ವಿಶೇಷ ಲೇಖನ
ದೇಶೀಯ ಶಿಕ್ಷಣದ ಅಡಿಪಾಯಕ್ಕಾಗಿ ಹೊಸ ಶಿಕ್ಷಣನೀತಿ
ಡಾ. ದಾನಮ್ಮ ಚ ಝಳಕಿ
ದೇಶೀಯ ಶಿಕ್ಷಣದ ಅಡಿಪಾಯಕ್ಕಾಗಿ ಹೊಸ ಶಿಕ್ಷಣನೀತಿ
ಶಿಕ್ಷಣ ದೇಶದ ಬೆನ್ನೆಲಬು.
ದೇಶದ ಸಂವಿಧಾನಿಕ ಮೌಲ್ಯಗಳನ್ನು ಹಾಗೂ ಆಶಯಗಳನ್ನು ಈಡೇರಿಸುವ ಮೂಲಕ ಜನಾಂಗವನ್ನು ಪ್ರಗತಿಪಥದಲ್ಲಿ ಸಾಗಿಸುವ ಮಹೋನ್ನತ ಕಾರ್ಯವನ್ನು ಶಿಕ್ಷಣ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಭಾರತದ ಶಿಕ್ಷಣ ವ್ಯವಸ್ಥೆಯ ಇತಿಹಾಸವನ್ನು ಇಣುಕಿ ನೋಡಿದಾಗ,ಅನೇಕ ವರದಿಗಳು,ಯೋಜನೆಗಳು ಆಯೋಗಗಳು, ಸಮಿತಿಗಳು ಹಾಗೂ ಶಿಕ್ಷಣ ನೀತಿಗಳು ನಮ್ಮ ದೇಶದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಅನೇಕ ಬದಲಾವಣೆಗಳನ್ನು ತಂದಿರುವುದು ನಮ್ಮ ಗಮನಕ್ಕೆ ಬರುತ್ತದೆ. ಈ ರೀತಿಯ ಆಯೋಗಗಳಲ್ಲಿ ಸ್ವತಂತ್ರ್ಯಪೂರ್ವದ ಹಾಗೂ ಸ್ವಾತಂತ್ಯ್ರಾನಂತರದ ಆಯೋಗಗಳನ್ನು, ವರದಿಗಳನ್ನು ಕಾಣಬಹುದಾಗಿದೆ.
ಈ ಹಿನ್ನೆಲೆಯಲ್ಲಿ ಸ್ವತಂತ್ರ್ಯದ ಪೂರ್ವದಲ್ಲಿ 1854 ರ ವುಡ್ಸವರದಿ, 1882 ರ ಹಂಟರ್ ಆಯೋಗ, 1904 ರ ಭಾರತ ಸರಕಾರದ ಗೊತ್ತುವಳಿ, 1917 ರ ಸ್ಯಾಡ್ಲರ್ ಆಯೋಗ ಅಥವಾ ಕಲ್ಕತ್ತಾ ವಿಶ್ವವಿದ್ಯಾಲಯದ ಆಯೋಗ, 1929 ರ ಹರ್ಟಾಗ ಸಮಿತಿ ಮತ್ತು 1944 ರ ಸಾರ್ಜಂಟ್ ವರದಿ ಇತ್ಯಾದಿಗಳು. ಇವೆಲ್ಲವೂ ಸ್ವತಂತ್ಯ್ರ ಪೂರ್ವದಲ್ಲಿ ಶಿಕ್ಷಣ ವ್ಯವಸ್ಥೆಯ ಬದಲಾವಣೆಗಳಿಗೆ ಕಾರಣವಾದರೂ ಸಹ ಈ ಇವೆಲ್ಲವೂ ಭಾರತದ ಸಮೃದ್ಧಿಗಾಗಿ ಇರದೇ ಬ್ರಿಟಿಷರ ಸೇವೆಗಾಗಿ ಇತ್ತು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ.
ಇನ್ನು ಸ್ವತಂತ್ರ್ಯಾ ನಂತರದಲ್ಲಿ 1948-49 ರ ವಿಶ್ವವಿದ್ಯಾಲಯ ಶಿಕ್ಷಣ ಆಯೋಗ (ರಾಧಾಕೃಷ್ಣನ್ ಆಯೋಗ), 1952-53 ರ ಮಾಧ್ಯಮಿಕ ಶಿಕ್ಷಣ ಆಯೋಗ( ಮುದಲಿಯಾರಶಿಕ್ಷಣ ಆಯೋಗ), 1964-66 ಭಾರತೀಯ ಶಿಕ್ಷಣ ಆಯೋಗ ಅಥವಾ ಕೊಠಾರಿ ಆಯೋಗ, 1986 ರ ರಾಷ್ಟ್ರೀಯ ಶಿಕ್ಷಣ ನೀತಿ ಇತ್ಯಾದಿಗಳು ಶಿಕ್ಷಣದಲ್ಲಿ ಅನೇಕ ಬದಲಾವಣೆಗಳಿಗೆ ಕಾರಣವಾದವು.
ಆದಾಗ್ಯೂ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಪೂರ್ವಪ್ರಾಥಮಿಕ ಶಿಕ್ಷಣಕ್ಕೆ ಇನ್ನಷ್ಟು ಒತ್ತು ಕೊಟ್ಟು ಶೈಕ್ಷಣಿಕಹಂತಗಳ ಒಳಗೆ ಅದನ್ನು ಪರಿಗಣಿಸುವ ಅವಶ್ಯಕತೆ ಇತ್ತು.ಏಕೆಂದರೆ 3ವರ್ಷದ ಬುದ್ಧಿ ನೂರುವರ್ಷದ ತನಕ ಎಂಬ ಹಿರಿಯರು ಹೇಳಿದ ಅನುಭವದ ಮಾತುಗಳಂತೆ ಶಿಕ್ಷಣವ್ಯವಸ್ಥೆಯಲ್ಲಿ ಮಗುವಿನ ಬೆಳವಣಿಗೆಯ ಅತೀ ಪ್ರಮುಖ ಹಂತವನ್ನು 3 ವರ್ಷದಿಂದಲೇ ಪರಿಗಣಿಸುವ ಅವಶ್ಯಕತೆ ಇತ್ತು. ಆದ್ದರಿಂದ ಇದು ಸಹ ಶೈಕ್ಷಣಿಕ ವ್ಯವಸ್ಥೆಯ ಭಾಗವಾಗಬೇಕಿತ್ತು. ಇನ್ನು ಪ್ರೌಢಹಂತದ ಶಿಕ್ಷಣ ವ್ಯವಸ್ಥೆಯಲ್ಲಿ ವಿಜ್ಞಾನ, ವಾಣಿಜ್ಯ ಹಾಗೂ ಕಲೆ ಎಂದು ನಿರ್ದಿಷ್ಟವಾಗಿ ಗೆರೆ ಎಳೆದು ವಿಭಿನ್ನ ವಿಷಯಗಳ ಆಸಕ್ತಿ ಹೊಂದಿದ ಮಗುವಿಗೆ ಅಡೆತಡೆಯಾಗಿತ್ತು. ಅಂದರೆ ೧೦ ನೆಯ ತರಗತಿಯನ್ನು ಓದಿದ ಮಗುವಿಗೆ ಗಣಿತ ಹಾಗೂ ಸಾಹಿತ್ಯದಲ್ಲಿ ಆಸಕ್ತಿ ಇದ್ದರೆ ಆ ವಿಷಯಗಳನ್ನು ಓದಲು ವಿಜ್ಞಾನದಲ್ಲಿ ಅಥವಾ ಕಲೆಯಲ್ಲಿ ಅವಕಾಶಗಳೇ ಇರಲಿಲ್ಲ.
