ಗಝಲ್

ಗಝಲ್

ಶಂಕರಾನಂದ ಹೆಬ್ಬಾಳ

ಕನಸುಗಳ ಮಾರಾಟ ನೀನಿಲ್ಲದ
ಊರಿನಲ್ಲಿ
ದುಃಖಗಳ ಹಾರಾಟ ನೀನಿಲ್ಲದ
ಊರಿನಲ್ಲಿ

ಓಷನೀಶನ ಪ್ರಭೆ ಮಾಸಿಹೋಯಿತೆ
ಇಂದು
ಪ್ರೇಮಪತ್ರಗಳ ತೂರಾಟ ನೀನಿಲ್ಲದ
ಊರಿನಲ್ಲಿ

ಭಾವನೆಗಳ ತೇರಿನಲಿ ನಿರ್ಭಾವದ
ಪಯಣವಿದು
ಮೌನದಸ್ತ್ರದ ಹೋರಾಟ ನೀನಿಲ್ಲದ
ಊರಿನಲ್ಲಿ

ತಪ್ಪುಗಳ ಎಣಿಸುತಲಿ ಕೂಡದಿರು
ರಮಣಿ
ಅಪ್ಪುಗೆಗಾಗಿ ಚೀರಾಟ ನೀನಿಲ್ಲದ
ಊರಿನಲ್ಲಿ

ಬಯಕೆಗಳ ಬೆಂಗಾಡಿನಲಿ ಅಭಿನವನ
ಕುರುಹು
ದೃಗುಜಲದ ಗೋಳಾಟ ನೀನಿಲ್ಲದ
ಊರಿನಲ್ಲಿ


Leave a Reply

Back To Top