ಗಜಲ್

ಗಜಲ್

ಮಾಜಾನ್ ಮಸ್ಕಿ

green and red heart shaped textile

ಎಟುಕದ ನೆನಪಿನ ಕವಿತೆ ಆಗಿರುವೆ
ಬಣ್ಣದ ಬದುಕಿನ ಕವಿತೆ ಆಗಿರುವೆ

ಬಾಳ ದಾಹಕ್ಕೆ ಜೀವ ಪರಿತಪಿಸಿದೆ
ಸಂವೇದನೆ ಸೆಳವಿನ ಕವಿತೆ ಆಗಿರುವೆ

ನಯನದ ಗೊಂಬೆಯಂತೆ ನನ್ನೊಳು ನಾ
ದೃಷ್ಟಿಯ ಅರಿವಿನ ಕವಿತೆ ಆಗಿರುವೆ

ಒರತೆಯಂತೆ ಸಾಗಿದೆ ಚಿಂತನ ಮಂಥನ
ನಿರಂತರ ಹರಿವಿನ ಕವಿತೆ ಆಗಿರುವೆ

ಬದುಕಿನ ಹೆಜ್ಜೆಗಳಲಿ ಬವಣೆಗಳೆಷ್ಟೋ “ಮಾಜಾ”
ಸಂಘರ್ಷದ ನಂಟಿನ ಕವಿತೆ ಆಗಿರುವೆ


Leave a Reply

Back To Top