಬಳಕೆ ಮಾಡುವುದು ಹಾಗೂ ಸಂಗೀತ, ದೈಹಿಕ ಶಿಕ್ಷಕರು, ಸಂಗೀತ ಶಿಕ್ಷಕರು ನೆರೆಹೊರೆಯಲ್ಲಿ ಅನುಕೂಲಿಸುವುದು

Standard –setting and Accreditation

•          The Department of School education ಮೇಲ್ವಿಚಾರಕ ಹಾಗೂ ನೀತಿನಿರೂಪಣೆ(Police making) ಜವಾಬ್ದಾರಿ ಹೊಂದಿದೆ.

•          Directore of School education ಶಾಲಾ ಶಿಕ್ಷಣ ನಿರ್ದೇಶನಾಲಯವು ಶೈಕ್ಷಣಿಕ ಕಾರ್ಯಾಚರಣೆ ಮತ್ತು ಸೇವಾನಿಬಂಧನೆಗಳ ಬಗ್ಗೆ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತದೆ

ಹೀಗೆ ಒಟ್ಟಾರೆಯಾಗಿ ಈ ನಮ್ಮ ರಾಷ್ಟ್ರೀಯ ಶಿಕ್ಷಣ ನೀತಿ 2020 ಶಿಕ್ಷಣ ರಂಗದಲ್ಲಿ ಅಮೂಲಾಗ್ರಹ ಬದಲಾವಣೆಯ ಮೂಲಕ ಜಾಗತಿಕ ಮಟ್ಟದಲ್ಲಿ ವಿನೂತನವಾದ ವಿಭಿನ್ನವಾದ ದೇಶೀಯ ಸೊಗಡಿನ ವ್ಯವಸ್ಥೆಯ ಮೂಲಕ  ಕ್ರಂತಿಯನ್ನೇ ಮಾಡಲಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಹೀಗೆ ಇದು ಶಿಕ್ಷಣದಲ್ಲಿ ಹೊಸ ಆಶೆಯ ಚಿಗುರನ್ನು ಮೂಡಿಸಿದೆ.


ಶಿಕ್ಷಣ ನೀತಿಯ ಬಗ್ಗೆ  ಇರುವ ಈ ಲೇಖನ ಓದಿದ ನಂತರ ಈ ಶಿಕ್ಷಣ ನೀತಿಯ ಬಗ್ಗೆ ಒಂದಷ್ಟು ಭಿನ್ನಾಭಿಪ್ರಾಯಗಳು ಇರಬಹುದು. ದಯವಿಟ್ಟು ನಿಮ್ಮ ಅನಿಸಿಕೆಗಳನ್ನು ಲೇಖನರೂಪದಲ್ಲಿ ಬರೆದು ನಮಗೆ ಕಳಿಸಿ.ಇಲ್ಲ ಬಹುತೇಕ ಶಿಕ್ಷಕರಿದ್ದು ಇಂತಹ ವಿಚಾರಗಳ ಬಗ್ಗೆ ತೆರೆದ ಮನಸಿಂದ ಚರ್ಚೆಯಲ್ಲಿ ಬಾಗವಹಿಸುತ್ತೀರೆಂದು ನಂಬಿದ್ದೇನೆ.ಸಂಗಾತಿಗೆ ಬರೆಯುವ ಶಿಕ್ಷಕರುಗಳಿಂದ ಮುಕ್ತಚರ್ಚೆ ನಡೆಯಬಹುದೆಂದು ನಾನು ನಂಬಿದ್ದೇನೆ

One thought on “ ದೇಶಿಯ ಶಿಕ್ಷಣದ ಅಡಿಪಾಯಕ್ಕಾಗಿ ಹೊಸ ಶಿಕ್ಷಣ ನೀತಿ 

  1. ಶಿಕ್ಷಣದ ಹೊಸ ಪರ್ವಕಾಲ ಈ NEP 20-20ರಿಂದ ಆರಂಭವಾಗಿದೆ. ವಿದ್ಯಾರ್ಥಿಗಳಿಗೆ ಆಸಕ್ತಿಯ ವಿಷಯ ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡಲು ವಿಫುಲ ಅವಕಾಶ ನೀಡಿದೆ.ವಿದ್ಯಾರ್ಥಿಗಳು ವಿಫಲರಾದಾಗ ತಮಗೆ ಆ ವಿಷಯ ಇಷ್ಟ ಇರಲಿಲ್ಲ ತಂದೆ -ತಾಯಿ ಒತ್ತಾಯಕ್ಕೆ ತೆಗೆದುಕೊಂಡಿದ್ದೆ ಎಂದು ಕುಂಟು ನೆಪಕ್ಕೆ ಅವಕಾಶ ಇರೋದಿಲ್ಲ. Tallent ಗೆ ಮಾತ್ರ ಅವಕಾಶ ನೀಡಿದೆ.ಎಲ್ಲಕ್ಕಿಂತ ಮುಖ್ಯ ಬುನಾದಿ ಹಂತಕ್ಕೆ ಪ್ರಾಮುಖ್ಯತೆ ನೀಡಲಾಗಿದೆ.

Leave a Reply

Back To Top