ಅಂಕಣ ಬರಹ

ಸಾಧಕಿಯರ ಯಶೋಗಾಥೆ

ಪುಪುಲ್‍ಜಾಯಕರ್

ಬರಹಗಾರ್ತಿಮತ್ತುಸಾಂಸ್ಕೃತಿಕಕಾರ್ಯಕರ್ತೆ

(1951-1997)

.

ಪುಪುಲ್ ಜಾಯಕರ್ ಉತ್ತರ ಪ್ರದೇಶದ ಇಟವಾದಲ್ಲಿ 11 ಸೆಪ್ಟೆಂಬರ್ 1915 ರಲ್ಲಿ ಜನಿಸಿದರು. ಪುಪುಲ್ ಅವರ ತಂದೆ ಭಾರತೀಯ ನಾಗರಿಕ ಸೇವೆಯಲ್ಲಿ ಉದಾರವಾದಿ ಬುದ್ಧಿಜೀವಿ ಮತ್ತು ಹಿರಿಯ ಅಧಿಕಾರಿಯಾಗಿದ್ದರು. ಪುಪುಲ್‍ರ ತಾಯಿಯು ಬ್ರಾಹ್ಮಣ ಕುಟುಂಬಕ್ಕೆ ಸೇರಿದವರಾಗಿದ್ದರು. ಪುಪುಲಗೆ ಒಬ್ಬ ಸಹೋದರ ನಾಲ್ಕು ಜನ ಸಹೋದರಿಯರಿದ್ದರು. ಪುಪುಲರ ತಂದೆಯ ಕೆಲಸವು ಭಾರತದ ಅನೇಕ ಕಡೆಗೆ ಕರೆದ್ಯೊಯಿತು. ತಂದೆಯಿಂದಲೇ ಕರಕುಶಲ ಮತ್ತು ಸಂಪ್ರದಾಯಗಳ ಕುರಿತು ಅಪಾರವಾದ ಜ್ಞಾನವನ್ನು ಪಡೆದರು.

ಪುಪುಲರವರು ತಮ್ಮ ಹನ್ನೊಂದನೆಯ ವಯಸ್ಸಿನಲ್ಲಿ ಬನಾರಾಸ್‍ಗೆ ಹೋದರು. ಅಲ್ಲಿ ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯರಾಗಿದ್ದ ಥಿಯೋಸೋಫಿಸ್ಟ್ ಆನಿಬೆಸೆಂಟ್ ಫ್ರಾರಂಬಿಸಿದ ಶಾಲೆಯಲ್ಲಿ ಓದಿದರು. ನಂತರ ಪುಪುಲ ತಂದೆಗೆ ಅಲಹಾಬಾದ್‍ಗೆ ವರ್ಗಾವಣೆಯಾಯಿತು. ಹಾಗಾಗಿ ಇವರು ತಮ್ಮ ಹದಿನೈದನೆಯ ವಯಸ್ಸಿನಲ್ಲಿ ಅಲಹಾಬಾದ್‍ಗೆ ಬಂದರು. ತಂದೆಯೊಂದಿಗೆ ಅಲಹಾಬಾದ್‍ನಲ್ಲಿ ನೆಹರುವರ ಕುಟುಂಬ ಸಂಪರ್ಕಕಕ್ಕೆ ಬಂದರು. ಏಕೆಂದರೆ ಇವರ ತಂದೆಯು ನೆಹರುವರ ಸ್ನೇಹಿತರಾಗಿದ್ದರು. ಹಾಗಾಗಿ ತಂದೆಯ ಸಂಪರ್ಕದಿಂದ ಪುಪುಲರವರು ಇಂದಿರಾ ಪ್ರಿಯದರ್ಶಿನಿಯರೊಂದಿಗೆ ಸ್ನೇಹ ಬೆಳೆಸಿದರು.

