ಕಾವ್ಯ ಸಂಗಾತಿ
ಗಜಲ್
ಬಾಗೇಪಲ್ಲಿ
ಅಂಗೈ ನೋಡಲು ಕನ್ನಡಿ ಬೇಕೆ
ಹೊತ್ತಿಗೆ ಓದಲು ಮುನ್ನುಡಿ ಬೇಕೆ.
ಭೂಮಿ ತಿರುಗುತಿದೆ ತನ್ನದೇ ಅಕ್ಷದಿ
ಸೂರ್ಯೋದಯ ಬಣ್ಣಿಸೆ ಬೆನ್ನುಡಿ ಬೇಕೆ
ಓದ ಬಯಸದ ಸಾಕ್ಷರರಿಹರು
ನೀರಲಿ ಹೋಮಕೆ ಹಿನ್ನುಡಿ ಬೇಕೆ
ಅರಿತ ವಿಷಯ ಹೇಳುತಲಿರುವೆ
ರಹಸ್ಯವ ನರುಹುವ ಮೆಲ್ನುಡಿ ಬೇಕೆ
ಗಂದದ ಪರಿಮಳ ಗಾರ್ಧಭ ಅರಿವುದೇ!
ಪಾಮರಗೆ ತಿಳಿಸಲು ಹೊನ್ನುಡಿ ಬೇಕೆ.
ಸಮಾಜದ ಸ್ವಾಸ್ಥ್ಯ ಕೆಡುತಿದೆ ಬೇಗನೆ
ಅದಕೆ ಬಳಸಲು ಹಾಲ್ನುಡಿ ಬೇಕೆ.
ಸಾರ್ಥಕ್ಯಕೆ ನಕಲಿಸಿಬರೆಯೆ ಸಾಲದೆ
ಇನ್ನೂ ಶರಣರ ಸೂಳ್ನುಡಿ ಬೇಕೆ.
ಓದುವ ಗೀಳು ಬಾಲ್ಯದಿ ಬರುವುದು ಕೃಷ್ಣ
ಪುಸಲಾಯಿಸಿ ಓದಿಸೆ ಜೇನ್ನುಡಿ ಬೇಕೆ
ಸವಿನಯ ವಂದನೆ.