ಗಜಲ್

ಗಜಲ್

ಮಾಜಾನ್ ಮಸ್ಕಿ

ಅಂತರಂಗ ಸ್ತಬ್ದವಾಯಿತು ಲೇಖನಿ ಮೌನವಾದ ಹೊತ್ತು
ಭಾವನೆ ಶೂನ್ಯವಾಯಿತು ಲೇಖನಿ ಮೌನವಾದ ಹೊತ್ತು

ಉಸಿರು ಉಸಿರಾಡುವುದನ್ನು ಮರೆತು ಜಡವಾಯಿತು ದೇಹ
ಕಣ್ಣ ಹನಿ ಹೆಪ್ಪಾಯಿತು ಲೇಖನಿ ಮೌನವಾದ ಹೊತ್ತು

ಸಂಬಂಧಗಳಿಗೆ ಜೋತು ಬಿದ್ದ ಮನ ಸೋಲುವುದು ಏಕೆ
ಮಂಡಿ ಊರಿ ಶರಣಾಯಿತು ಲೇಖನಿ ಮೌನವಾದ ಹೊತ್ತು

ಕನಸುಗಳು ಮಲಗಿ ಗೋರಿ ಶೃಂಗಾರಗೊಂಡಿತು
ಪೈಶಾಚಿಕ ಕುಣಿತ ಜೋರಾಯಿತು ಲೇಖನಿ ಮೌನವಾದ ಹೊತ್ತು

“ಮಾಜಾ” ಬೆಳೆಯುವ ಮೊಳಕೆಯನ್ನು ಚಿವುಟಿ ನಂಜೇರಿಸುವರು
ಆರೈಕೆಯ ಕೊರತೆಯಾಯಿತು ಲೇಖನಿ ಮೌನವಾದ ಹೊತ್ತು


Leave a Reply

Back To Top