ಲಂಡನ್ ಸ್ಕೂಲ್ ಆಫ್ ಎಕಾನಾಮಿಕ್ಸ್‍ನಿಂದ ಪದವಿ ಪಡೆಯುವುದಕ್ಕಿಂತ ಮುಂಚಿತವಾಗಿ ಪುಪುಲರವರು 1936 ರಲ್ಲಿ ಬೇಡಪೋರ್ಡ್ ಕಾಲೇಜಿನಲ್ಲಿ ವ್ಯಾಸಾಂಗವನ್ನು ಮಾಡಿದರು. ಶಿಕ್ಷಣ ಮುಗಿಸಿಕೊಂಡು ಮರಳಿ ಭಾರತಕ್ಕೆ ಬಂದು ನ್ಯಾಯವಾದಿ ಮನಮೋಹನ್ ಜಯಕರ್ ಅವರನ್ನು ವಿವಾಹವಾಗಿ ಬಾಂಬೆಯಲ್ಲಿ ನೆಲೆಸಿದರು.

ಪುಪುಲ್ ಜಾಯಕರ್ ಒಬ್ಬ ಮಹಿಳಾ ಬರಹಗಾರ್ತಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತೆಯಾಗಿದ್ದಾರೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಇರುವ ಸಂಪ್ರದಾಯ ಮತ್ತು  ಗ್ರಾಮೀಣ ಪ್ರದೇಶದ ಕಲೆಗಳು, ಕೈಮಗ್ಗ ಮತ್ತು ಕರಕುಶಲ ವಸ್ತುಗಳ ಪುನರ್ ಜೀವನಕ್ಕಾಗಿ ಮಾಡಿದ ಕೆಲಸಗಳಿಂದ ಇವರು ಹೆಸರುವಾಸಿಯಾಗಿದ್ದಾರೆ. 1980 ದಶಕದಲ್ಲಿ ಫ್ರಾನ್ಸ್, ಯುಎಸ್‍ಎ ಮತ್ತು ಜಪಾನ್‍ನಲ್ಲಿ ಭಾರತೀಯ ಕಲಾ ಉತ್ಸವಗಳನ್ನು ಆಯೋಜಿಸಿದರು. ಇವರು ಮಾಡಿದ ಕೆಲಸಗಳಿಂದ ಭಾರತೀಯ ಕಲೆಗಳು ಜನಪ್ರಿಯತೆಯನ್ನು  ಪಡೆಯಿತು. ಪುಪುಲ್ ಅವರು ನೆಹರು ಕುಟುಂಬದೊಂದಿಗೆ ಅತಿ ಆತ್ಮೀಯ ಸಂಬಂಧವನ್ನು ಹೊಂದಿದ್ದರು. ಇವರು ನೆಹರು ಮತ್ತು ಇಂದಿರಾಗಾಂಧಿ ಅವಧಿಯಲ್ಲಿ ಸಾಂಸ್ಕøತಿಕ ಸಲಹೆಗಾರಾರಾಗಿ ಸೇವೆ ಸಲ್ಲಿಸಿದರು. ಇವರು ದೇಶದ ಸಾಂಸ್ಕೃತಿಕ ವಿಷಯದಲ್ಲಿ ಅಪಾರವಾದ ಜ್ಞಾನವನ್ನು ಪಡೆದು ಸುಮಾರು 40 ವರ್ಷಗಳ ಕಾಲ ದೇಶದ ಸಾಂಸ್ಕøತಿಕ ರಂಗದ ಮೇಲೆ ತಮ್ಮ ಹಿಡಿತವನ್ನು ಹೊಂದಿದ್ದರು. ನಮ್ಮ ದೇಶದಲ್ಲಿ ಕಲೆ ಮತ್ತು ಕರಕುಶಲ ಸಂಸ್ಥೆಗಳನ್ನು ಸ್ಥಾಪಿಸುವುದರ ಮೂಲಕ ಪ್ರತಿಭಾವಂತ ಕಲಾವಿಧರನ್ನು ಪ್ರೋತ್ಸಾಹಿಸಿದರು. ಹಾಗೆಯೆ ನಮ್ಮ ದೇಶದ ಕಲೆ ಮತ್ತು ಕರಕುಶಲ ವಸ್ತುಗಳ ಕುರಿತು ವಿಶ್ವದಾದ್ಯಂತ ವಸ್ತುಗಳ ಮತ್ತು ಪ್ರದರ್ಶನಗಳ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು.

