ಗಜಲ್

ಗಜಲ್

ಬಾಗೇಪಲ್ಲಿ

silhouette of 2 person sitting on boat during sunset

(ನವ ದಂಪತಿಗಳಿಗೆ ಶುಭ ಹಾರೈಕೆಯೊಂದಿಗೆ)

ನಿನ್ನ ಮೇಲೆ ಸಂಪೂರ್ಣ ಭರವಸೆ ಇರಿಸಿರುವೆ ಕಣೋ
ತುಂಬು ಬೊಗಸೆ ಪ್ರೀತಿಯ ನಿನ್ನಿಂದ ಬಯಸಿರುವೆ ಕಣೋ.

ಸ್ವರ್ಗದಲೇ ಮದುವೆ ನಿಶ್ಚಯ ಎಂದು ಅರಿತಿರುವೆ ಕಣೋ
ಗಾದೆಯನು ವೇದವೆಂದು ನಾ ಬಗೆದಿರುವೆ ಕಣೋ

ಅನ್ಯೋನ್ಯ ದಂಪತಿಗಳ ಕತೆಗಳ ಕೇಳಿರುವೆ ಕಣೋ
ನಿನ್ನೊಡನೆ ಬಾಳು ಚಂದವಾಗಿಸೆ ದೇವನ ಕೋರಿರುವೆ ಕಣೋ.

ಪ್ರೀತಿ ವಾತ್ಸಲ್ಯಗಳ ಮಾತ್ರ ದೇವನ ಬೇಡಿರುವೆ ಕಣೋ
ಮಧುರ ಬಾಳು ಬಯಸುತ್ತಾ ಸನಿಹ ಸೇರಿರುವೆ ಕಣೋ

ರಾಧೆ ಕೃಷ್ಣ ಯಂತ ಜೋಡಿಯಾಗ ಕಾದಿರುವೆ ಕಣೋ
ಮೊದಲ ರಾತ್ರಿಯಲಿತ್ತ ಒಡವೆಯ ಧರಿಸಿರುವೆ ಕಣೋ


ಬಾಗೇಪಲ್ಲಿ

Leave a Reply

Back To Top