ಅಲ್ಲದೇ ನಮ್ಮ ದೇಶ ಸ್ವತಂತ್ರ್ಯವಾಗಿ 75 ವರ್ಷಗಳು ಕಳೆದರೂ ನಿರುದ್ಯೋಗ ಹಾಗೂ ಬಡತನ ಕಡಿಮೆಯಾಗಿರಲಿಲ್ಲ.ಕಾರಣ ಕೌಶಲ್ಯಾಧಾರಿತ ಶಿಕ್ಷಣ ವ್ಯವಸ್ಥೆಗೆ ಒತ್ತು ಕೊಟ್ಟಿರಲಿಲ್ಲ. ಇನ್ನು ಕ್ರೀಡಾರಂಗದಲ್ಲಿ ಅಂತರಾಷ್ಟ್ರೀಯ ಆಟೋಟಗಳಲ್ಲಿ ಹಾಗೂ ಒಲಂಪಿಕ್ ಆಟಗಳಲ್ಲಿ ಪದಕಗಳು ತೃಪ್ತಿ ತರುವಷ್ಟು ಲಭಿಸಿಲ್ಲ. ಏಕೆಂದರೆ ಶಿಕ್ಷಣ ವ್ಯವಸ್ಥೆಯಲ್ಲಿ ಕ್ರೀಡೆಗೆ ಅಷ್ಟೊಂದು ಮಹತ್ವವನ್ನು ನೀಡದೇ ಕೇವಲ ಬೌದ್ಧಿಕಮಟ್ಟವನ್ನು ಅಳೆಯುವ ಅಂಕಗಳೇ ಮುಖ್ಯವಾಗಿಬಿಟ್ಟಿದ್ದವು.ಹೀಗೆ ಪಟ್ಟಿ ಮಾಡುತ್ತಾ ಹೋದರೆ ಶೈಕ್ಷಣಿಕ ವ್ಯವಸ್ಥೆಯಲ್ಲಿ ಇನ್ನೂ ಸಾಧಿಸಬೇಕಾಗಿರುವುದು ಬಹಳಷ್ಟಿದೆ. ಏಕೆಂದರೆ ನಮ್ಮ ದೇಶೀಯ ಕೌಶಲಗಳು ಹಾಗೂ ಶೈಕ್ಷಣಿಕ ಚಟುವಟಿಕೆಗಳು ನಮ್ಮ ಶಿಕ್ಷಣದ ಭಾಗವಾಗುವುದರ ಮೂಲಕ ದೇಶೀಯ ಶಿಕ್ಷಣದ ಸೊಗಡನ್ನು ಆನಂದಿಸುವ ವ್ಯವಸ್ಥೆಯ ಅವಶ್ಯಕತೆ ಇತ್ತು.
ಅಷ್ಟೇ ಅಲ್ಲದೇ ಸುಸ್ಥಿರ ಬೆಳವಣಿಗೆ ಕಾರ್ಯಸೂಚಿ 2030 (Agenda for Sustainable Development) ಇದರಗುರಿ 4 ರಲ್ಲಿ (ಎಸ್.ಡಿ.ಜಿ 4) ಪ್ರಸ್ತಾಪಿಸಲಾಗಿರುವ ಜಾಗತಿಕ ಶಿಕ್ಷಣ ಬೆಳವಣಿಗೆ ಕಾರ್ಯಸೂಚಿಯನ್ನು ಭಾರತ 2015 ರಲ್ಲಿ ಅಳವಡಿಸಿಕೊಂಡಿದ್ದು ಇದು 2030 ರ ವೇಳೆಗೆ ಪ್ರತಿಯೊಬ್ಬರಿಗೂ ಸಮಾವಿಷ್ಟವಾದ ಮತ್ತು ಸಮಾನವಾದ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಹಾಗೂ ಜೀವನ ಪರ್ಯಂತ ಕಲಿಕೆಯ ಸದಾವಕಾಶಗಳನ್ನು ಖಾತರಿಯಾಗಿ ಒದಗಿಸಿಕೊಡುವ ಉದ್ದೇಶವನ್ನು ಹೊಂದಿದೆ. ಇಂಥ ಉನ್ನತ ಗುರಿ ಸಾಧನೆ ಮಾಡಬೇಕಾದರೆ 2030 ರ ಸುಸ್ಥಿರ ಬೆಳವಣಿಗೆಯ ಕಾರ್ಯಸೂಚಿಯ ಎಲ್ಲ ಮಹತ್ವಪೂರ್ಣವಾದ ಉದ್ದೇಶಗಳನ್ನು ಮತ್ತು ಗುರಿಗಳನ್ನು ಸಾಧಿಸಲು ಸಾಧ್ಯವಾಗುವಂತಹ ಕಲಿಕೆಯನ್ನು ಪೋಷಿಸಿ ಅದಕ್ಕೆ ಬೆಂಬಲ ನೀಡಲು ಸಮರ್ಥವಾಗುವಂತೆ ನಮ್ಮ ಇಡೀ ಶಿಕ್ಷಣ ವ್ಯವಸ್ಥೆಯನ್ನು ಮರು ವಿನ್ಯಾಸ ಮಾಡುವ ಅಗತ್ಯತೆ ಇದೆ.