1950 ರಲ್ಲಿ ಆಗಿನ ಪ್ರಧಾನ ಮಂತ್ರಿಯಾಗಿದ್ದ ಜವಾಹರಲಾಲ್ ನೆಹರು ಅವರು ಕೈಮಗ್ಗ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು ಮತ್ತು ಅದರ ಕುರಿತು ಅಧ್ಯಯನ ಮಾಡಲು ಪುಪುಲ್ ಅವರನ್ನು ಆಹ್ವಾನಿಸಿದರು. ಅವರು ಅಖಿಲ ಭಾರತ ಕೈಮಗ್ಗ ಮಂಡಳಿ ಮತ್ತು ಕರಕುಶಲ ವಸ್ತುಗಳ ಮತ್ತು ಕೈಮಗ್ಗ ರಪ್ತು ನಿಗಮದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಅಲ್ಲದೆ ಮಧುಬನಿ ಹಚ್ಚು ಚಿತ್ರಕಲೆಯನ್ನು ಪುನರ್‍ಜ್ವೀವನಗೊಳಿಸಲು ಸಾಕಷ್ಟು ಶ್ರಮ ಹಾಕಿದರು. ಇವರು ದೇಶದ ಪಾರಂಪರಿಕ ಆಸ್ತಿಗಳ ಸಂರಕ್ಷಣೆಗಾಗಿ ‘ನ್ಯಾಷನಲ್ ಕ್ರಾಫ್ಟ್ ಮ್ಯುಸಿಯಂ’ ಮತ್ತು ‘ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್’ಅನ್ನು ಸ್ಥಾಪಿಸಿದರು. 1985 ರಲ್ಲಿ ಸ್ಥಾಪನೆಯಾದ “ಇಂದಿರಾಗಾಂಧಿ ನ್ಯಾಷನಲ್ ಸೆಂಟರ್ ಫಾರ್ ಆರ್ಟ್ಸ

” ದ ಸ್ಥಾಪಕ ಹಾಗೂ ಟ್ರಸ್ಟಿಯಾಗಿದ್ದರು. 1990ರಲ್ಲಿ ನವದೆಹಲಿಯಲ್ಲಿ ‘ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಾಜಿಯನ್ನು’ ಸ್ಥಾಪಿಸಿದರು.

ಪುಪುಲರವರು ಬಂಗಾಳದ ಸಾಹಿತ್ಯ ಚಳಿವಳಿಯ ‘ಹಂಗ್ರಿ ಜನರೇಷನ್’ನ ನಿರಂತರ ಬೆಂಬಲಿಗರಾಗಿದ್ದರು. ಹಾಗೇಯೆ ಕೃಷ್ಣ ಮೂರ್ತಿ ಪ್ರತಿಷ್ಟಾನದಲ್ಲಿ ಸಕ್ರಿಯರಾಗಿದ್ದರು. ಭಾರತ, ಯುನೈಟೆಡ್ ಸ್ಟೇಟ್, ಇಂಗ್ಲೇಂಡ್ ಮತ್ತು ಕೆಲವು ಲ್ಯಾಟಿನ್ ಅಮೇರಿಕನ್ ದೇಶಗಳಲ್ಲಿ ಕೃಷ್ಣಮೂರ್ತಿ ಪ್ರತಿಷ್ಟಾನವನ್ನು ಸ್ಥಾಪಿಸಲು ಇವರು ಸಹಾಯ ಮಾಡಿದರು. ಕೃಷ್ಣಮೂರ್ತಿ ಪೌಂಡೇಶನ್ ಆಫ್ ಇಂಡಿಯಾದ ಸದಸ್ಯೆಯಾಗಿ, ಆಂದ್ರಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿಯಲ್ಲಿರುವ ‘ರಿಷಿವ್ಯಾಲಿಶಾಲೆ’ ಮತ್ತು ಭಾರತದ ಇತರೆ ಕೃಷ್ಣಮೂರ್ತಿ ಶಾಲೆಗಳೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದರು. ಇವರು 1997ರಲ್ಲಿ ನಿಧನ ಹೊಂದಿದರು.

ಪುಪುಲರವರು ಬರೆದಿರುವ ಪುಸ್ತಕಗಳು ಜೆ ಕೃಷ್ಣಮೂರ್ತಿ ಎ ಬಯೋಗ್ರಾಫಿ ಮತ್ತು ಇಂದಿರಾಗಾಂಧಿ ಆನ್ ಇಂಟಿಮೇಟ್ ಬಯೋಗ್ರಾಫಿ ಎಂಬ ಈ ಎರಡು ಜೀವನ ಚರಿತ್ರೆಗಳು ತುಂಬಾ ಪ್ರಸಿದ್ಧ ಪಡೆದ ಗ್ರಂಥಗಳಾಗಿವೆ.

