ಅಕ್ಕಮಹಾದೇವಿ ಜನುಮದಿನಕ್ಕೆ

ಕಾವ್ಯ ಸಂಗಾತಿ

ಅಕ್ಕಮಹಾದೇವಿ ಜನುಮದಿನಕ್ಕೆ

ಗಿರಿಜಾ ಇಟಗಿ

Pin on ಅಕ್ಕಮಹಾದೇವಿಯ ವಚನಗಳು

ನಿರ್ವಾಣ ತವನಿಧಿ

ಹೆಣ್ಣು ಸನ್ಯಾಸಿಯಾಗಿರಬಹುದು
ಆದರೆ ದಿಗಂಬರೆ; ಇದು ವಿಪರೀತ
ಲೋಕದ ಹೆಣ್ಣಿನ ಇತಿಹಾಸದಲ್ಲಿ
ಉಭಯಲಜ್ಜೆಯನಳಿದ ಅಕ್ಕನಿಗೆ ನಮೋನಮಃ

ದಿಗಂಬರದುಡುಗೆಯನುಟ್ಟ ವಿರಾಗಿನಿ
ಲೌಕಿಕದ ಲಜ್ಜಾಭಿಮಾನವನ್ನು ತೊರೆದು
ಮಾನಪಮಾನ ಸ್ತುತಿ ನಿಂದೆಯನು ಬದಿಗಿಟ್ಟು
ಅಂಗ ಸಂಗವನು ಲಿಂಗದೊಳು ಬೆರೆಸಿದ ಅಕ್ಕನಿಗೆ ನಮೋನಮಃ

ಕಾಯ- ಜೀವ- ಮನದ ಲಜ್ಜೆಗಳನ್ನು ಸುಟ್ಟು
ಅಂಗದಲಿ ವಿರಕ್ತಿ ಲಿಂಗದಲಿ ಪರಮಾನುಭಕ್ತಿ
ಕಾಮವನು ಭಕ್ತಿಯಲಿ ಪರಿವರ್ತಿಸಿ
ಚೆನ್ನಮಲ್ಲಿಕಾರ್ಜುನನ ಮದುವಣಗಿತ್ತಿಯಾದ ಅಕ್ಕನಿಗೆ ನಮೋನಮಃ

ಗರಗಸದಿಂದ ಕೊರೆಸಿಕೊಂಡಷ್ಟು ಭಕ್ತಿಭಾವ
ತನುವಿನೊಳಗೆ ತನುವ ಗೆದ್ದು, ಮನದೊಳಗೆ ಮನವ ಗೆದ್ದು
ಭವಿಯ ಸಂಗದೊಳಗೆ ಭವವ ಗೆದ್ದು
ಕ್ಷಮೆ,ದಯೆ,ಶಾಂತಿ ಸೈರಣೆಗಳೆ ಸಮಾಧಿಯೆಂದ ಅಕ್ಕನಿಗೆ ನಮೋನಮಃ

ಜಗದ ಮಹಿಳೆಯ ಮೌನವೆಂಬ ಭಾಷೆಯ ಮುರಿದು
ಅನುಭವ ಮಂಟಪದಿ ಮಾತಿನ ಬರೆಯನಿಕ್ಕಿ
ಅನುಭಾವಿ ಶರಣರ ಮುಂದೆ ಲೇಸೆನಿಸಿಕೊಂಡು
ನಿತ್ಯ ಮುತ್ತೈದೆ ಶರಣಸತಿ- ಲಿಂಗಪತಿ ಅಕ್ಕನಿಗೆ ನಮೋನಮಃ


Leave a Reply

Back To Top