ವಾಸ್ತವವಾಗಿ, ವೇಗವಾಗಿ ಬದಲಾಗುತ್ತಿರುವ ಉದ್ಯೋಗವಕಾಶಗಳ ಸ್ಥಿತಿಗತಿಗಳು ಮತ್ತು ಜಾಗತಿಕ ಪರಿಸರ ವ್ಯವಸ್ಥೆ ಈ ಸನ್ನಿವೇಶಗಳಲ್ಲಿ ಮಕ್ಕಳು ಇಂದು ಕಲಿಯಬೇಕಾಗಿರುವುದುಮಾತ್ರವಲ್ಲ. ಅದಕ್ಕಿಂತಲೂ ಮಿಗಿಲಾಗಿ ಕಲಿಯುವುದು ಹೇಗೆಂದು ಕಲಿಯುವುದಕ್ಕೆ ಹೆಚ್ಚು ಮಹತ್ವ ಬರುತ್ತಿದೆ. ಹೀಗಾಗಿ ಇಂದು ಶಿಕ್ಷಣ ಎಂಬುದು ಪಠ್ಯಕ್ರಮಗಳಲ್ಲಿ ಪಡೆಯುವ ಜ್ಞಾನಸಂಚಯಕ್ಕಿಂತ ಮಿಗಿಲಾಗಿ ತಾರ್ಕಿಕವಾಗಿ ಇಲ್ಲವೇ ವಿಮರ್ಶಾತ್ಮಕವಾಗಿ ಹೇಗೆ ಆಲೋಚನೆ ಮಾಡಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು. ಯಾವ ರೀತಿಯಲ್ಲಿ ಸೃಜನಾತ್ಮಕವಾಗಿ ಮತ್ತು ಬಹುಶಿಸ್ತೀಯ ರೀತಿಯಲ್ಲಿ ಚಿಂತನೆ ನಡೆಸುವುದು. ಹೊಸ ಸಂಗತಿಗಳನ್ನು ಆವಿಷ್ಕರಿಸುವುದು, ಅಳವಡಿಸಿಕೊಳ್ಳುವುದು ಮತ್ತು ದಕ್ಕಿಸಿಕೊಳ್ಳುವುದುಹೇಗೆ, ಜ್ಞಾನಕ್ಷೇತ್ರಗಳಲ್ಲಿ ಹಾಗೂ ಬದಲಾಗುತ್ತಿರುವ ವಿಷಯವ್ಯಾಪ್ತಿಯಲ್ಲಿ ಹೊಸದನ್ನು ಮೈಗೂಡಿಸಿಕೊಳ್ಳುವುದುಹೇಗೆ ಇಂಥ ವಿಚಾರಗಳತ್ತ ಚಿಂತನೆ ನಡೆಸುತ್ತಿದೆ. ಇವತ್ತಿನ ಕಲಿಕೆಯ ಕ್ರಮ ಶಿಕ್ಷಣವನ್ನು ಇನ್ನೂಹೆಚ್ಚು ಪ್ರಾಯೋಗಿಕ, ಸಮಗ್ರವಾಗಿ ಸರ್ವವ್ಯಾಪಿಯಾಗಿ ಪ್ರಶ್ನೆಮೂಲವಾಗಿ ಮಾಡುವ ನಿಟ್ಟಿನಲ್ಲಿ ಬದಲಾಗುತ್ತಾ ಹೋಗಬೇಕು ಅಂತೆಯೇ ಅದು ಕಲಿಯುವವರನ್ನು ಕೇಂದ್ರವಾಗಿಟ್ಟುಕೊಳ್ಳಬೇಕು. ಚರ್ಚೆಯನ್ನು ಆಧಾರವಾಗಿಟ್ಟುಕೊಳ್ಳಬೇಕು.ಸುಲಭವಾಗಿ ಬದಲಾವಣೆಗೆ ಹೊಂದಿಕೊಳ್ಳುವಂತಿರಬೇಕು. ಇವುಗಳೊಟ್ಟಿಗೆ ಅದು ಆನಂದಪ್ರದಾಯಕವಾಗಿಕೂಡ ಇರಬೇಕು ಎಂಬುದನ್ನು ಒತ್ತಿ ಹೇಳಬೇಕಾಗಿಲ್ಲ. ಪಠ್ಯಕ್ರಮದಲ್ಲಿ ವಿಜ್ಞಾನ ಮತ್ತು ಗಣಿತಗಳ ಜೊತೆಯಲ್ಲಿ ಮೂಲ ಕಲಾ ವಿಷಯಗಳು, ಮಾನವಿಕಗಳು, ಆಟಗಳು, ಕ್ರೀಡೆಗಳು, ದೈಹಿಕದಾರ್ಢ್ಯ, ಭಾಷೆಗಳು, ಸಾಹಿತ್ಯ, ಸಂಸ್ಕೃತಿ ಇವೆಲ್ಲ ಸೇರಿರಬೇಕು. ಒಟ್ಟಿನಲ್ಲಿ ಕಲಿಯುವವರಲ್ಲಿ ಕಲಿಕೆಯ ಎಲ್ಲ ಮುಖಗಳನ್ನು ಮತ್ತು ಸಾಮರ್ಥ್ಯಗಳನ್ನು ಪಡಿಮೂಡಿಸುವಂತಿರಬೇಕು. ಕಲಿಯುವವರ ಪಾಲಿಗೆ ಕಲಿಕೆ ಸಮಗ್ರವಾಗಿ, ಉಪಯುಕ್ತವಾಗಿ ಹಾಗೂ ಜ್ಞಾನತೃಷೆಯನ್ನು ತಣಿಸುವಂತಹದಾಗಿ ಇರಬೇಕು. ಶಿಕ್ಷಣ ಚಾರಿತ್ರ್ಯವನ್ನು ನಿರ್ಮಾಣ ಮಾಡಬೇಕು. ಕಲಿಯುವವರ ಪಾಲಿಗೆ ಅದು ಸನ್ಮಾರ್ಗ ಬೋಧಕವಾಗಿ, ತಾರ್ಕಿಕವಾಗಿ, ಸಹಾನುಭೂತಿ ಸಂಪನ್ನವಾಗಿ, ಹಿತಕರವಾಗಿ ಇರಬೇಕಾದುದು ಅಲ್ಲದೇ ಅವರಿಗೆ ಉಪಯುಕ್ತವಾಗಿರುವ, ಲಾಭಪ್ರದವಾಗಿರುವ ಉದ್ಯೋಗವಕಾಶಗಳನ್ನುಒದಗಿಸುವಂತಿರಬೇಕು.
ಇದಕ್ಕೆಲ್ಲ ಉತ್ತರ ಎನ್ನುವಂತೆ ನಮ್ಮ ಹೊಸ ರಾಷ್ಟ್ರೀಯ ಶಿಕ್ಷಣನೀತಿ 2020 ಅಮೂಲಾಗ್ರ ಬದಲಾವಣೆಯೊಂದಿಗೆ ಹೊಸಯುಗಕ್ಕೆ ಕಾಲಿಟ್ಟಿದೆ.ಹಾಗಾದರೆ ಅದರಲ್ಲಿರುವ ಕೆಲವು ಪ್ರಮುಖ ಅಂಶಗಳನ್ನು ತಿಳಿಯೋಣ
ರಾಷ್ಟ್ರೀಯ ಶಿಕ್ಷಣ ನೀತಿ – 2020
THE GLOBAL EDUATION DEVELOPMENT AGENDA ದಡಿಯಲ್ಲಿ ಸುಸ್ಥಿರ ಅಭಿವೃದ್ಧಿ 2015 ನ್ನು ಅಳವಡಿಸಲಾಗಿತ್ತು ಇದರ ಗುರಿಯಾದ ಎಲ್ಲರಿಗೂ ಸಮಾನ ಶಿಕ್ಷಣ ಮತ್ತು ಜೀವನಪರ್ಯಂತ ಅವಕಾಶಗಳ ಕಲ್ಪಿಸುವಿಕೆಯನ್ನು ಸಾಧಿಸಲಾಗಲಿಲ್ಲ. ಅದನ್ನು 2030 ರವರೆಗೆ ಸಾಧಿಸುವಗೋಸ್ಕರ ಈ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದೆ.
ಶಿಕ್ಷಣ ವ್ಯವಸ್ಥೆಯ ಪ್ರಮುಖ ಉದ್ದೇಶ – ತರ್ಕಬದ್ಧ ಚಿಂತನೆಗೆ ಸಮರ್ಥರಾದ ಉತ್ತಮ ಮನುಷ್ಯರನ್ನು ಬೆಳೆಸುವುದು. ಸೃಜನಶೀಲತೆ, ಉತ್ತಮ ನೈತಿಕತೆ, ಮೌಲ್ಯಗಳು, ಸಹಾನುಭೂತಿ, ಅನುಭೂತಿ, ಧೈರ್ಯ, ಸ್ಥಿತಿಸ್ಥಾಪಕತ್ವ, ವೈಜ್ಞಾನಿಕ ಮನೋಭಾವ, ಇತ್ಯಾದಿಗಳ ಬೆಳವಣಿಗೆಯ ಆಶಯ ಹೊಂದಿದೆ.