ಪುಪುಲ್ ಅವರಿಗೆ ಭಾರತದ ಮೂರನೆಯ ಅತ್ಯುನ್ನತ ನಾಗರೀಕ ಗೌರವ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿಯನ್ನು 1967 ರಲ್ಲಿ ನೀಡಿ ಗೌರವಿಸಲಾಯಿತು.

ಪುಪುಲ್ ಜಯಕರ್ ಅವರು ಬರೆದಿರು ಕೆಲವು ಗ್ರಂಥಗಳು:

1) ಗಾಡ್ ಇಜ್ ನಾಟ್ ಎ ಪುಲ್‍ಸ್ಟಾಫ್ :  ಅಂಡ್ ಅದರ್ ಸ್ಟೋರೀಜ್

2) ಟೆಕ್ಸ್‍ಟೈಲ್ ಅಂಡ್ ಎಂಬ್ರ್ಯಾಡರಿಜ್ ಆಫ್ ಇಂಡಿಯಾ

3) ದ ಅರ್ಥ್‍ನ್ ಡ್ರಮ್ : ಆನ್ ಇಂಟೂಡಕ್ಷನ್ ಟು ದ ರಿಚಬಲ್   ಆರ್ಟ್ ಆಫ್ ರೂರಲ್

4) ಅ ಬುದ್ದಾ: ಎ ಬುಕ್ ಫಾರ್ ದ ಯುಂಗ್

5) ದ ಅರ್ಥ ಮದರ್


ಡಾ.ಸುರೇಖಾ ರಾಠೋಡ್

ಸುರೇಖಾ ರಾಠೋಡ್ ಎಂ.ಎ , ಎಂ.ಫಿಲ್,ಪಿಎಚ್ ಡಿ, ಪಿಡಿಎಫ್. ಪದವಿ ಪಡೆದು ವಿಜಾಪುರ ಮಹಿಳಾ ವಿವಿಯಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. “ಸಿದ್ದಿ ಸಮುದಾಯದ ಲಿಂಗ ಸಂಬಂಧಿ ಅದ್ಯಯನ ” ಎಂಬ ವಿಷಯದಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ ಎಂಫಿಲ್ ಪದವಿ ಪಡೆದಿದ್ದಾರೆ. “ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ” ಎಂಬ ವಿಷಯದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರಯಿಂದ ಪಿಎಚ್ ಡಿ ಪದವಿ ಪಡೆದಿದ್ದಾರೆ. ಇದು ಅವರ ಮಹಿಳೆಯರ ಮೇಲೆ ಬೀರಿದ ಬೆಳಕಿಗೆ ಸಾಕ್ಷಿಯಾಗಿದೆ. “ಹರಣಶಿಕಾರಿ ಮಹಿಳೆಯರ ಸ್ಥಾನಮಾನ” ಎಂಬ ವಿಷಯದ ಕುರಿತು ಪಿಡಿಎಫ್ (ಸಂಶೋಧನೆ ) ಮುಂದುವರಿದಿದೆ. ಹೊರ ತಂದ ಪುಸ್ತಕಗಳು: ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ, ದಲಿತ ಸಾಹಿತ್ಯ ಪರಿಷತ್ತಿ ಗದಗ ಪ್ರಕಟಿಸಿದೆ.೨. ದಲಿತ ಮಹಿಳಾ ಕಾರ್ಮಿಕರ ಸಮಸ್ಯೆಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಪ್ರಕಟಿಸಿದೆ ೩. ಮಹಿಳಾ ಅದ್ಯಯನ, ಯುಜಿಸಿ ನೆಟ್ -ಜೆಆರ್ ಎಫ್,ಕೆಸೆಟ್ ಪಠ್ಯ ಮತ್ತು ಪ್ರಶ್ನೆ ಪತ್ರಿಕೆಗಳು’ ಡಿವಿಕೆ ಪ್ರಕಾಶನ ಮೈಸೂರು ಪ್ರಕಟಿಸಿವೆ

Leave a Reply

Back To Top