ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

ಅರುಣಾ ನರೇಂದ್ರ

Remembering Ma — arjuna-vallabha: Akka Mahadevi , was a...

ಅವನು ಕನಸಲ್ಲಿ ಕಾಡುವ ಪರಿ ಹೇಗೆ ಹೇಳಲೇ ಅವ್ವಾ
ಅವನನು ಮನಸ್ಸಲ್ಲೇ ಬೇಡುವ ಪರಿ ಹೇಗೆ ಹೇಳಲೇ ಅವ್ವಾ

ಅವನಿಗಾಗಿ ನಿತ್ಯವೂ ಕೊರಗಿ ಕರಗಿ ಸೊರಗುತ್ತಿದ್ದೇನೆ
ತನುವ ಕೂಡದಲೇ ಸುಖವ ನೀಡುವ ಪರಿ ಹೇಗೆ ಹೇಳಲೇ ಅವ್ವಾ

ಖವ ಖವನೆ ನಗುವ ಹೊಳೆವ ಹಲ್ಲುಗಳ ಚೆಲುವನಿವನು
ಕಂಡೂ ಕಾಣದಂತೆ ಮೋಡಿ ಮಾಡುವ ಪರಿ ಹೇಗೆ ಹೇಳಲೇ ಅವ್ವ

ಅವನು ಹಚ್ಚಿಕೊಂಡ ಗಂಧದ ಪರಿಮಳ ತಂಬೆಲರ ಒಡಲಲ್ಲಿ
ಮೈ ಮುರಿಯುವಂತೆ ಅಪ್ಪಿ ಬಿಡುವ ಪರಿ ಹೇಗೆ ಹೇಳಲೇ ಅವ್ವಾ

ಅವನ ನೆನಪಲ್ಲಿ ನಿದ್ದೆ ನೀರಡಿಕೆಗಳ ಸುಳಿವಿಲ್ಲ ನೋಡು
ಏಕಾಂತದಲಿ ಬಂದು ಕೈ ಹಿಡಿವ ಪರಿ ಹೇಗೆ ಹೇಳಲೇ ಅವ್ವಾ

ಜೊತೆಗಿದ್ದರೂ ಇಲ್ಲದಂತೆ ಇರುವ ಮಾಯಕಾರ ಇವನು
ಭವದ ಬಟ್ಟೆ ಬಿಟ್ಟು ಅನುಭಾವ ತೊಡುವ ಪರಿ ಹೇಗೆ ಹೇಳಲೇ ಅವ್ವಾ

ಅವನ ಹುಡುಕುತ್ತ ಹೋದಂತೆ ಭುವನವೆಲ್ಲಾ ಬೆಳಕು
ಅವನನ್ನೇ ಬೆರೆತ ಅರುಣಾ ಸುಖ ಪಡುವ ಪರಿ ಹೇಗೆ ಹೇಳಲೇ ಅವ್ವಾ

-----------------------

(ವೀರ ವಿರಾಗಿಣಿ ಅಕ್ಕಮಹಾದೇವಿ ಅವರ ಜನ್ಮದಿನದ ನಿಮಿತ್ತ)

About The Author

1 thought on “ಗಜಲ್”

Leave a Reply

You cannot copy content of this page

Scroll to Top