ಮುನ್ನೋಟ
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಭಾರತ ಕೇಂದ್ರಿತ ಶಿಕ್ಷಣ ವ್ಯವಸ್ಥೆಯೊಂದಿಗೆ ಸರ್ವರಿಗೂ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ನಮ್ಮ ಸಮಾಜವನ್ನು ಒಂದು ಸುಸ್ಥಿರ, ಸಮಾನ ಹಾಗೂ ಜೀವಂತಿಕೆಯುಳ್ಳ ಸಮಾಜವನ್ನಾಗಿ ಮಾರ್ಪಡಿಸಲು ಶ್ರಮಿಸುತ್ತದೆ.ಈ ನೀತಿಯಂತೆ MHRD ಮಾನವ ಸಂಪನ್ಮೂಲ ಇಲಾಖೆ ಇನ್ನು ಮುಂದೆ ಕೇಂದ್ರ ಶಿಕ್ಷಣ ಇಲಾಖೆ ಎಂದು ಬದಲಾವಣೆ ಹೊಂದಲಿದೆ
ಈ ಶಿಕ್ಷಣ ನೀತಿಯು ಪ್ರಮುಖವಾಗಿ ೪ ವಿಭಾಗಗಳನ್ನುಹೊಂದಿದೆ.
1 School education – ಶಾಲಾಶಿಕ್ಷಣವ್ಯವಸ್ಥೆ
2 Higher Education – ಉನ್ನತಶಿಕ್ಷಣ
3 Other Key Areas of Focus – ಭಾಗ ೩ರಲ್ಲಿ ಇತರ ಕ್ಷೇತ್ರಗಳ ಮೇಲೆ ಗಮನ ಹರಿಸಲಾಗಿದೆ. ಉದಾ: ವೃತ್ತಿಶಿಕ್ಷಣ, ವಯಸ್ಕರ ಶಿಕ್ಷಣ, ಭಾರತೀಯ ಭಾಷೆ, ಕಲೆ ಹಾಗೂ ಸಂಸ್ಕೃತಿಯ ಪ್ರಚಾರ, ತಂತ್ರಜ್ಞಾನದ ಬಳಕೆಯನ್ನು ಖಚಿತಪಡಿಸುವುದು ಇತ್ಯಾದಿ
4 Making it Happen – ಇದರಲ್ಲಿ ಕೇಂದ್ರ ಶಿಕ್ಷಣ ಸಲಹಾ ಮಂಡಳಿ ಬಲಪಡಿಸುವಿಕೆ, ಹಣಕಾಸು ಹಾಗೂ ಎಲ್ಲರಿಗೂ ಕೈಗೆಟುಕುವ ಗುಣಮಟ್ಟದ ಶಿಕ್ಷಣ ಮತ್ತು ಅನುಷ್ಠಾನದ ಬಗ್ಗೆ ಚರ್ಚಿಸಲಾಗಿದೆ
ನೀತಿ ಅವಲೋಕನ – ಮುಖ್ಯಅಂಶಗಳು
ರಾಷ್ಟ್ರೀಯ ಶಿಕ್ಷಣ ನೀತಿ 2020 ರಲ್ಲಿ ಪ್ರಮುಖವಾಗಿ ಶಾಲಾಶಿಕ್ಷಣ,ಉನ್ನತಶಿಕ್ಷಣ,ಶಿಕ್ಷಕರ ಶಿಕ್ಷಣ ಮತ್ತು ತರಬೇತಿ, ವೃತ್ತಿಪರ ಶಿಕ್ಷಣ, ಔದ್ಯೋಗಿಕ ಶಿಕ್ಷಣ, ರಾಷ್ಟ್ರೀಯ ಸಂಶೋಧನಾ ಸಂಸ್ಥೆ, ಶಿಕ್ಷಣದಲ್ಲಿ ತಂತ್ರಜ್ಞಾನ, ವಯಸ್ಕರ ಶಿಕ್ಷಣ, ಭಾರತೀಯ ಭಾಷೆಗಳಿಗೆ ಉತ್ತೇಜನ, ಶಿಕ್ಷಣಕ್ಕಾಗಿ ಹಣಕಾಸು ಪೂರೈಕೆ, ರಾಷ್ಟ್ರೀಯ ಶಿಕ್ಷಣ ಆಯೋಗ, ಕಡ್ಡಾಯ ಶಿಕ್ಷಣ ಆರ್ ಟಿ ಇ ೩ ವರ್ಷದಿಂದ ೧೮ ವರ್ಷದವರೆಗೆ ವಿಸ್ತರಣೆ ಹೀಗೆ ಅನೇಕ ಅಂಶಗಳನ್ನು ಹೊಂದಿದ್ದು, ಅವುಗಳ ಬಗ್ಗೆ ವಿಸ್ತೃತವಾಗಿ ಚರ್ಚಿಗಳಾಗಿವೆ.
ರಾಷ್ಟ್ರೀಯ ಶಿಕ್ಷಣ ನೀತಿಯ ದೃಷ್ಠಿಕೋನ
ಪ್ರತಿಯೊಬ್ಬ ಪ್ರಜೆಗೂ ಸುಸ್ಥಿರ, ಸಮಾನ ಮತ್ತು ರೋಮಾಂಚಕವಾಗಿರುವಜ್ಞಾನವನ್ನು ಉನ್ನತ ಶಿಕ್ಷಣದ ಮೂಲಕ ಕಲ್ಪಿಸುವುದುಭಾರತವನ್ನು ಜಾಗತಿಕ ಜ್ಞಾನದ ಮೂಲಕ ಸುಪರ್ ಪಾವರ್ ದೇಶವನ್ನಾಗಿ ಮಾಡುವುದು. ಈ ಶಿಕ್ಷಣನೀತಿಯಲ್ಲಿ ಪಠ್ಯಕ್ರಮ ಹಾಗೂ ಬೋಧನಾ ಶಾಸ್ತ್ರದಿಂದ ಮೂಲಭೂತ ಕರ್ತವ್ಯಗಳ ಬಗ್ಗೆ ಆಳವಾದ ಗೌರವವನ್ನು ಮತ್ತು ಸಂವಿಧಾನಿಕ ಮೌಲ್ಯಗಳನ್ನು ವಿದ್ಯಾರ್ಥಿಗಳು ಅನ್ವಯಿಸಿಕೊಳ್ಳುವಂತೆಮಾಡುವುದು
ವಿದ್ಯಾರ್ಥಿಗಳು ದೇಶಪ್ರೇಮ ಹಾಗೂ ಜಗತ್ತಿನಲ್ಲಿ ಭಾರತದೇಶವನ್ನು ಮುಂದೆ ತರುವ ಜವಾಬ್ದಾರಿ ಹಾಗೂ ಬದ್ಧತೆ ಬೆಳೆಸುವುದು
ಶಾಲಾ ಶಿಕ್ಷಣ ವ್ಯವಸ್ಥೆ – 5+3+3+4
ಇಲ್ಲಿಯವರಗೆ 10+2+3 ಶಿಕ್ಷಣ ವಿನ್ಯಾಸವು ಜಾರಿಯಲ್ಲಿದ್ದನ್ನು ಕಾಣಬಹುದಾಗಿದೆ. ಈ ವ್ಯವಸ್ಥೆಯಲ್ಲಿ ಒಂದನೇಯ ತರಗತಿಯಿಂದ ಪ್ರಾರಂಭವನ್ನು ಗುರುತಿಸಬಹುದಾಗಿದೆ. ಆದರೆ ಇಲ್ಲಿ ಪೂರ್ವ ಪ್ರಾಥಮಿಕ ಹಂತವನ್ನು ಶಾಲಾ ವ್ಯವಸ್ಥೆಯ ಒಳಗೆ ತಂದಿರಲಿಲ್ಲ.ಇದೀಗ ರಾಷ್ಟ್ರೀಯ ಶಿಕ್ಷಣ ನೀತಿ 2020 ರಲ್ಲಿ 5+3+3+4 ಶಿಕ್ಷಣ ವಿನ್ಯಾಸವನ್ನು ಜಾರಿಗೊಳಿಸುವ ಬಗ್ಗೆ ಚರ್ಚಿಸುತ್ತಾ, ಪೂರ್ವ ಪ್ರಾಥಮಿಕ ಹಂತ ಅಂದರೆ 3 ನೇಯ ವಯಸ್ಸಿನಿಂದ ೮ ನೇಯ ವಯಸ್ಸಿನವರೆಗೆ ಅಂದರೆ 5 ವರ್ಷಗಳು ಬುನಾದಿ ಹಂತ ಎಂಬುದನ್ನು ಸಹ ಶಾಲಾ ಶಿಕ್ಷಣದ ವ್ಯವಸ್ಥೆಯ ಭಾಗವನ್ನಾಗಿಸಿದ್ದನ್ನು ಕಾಣಬಹುದಾಗಿದೆ. ಇದಕ್ಕೆ ಇಂಗ್ಲೀಷನಲ್ಲಿ Foundational ಹಂತ ಎಂದು ಗುರುತಿಸಿದ್ದಾರೆ
ಬುನಾದಿ ಹಂತ ( Foundational – ೩ರಿಂದ೮ವರ್ಷ) – ಪ್ರೀಪ್ರೈಮರಿಯ ೩ವರ್ಷ ಹಾಗೂ ೧&೨ನೇಯ ತರಗತಿಗಳು. ಅಂದರೆ ನರ್ಸರಿ, ಎಲ್ ಕೆಜಿ, ಯುಕೆ. ಜಿ ಹಾಗೂ 1 ಮತ್ತು 2 ನೇಯ ತರಗತಿಗಳು, ಹೀಗೆ ಒಟ್ಟು 5 ವರ್ಷದ ಅವಧಿ ಬುನಾದಿ ಹಂತದಲ್ಲಿ ಬರುತ್ತದೆ.ಇಲ್ಲಿ ಪುಸ್ತಗಳ ಭಾರ ತುಂಬಾ ಕಡಿಮೆ ಕೇವಲ ಆಟ, ಚಟುವಟಿಕೆ, ಹೊಸದನ್ನು ಹುಡುಕುವ ಆಧಾರಿತ ಕಲಿಕೆ ಇರುತ್ತದೆ. NCERT ಯಿಂದ ಪಠ್ಯಕ್ರಮ ರಚನೆಗೆ ಅವಕಾಶ ಕಲ್ಪಿಸಲಾಗಿದೆ.ಶೇ೮೫ರಷ್ಟುಮೆದುಳಿನ ಸರ್ವತೋಮುಖ ಬೆಳವಣಿಗೆಯು ೬ವರ್ಷದ ಒಳಗೆ ಆಗುತ್ತದೆ – ಆದ್ದರಿಂದ ECCE (Early childhood care and education)ಹಂತವನ್ನುಶಾಲಾಶಿಕ್ಷಣದ ಅಡಿಯಲ್ಲಿ ತರಲಾಗಿದೆ
ಪೂರ್ವಸಿದ್ಧತಾ ಹಂತ(Preparatory 8 ರಿಂದ 11 ವರ್ಷ) 3ರಿಂದ 5ನೇಯತರಗತಿಯವರೆಗಿನ ಶಿಕ್ಷಣ ಈ ಹಂತದಲ್ಲಿ ಬರುತ್ತದೆ, ಇಲ್ಲಿ ಭಾಷೆ, ಗಣಿತ, ವಿಜ್ಞಾನ, ಕಲೆ ಹಾಗೂ ಸಮಾಜವಿಜ್ಞಾನದ ಪರಿಚಯವು ಆಟಗಳ ಮೂಲಕ ಹಾಗೂ ಹೊಸದನ್ನು ಹುಡುಕುವ ಆಧಾರಿತ ಕಲಿಕೆಯ ಮೂಲಕ ಸಾಗುತ್ತದೆ, ಇದನ್ನು ರಚನಾತ್ಮಕ ಕಲಿಕೆಯ ಪ್ರಾರಂಭ ಎಂದು ಗುರುತಿಸಬಹುದು.
ಮಧ್ಯಮಹಂತ (Middle11 ರಿಂದ 14 ವರ್ಷ) ಇದು 6ರಿಂದ೮ನೇಯ ತರಗತಿಯವರೆಗಿನ ಶಿಕ್ಷಣವನ್ನು ಒಳಗೊಂಡಿದೆ. ಇಲ್ಲಿ ವಿಷಯಗಳ ಪರಿಕಲ್ಪನೆಗಳ ಕಲಿಕೆ ಮುಂದುವರಿಯಲಿದ್ದು ,ಹದಿಹರೆಯದ ಅನುಭವಗಳು ಸಹ ಸಮ್ಮಿಳಿತಗೊಳ್ಳುವವು.
ಪ್ರೌಢಹಂತ(Secondary14 ರಿಂದ 18 ವರ್ಷ) ಇದು 9ರಿಂದ 12 ನೇಯ ತರಗತಿಯವರೆಗಿನ ಶಾಲಾಶಿಕ್ಷಣದ ವ್ಯಾಪ್ತಿಯನ್ನು ಒಳಗೊಂಡಿದೆ,ಇಲ್ಲಿ ವಿಷಯಗಳ ಬಗ್ಗೆ ಆಳವಾದ ಜ್ಞಾನ, ವಿಶ್ಲೇಷಣಾ ಸಾಮರ್ಥ್ಯ ರೂಪಿಸುವಿಕೆ, ಜೀವನೋಪಾಯ ಮತ್ತುಉನ್ನತಶಿಕ್ಷಣಕ್ಕಾಗಿ ತಯಾರಿ, ಮತ್ತು ಯೌವನಕ್ಕೆ ಪಾದಾರ್ಪಣೆಯ ಅಂಶಗಳು ಇಲ್ಲಿ ಪ್ರಮುಖವಾಗಿವೆ.
ಇಲ್ಲಿ ಪ್ರಮುಖವಾಗಿ ಯಾರು ಭೌತಿಕ ಶಾಲೆಗಳಿಗೆ ಹೋಗಲು ಸಾಧ್ಯವಾಗುವುದಿಲ್ಲವೋ ಅವರಿಗಾಗಿ Open School ಜಾರಿಮಾಡಲಾಗುವುದು. ಇದು ವಯಸ್ಕರ ಶಿಕ್ಷಣಕ್ಕೂ ಅನ್ವಯಿಸುವುದು.ಅಲ್ಲದೇಸಹಚರ ಬೋಧನೆಗೆ ಒತ್ತು ನೀಡುವುದು ಮತ್ತು ವಿಜ್ಞಾನಿಗಳು, ನಿವೃತ್ತರು, ಕುಶಲಕರ್ಮಿಗಳು, ಸರಕಾರಿ ನೌಕರರು, ಹಳೆಯ ವಿದ್ಯಾರ್ಥಿಗಳ ಡಾಟಾ ಬೇಸ್ ತಯಾರಿಸಿ ಬಳಸುವುದನ್ನು ಸಹ ಇದು ಒಳಗೊಂಡಿದೆ.
ಪಠ್ಯಕ್ರಮ
• ಪಠ್ಯಕ್ರಮವನ್ನು ಕಡಿತಗೊಳಿಸಿ, ಪಠ್ಯಕ್ರಮದಲ್ಲಿ ಪ್ರಮುಖವಾಗಿ ಅಗತ್ಯತೆಗನುಗುಣವಾಗಿ ರಚನೆ ಮಾಡುವುದು. ಹೆಚ್ಚು ವಿಮರ್ಶಾತ್ಮಕ ಚಿಂತನೆ ಹಾಗೂ ಸಮಗ್ರತೆಗೆ ಒತ್ತು ನೀಡುವುದು. ಅನ್ವೇಷಣೆ, ಅವಿಷ್ಕಾರ ವಿಶ್ಲೇಷಣೆ ಆಧರಿತ ಕಲಿಕೆಗೆ ಒತ್ತು ನೀಡುವುದು ಇದರಲ್ಲಿ ಪ್ರಮಖವಾಗಿದೆ.
• ಪರಿಕಲ್ಪನೆ, ವಿಚಾರಾತ್ಮಕ, ಅನ್ವಯಿಕ, ಸಮಸ್ಯೆ ಪರಿಹಾರ ಆಧರಿತ ಕಲಿಕಾಂಶಗಳತಯಾರಿಕೆ
• ಕಲಿಕಾ ಬೋಧನಾ ಪ್ರಕ್ರಿಯೆಯನ್ನು ಸಂವಾದಾತ್ಮಕ ರೀತಿಯಲ್ಲಿ ನಡೆಸುವುದು. ಪ್ರಶ್ನೆಗಳನ್ನು ಪ್ರೋತ್ಸಾಹಿಸುವ ಹಾಗೂ ತರಗತಿಗಳಲ್ಲಿ ನಿಯಮಿತವಾಗಿ ಮೋಜು, ಸೃಜನಶೀಲತೆ, ಸಹಕಾರ ಮತ್ತು ಆಳ ಅನುಭವಿಕ ಕಲಿಕೆಗೆ, ಪರಿಶೋಧನ ಚಟುವಟಿಕೆಗೆ ಒತ್ತು ನೀಡುವುದನ್ನು ಇದು ಒಳಗೊಂಡಿದೆ
• ಈ ಮೇಲಿನ ಎಲ್ಲ ಅಂಶಗಳು ಒಳಗೊಳ್ಳುವಂತೆ ಎಸ್ ಸಿಇಆರ್ ಟಿ ಸಂಯೋಜನೆಯೊಂದಿಗೆ
ಪಠ್ಯಕ್ರಮವನ್ನು ಎನ್ ಸಿಇಆರ್ ಟಿ ರಚಿಸುವುದು ಎಂಬುದನ್ನು ಸಹ ಸ್ಪಷ್ಟಪಡಿಸಿದೆ.
• ಅನುಭವಿಕಕಲಿಕೆ – ಎಲ್ಲ ಹಂತಗಳಲ್ಲೂ ಅನುಭವಿಕೆ ಕಲಿಕೆ ಹಾಗೂ ಸಾಮರ್ಥ್ಯ ಆಧರಿತ ಕಲಿಕೆಗೆ ಒತ್ತುನೀಡುವುದನ್ನು ಸ್ಪಷ್ಟಪಡಿಸಿದೆ
• ಕ್ರೀಡೆ ಸಂಯೋಜಿತ ಕಲಿಕೆ ಮೂಲಕ ಫಿಟ್‌ನೆಸ್ ಮಟ್ಟ ಹೆಚ್ಚಿಸಿ ಫಿಟ್ ಇಂಡಿಯಾ ಮೂವ್‌ಮೇಂಟ್ಮಾಡುವುದರ ಮೂಲಕ ಹೊಸ ಆಯಾಮವನ್ನೇ ಸೃಷ್ಠಿಸಿದೆ
• ಕೋರ್ಸ ಆಯ್ಕೆಗಳಲ್ಲಿ ನಮ್ಯತೆ – ಮಾಧ್ಯಮಿಕ ಶಾಲೆಗಳಲ್ಲಿದೈಹಿಕಶಿಕ್ಷಣ, ಕಲೆ, ಕರಕುಶಲ ಮತ್ತು ವೃತ್ತಿಪರ ಕೌಶಲ ಒಳಗೊಂಡಂತೆ ಆಯ್ಕೆಯಲ್ಲಿ ನಮ್ಯತೆ ತರುವುದು. ಆಯ್ಕೆಯಲ್ಲಿ ವಿಜ್ಞಾನಕಲೆ ಎಂಬ ತಾರತಮ್ಯತೆ ಇಲ್ಲ ಎಂಬುದನ್ನು ತಿಳಿಸುವ ಮೂಲಕಬವಿಭಿನ್ನ ಆಸಕ್ತಿಗಳಿಗೆ ಅವಕಾಶಗಳನ್ನು ಕಲ್ಪಿಸಿದೆ
• ಬಹುಭಾಷಾ ಮತ್ತು ಭಾಷೆಯ ಶಕ್ತಿಗೆ ಒತ್ತುನೀಡುವುದ ನ್ನು ಒಳಗೊಂಡಿದೆ. ಅಂದರೆ 3-5ನೇಯತರಗತಿಗಳಿಗೆಮಾತೃಭಾಷೆ, 6ರಿಂದ8ನೇಯ ತರಗತಿಗಳವರೆಗೆ2ಭಾಷೆಗಳಕಲಿಕೆ, 9ರಿಂದ12 ನೇಯತರಗತಿಗಳವರೆಗೆತ್ರಿಭಾಷಾಸೂತ್ರವನ್ನು ತಿಳಿಸಿದೆ.
• ರಾಜ್ಯಸರ್ಕಾರ, ಸಚಿವಾಲಯ, ತಜ್ಞಸಂಸ್ಥೆಗಳು, ಕೇಂದ್ರದಸಂಬಂಧಿತಇಲಾಖೆಗಳಸಂಯೋಜನೆಯೊಂದಿಗೆ NCFSE – National Curriculam Framework for School education ಇದನ್ನು NCERT ಮಾಡುವುದು. 5-10 ವರ್ಷಕ್ಕೊಮ್ಮೆಮರುಪರಿಶೀಲನೆಮಾಡುವುದುಮತ್ತುನವೀಕರಿಸುವುದು ಎಂಬುದನ್ನು ಸ್ಪಷ್ಟಪಡಿಸಿದೆ.
• ವಿದ್ಯಾರ್ಥಿಗಳಅಭಿವೃದ್ಧಿಗೆಮೌಲ್ಯಮಾಪನರಚನಾತ್ಮಕವಾಗಿರುತ್ತದೆ. 360 ಡಿಗ್ರಿಬಹುಆಯಾಮದಮೌಲ್ಯಮಾಪನಜಾರಿಗೊಳಿಸಲಾಗುವುದು. ಜ್ಞಾನಾತ್ಮಕ, ಭಾವನಾತ್ಮಕ, ಸೈಕೋಮೋಟಾರಡೊಮೈನ್ ಹೊಂದಿದೆಹಾಗೂಸ್ವಮೌಲ್ಯಮಾಪನ, ಸಹಚರಮೌಲ್ಯಮಾಪನ, ಶಿಕ್ಷಕರಮೌಲ್ಯಮಾಪನಹಾಗೂಪಾಲಕರಮೌಲ್ಯಮಾಪನವನ್ನುಸಹಇದುಒಳಗೊಂಡಿದೆ.
• ಬೋರ್ಡಪರೀಕ್ಷೆಗಳು 10 ಮತ್ತು 12 ನೇಯತರಗತಿಗೆಮುಂದುವರೆಯುವುದರ ಬಗ್ಗೆ ತಿಳಿಸುತ್ತಾ. ಮಂಡಳಿಯಪರೀಕ್ಷೆಯನ್ನುಮರುವಿನ್ಯಾಸಗೊಳಿಸಲಾಗುವುದರ ಬಗ್ಗೆ ಮಾಹಿತಿ ಒದಗಿಸಿದೆ.ಸಮಗ್ರಅಭಿವೃದ್ಧಿಗೆಪ್ರೋತ್ಸಾಹಿಸಿಅನೇಕವಿಷಯಗಳಆಯ್ಕೆಗೆಅವಕಾಶನೀಡುವುದು. ವೈಯಕ್ತಿಕಆಸಕ್ತಿಗೆಅನುಗುಣವಾಗಿಪರೀಕ್ಷೆನಡೆಯುವುದು. ವಸ್ತುನಿಷ್ಠಹಾಗೂವಿವರಣಾತ್ಮಕಪ್ರಶ್ನೆಗಳನ್ನುಮೌಲ್ಯಾಂಕನಒಳಗೊಂಡಿರುತ್ತದೆಎಂಬುದನ್ನುವಿವರಿಸಿದೆಹಾಗೂಬೋರ್ಡಪರೀಕ್ಷೆಯನಂತರImporvementಗಾಗಿಪರೀಕ್ಷೆಬರೆಯಲುಅವಕಾಶನೀಡಲಾಗಿದೆ
• 3,5,8,10,12,ತರಗತಿಗಳಿಗೆಸೂಕ್ತಪ್ರಾಧಿಕಾರದಿಂದಪರೀಕ್ಷೆನಡೆಸುವುದರಬಗ್ಗೆಸೂಚನೆನೀಡುತ್ತಾ, 5,8,10,12 ನೇತರಗತಿಗೆನೈಜಜೀವನಕ್ಕೆಅನ್ವಯಿಸುವಪ್ರಶ್ನೆಗಳನ್ನುಮೌಲ್ಯಮಾಪನದಲ್ಲಿಅಳವಡಿಸುವುದರ ಬಗ್ಗೆ ಸಹ ತಿಳಿಸಿದೆ.
• PARAK (Performance Assessment Review and Analysis of Knowledge for Holistic Development) ಮೌಲ್ಯಮಾಪನಕೇಂದ್ರಸ್ಥಾಪನೆಯ ಬಗ್ಗೆ ತಿಳಿಸಿದೆ.ಅಲ್ಲದೇ NAS, SAS ಮೇಲ್ವಿಚಾರಣೆಸಂಸ್ಥೆಗಳುತಮ್ಮಅಧೀನದಶಾಲೆಗಳಿಗೆಮಾರ್ಗದರ್ಶನಮಾಡುವುದನ್ನು ಸೂಚಿಸಿದೆ
• ಕಲೆಏಕೀಕರಣದಿಂದಶಿಕ್ಷಣಮತ್ತುಸಾಂಸ್ಕೃತಿಕಕಲಾಸಂಯೋಜಿತವಿಧಾನಮೂಲಕಶಿಕ್ಷಣಮತ್ತುಸಂಸ್ಕೃತಿಯನಡುವಿನಸಂಪರ್ಕಬಲಪಡಿಸುವುದು ಈ ಶಿಕ್ಷಣ ನೀತಿಯ ಆಶಯವಾಗಿದೆ
• ಕೋರ್ಸಆಯ್ಕೆಗಳಲ್ಲಿನಮ್ಯತೆ – ಮಾಧ್ಯಮಿಕಶಾಲೆಗಳಲ್ಲಿದೈಹಿಕಶಿಕ್ಷಣ, ಕಲೆ, ಕರಕುಶಲಮತ್ತುವೃತ್ತಿಪರಕೌಶಲಒಳಗೊಂಡಂತೆಆಯ್ಕೆಯಲ್ಲಿನಮ್ಯತೆತರುವುದು. ಆಯ್ಕೆಯಲ್ಲಿವಿಜ್ಞಾನಕಲೆಎಂಬತಾರತಮ್ಯತೆಇಲ್ಲದಂತೆಮಾಡಿದೆ.
ಶಿಕ್ಷಕರು
• ಸಂಯೋಜಿತಬಿಎಡ್ ಮಾಡಿದಸ್ಥಳೀಯವ್ಯಕ್ತಿಗಳಿಗೆಸ್ಥಳೀಯಶಿಕ್ಷಕರಾಗಿನೇಮಕ ಮಾಡುವ ಪ್ರಕ್ರಿಯೆಯ ಬಗ್ಗೆ ತಿಳಿಸಿದೆ. ಅತೀಯಾದಶಿಕ್ಷಕರವರ್ಗಾವಣೆತಡೆಹಿಡಿಯಲಾಗುವುದರ ಬಗ್ಗೆ ಸಹ ಸ್ಪಷ್ಟತೆ ಇದರಲ್ಲಿದೆ
• ಟಿಇಟಿಗೆಒತ್ತುಹಾಗೂಬಲಪಡಿಸುವಿಕೆ. ಖಾಸಗಿಶಾಲೆಗಳಲ್ಲಿಟಿಇಟಿಕಡ್ಡಾಯ ಮಾಡುವುದನ್ನು ಇದು ಬೆಂಬಲಿಸುತ್ತದೆ.
• ಆರ್ಟ್, ದೈಹಿಕ, ಸಂಗೀತಶಿಕ್ಷಕರನ್ನುಸ್ಕೋಲ್ ಕಾಂಪ್ಲೆಕ್ಷಮಾಡಿನೇಮಕಮಾಡಿಕೊಳ್ಳುವುದರ ಬಗ್ಗೆ ಒತ್ತು ಕೊಟ್ಟಿದೆ.
• CPD (Continuous Proffessional Development)ಗೆಒತ್ತು. ನಿರಂತರವೃತ್ತಿಪರಅಭಿವೃದ್ಧಿಗೆಕನಿಷ್ಠಒಂದುವರ್ಷಕ್ಕೆ೫೦ಗಂಟೆಕಡ್ಡಾಯ. ಇದರಲ್ಲಿನಾಯಕತ್ವಹಾಗೂನಿರ್ವಹಣೆಒಳಗೊಂಡಿರುತ್ತದೆ ಎಂಬುದನ್ನು ತಿಳಿಸುತ್ತದೆ. ಬಹುಶಃ ಇಂದು ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಶಿಕ್ಷಕರಿಗೆ ರಾಜ್ಯಾದ್ಯಂತದಲ್ಲಿ ನಡೆಯುತ್ತಿರುವ ನಿಷ್ಟಾ ತರಬೇತಿಗಳು ಇದರ ಭಾಗವಾಗಿವೆ ಎನ್ನಬಹುದು
• CMP(Career Management and Progression) ವೃತ್ತಿ ನಿರ್ವಹಣೆ ಮತ್ತು ಪ್ರಗತಿ – ಅತ್ಯುತ್ತಮ ಕೆಲಸ ಮಾಡಿದ ಶಿಕ್ಷಕರಿಗೆ ಬಡ್ತಿ ಹಾಗೂ ವೇತನ ಹೆಚ್ಚಳ ಮಾಡುವುದು. ಕಾರ್ಯಕ್ಷಮತೆಗೆ ಆಧರಿತ ಬಡ್ತಿ ನೀಡುವುದು ಇನ್ನು ಬಡ್ತಿಗಾಗಿ ಸೇವಾವಧಿಯನ್ನು ಗಣನೆಗಿಲ್ಲ ಎಂಬುದನ್ನು ತಿಳಿಸುವ ಮೂಲಕ ಶಿಕ್ಷಕರಿಗೆ ಪ್ರೇರಣೆ ನೀಡಿದೆ
• ಗುಣಮಟ್ಟ ಹೆಚ್ಚಿಸಲು ಬಿಆರ್ಸಿ ಹಾಗೂ ಡಯಟ್ ಮೂಲಕ ತರಬೇತಿಯನ್ನು ಮುಂದುವರೆಸುವ ಬಗ್ಗೆ ತಿಳಿಸಿದೆ
• ಶಿಕ್ಷಕರ ರಾಷ್ಟ್ರೀಯ ವೃತ್ತಿಪರ ಮಾನದಂಡಗಳನ್ನು NPST( National Proffessional standard for teachers) ತಯಾರಿಸುತ್ತದೆ ಎಂಬುದನ್ನು ಸ್ಪಷ್ಟಪಡಿಸಿದೆ
• NCTE ಪುನಃರಚನೆಯಾಗಿ PSSB – Proffessional Standard Setting Bodyಯು ಜನರಲ್ Education Body ಕೆಳಗೆ ಬರುತ್ತದೆ ಎಂಬುದನ್ನು ತಿಳಿಸಿದೆ
• ಶಿಕ್ಷಕರ ಕಾರ್ಯಕ್ಷಮತೆಯನ್ನು ಆವರ್ತಕ ಆಧಾರದಲ್ಲಿ 10 ವರ್ಷಕ್ಕೊಮ್ಮೆ ಮೌಲ್ಯಮಾಪನ ಮಾಡುತ್ತವೆ ಎಂಬುದನ್ನು ವಿವರಿಸಿದೆ.
• NPST- Pre education program ನ್ನು ಸಹ ಮಾಡುವ ಆಲೋಚನೆಯನ್ನು ವ್ಯಕ್ತಪಡಿಸಿದೆ.
• ವೇತನ ಮತ್ತು ಬಡ್ತಿಗಳು ಸೇವಾಜೇಷ್ಠತೆ ಆಧಾರದಲ್ಲಿ ನಿರ್ಧಾರವಾಗದೇ, ಅಪ್ರೈಜಲ್ ಆಧಾರದಲ್ಲಿ ಇರುತ್ತವೆ. ಇದು ಸ್ವಮೌಲ್ಯಮಾಪನ, ವಿದ್ಯಾರ್ಥಿಗಳು, ಪಾಲಕರು, ಸಹಚರ, ಹಾಗೂ ಅಧಿಕಾರಿಗಳ ಮೌಲ್ಯಮಾಪನ ಒಳಗೊಂಡಿರುತ್ತದೆ ಎಂಬುದನ್ನು ತಿಳಿಸುತ್ತಾ ಶಿಕ್ಷಕರು ಸದಾ ಅಧ್ಯಯನಶೀಲರಾಗುವಂತೆ ಒತ್ತುನೀಡಿದೆ.
ಒಳಗೊಳ್ಳುವ ಶಿಕ್ಷಣ – ಎಲ್ಲರಿಗಾಗಿ ಶಿಕ್ಷಣ
• SEZ(Special education Zone) – ಆರ್ಥಿಕ ಹಾಗೂ ಸಾಮಾಜಿಕ ಅನನುಕೂಲ ಮಕ್ಕಳನ್ನು ಹೊಂದಿದ ಶಾಲೆಗಳನ್ನು SEZ ಎಂದು ಗುರುತಿಸಿ ಅಲ್ಲಿ ಹಾಸ್ಟೇಲ್, ಬಸ್ ಸೌಲಭ್ಯ, ಶುಲ್ಕರಿಯಾಯತಿ, ಹೀಗೆ ಎಲ್ಲ ಸೌಲಭ್ಯಗಳನ್ನು ನೀಡುವುದರ ಮೂಲಕ ಒಳಗೊಳ್ಳುವ ಶಿಕ್ಷಣ ಹಾಗೂ ಎಲ್ಲರಿಗಾಗಿ ಶಿಕ್ಷಣ ಎಂಬ ಧ್ಯೇಯವನ್ನು ಎತ್ತಿಹಿಡಿದಿದೆ.
• ರಕ್ಷಣಾ ಸಚಿವಾಲಯದಡಿಯಲ್ಲ
ಎನ್ ಸಿ ಸಿ ಗೆ ಪ್ರೋತ್ಸಾಹವನ್ನು ನೀಡುವ ಆಶಯವನ್ನು ಇದು ಹೊಂದಿದೆ.
ಶಾಲಾ ಸಂಕೀರ್ಣತೆ
• School Comlex – ನೆರೆಹೊರೆ ಶಾಲೆಯ ಗುಂಪು, ಪ್ರಯೋಗಾಲಯ, ಗ್ರಂಥಾಲಯ, ಕ್ರೀಡಾ ಸಾಮಗ್ರಿಗಳನ್ನು ಬಳಕೆ ಮಾಡುವುದು ಹಾಗೂ ಸಂಗೀತ, ದೈಹಿಕಶಿಕ್ಷಕರು, ಸಂಗೀತಶಿಕ್ಷಕರು ನೆರೆಹೊರೆಯಲ್ಲಿ ಅನುಕೂಲಿಸುವುದನ್ನು ಇದು ಒಳಗೊಂಡಿದೆ. ಈ ಮೂಲಕ ನೆರೆಹೊರೆಯ ಎಲ್ಲ ಶಾಲೆಯ ಮಕ್ಕಳಿಗೆ ಅನೇಕ ಅವಕಾಶಗಳು ದೊರೆಯುವವು.
ಹೀಗೆ ಒಟ್ಟಾರೆಯಾಗಿ ಈ ನಮ್ಮ ರಾಷ್ಟ್ರೀಯ ಶಿಕ್ಷಣ ನೀತಿ 2020 ಶಿಕ್ಷಣರಂಗದಲ್ಲಿ ಅಮೂಲಾಗ್ರ ಬದಲಾವಣೆಯ ಮೂಲಕ ಜಾಗತಿಕ ಮಟ್ಟದಲ್ಲಿ ವಿನೂತನವಾದ ವಿಭಿನ್ನವಾದ ದೇಶೀಯ ಸೊಗಡಿನ ವ್ಯವಸ್ಥೆಯ ಮೂಲಕ ಕ್ರಾಂತಿಯನ್ನೇ ಮಾಡಲಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಹೀಗೆ ನಮ್ಮ ಹೊಸರಾಷ್ಟ್ರೀಯ ಶಿಕ್ಷಣನೀತಿ 2020 ಶಿಕ್ಷಣದಲ್ಲಿ ಹೊಸಆಶೆಯ ಚಿಗುರನ್ನು ಮೂಡಿಸಿದೆ.
ಡಾ. ದಾನಮ್ಮ ಚ ಝಳಕಿ