ಸೌಖ್ಯದ ಭಾವ

ಕಾವ್ಯ ಸಂಗಾತಿ

ಸೌಖ್ಯದ ಭಾವ

ಸುಲಭಾ ಜೋಶಿ ಹಾವನೂರ.

ಆಕಳ ಕೊರಳಿನ ಕಿಣಿ ಕಿಣಿ ನಾದ
ಮಂಗಳ ಸಂಜೆಯ ಸೌಖ್ಯದ ಭಾವ
ಪರಿಮಳ ಸೂಸುವ
ಸೂಜಿ ಮಲ್ಲಿಗೆ
ಹಕ್ಕಿ ಹಾರುವ ಕಲರವ
ಕಾವ್ಯ
ತಂಪು ಸಂಜೆಯ ತನಿರಸ ನವ್ಯ
ಗಾಳಿಗೆ ಹೊಳಹುವ ಸುಮಧುರ ಸೌಮ್ಯ
ನಿಸರ್ಗ ರಮ್ಯದ ಭಾವ
ತರಂಗ
ಆಕಳ ಕೊರಳಿನ ಕಿಣಿಕಿಣಿ ನಾದ.
ಮಂಗಳ ಸಂಜೆಯ
ಸೌಖ್ಯದ ಭಾವ.
traffc jam ನಗರ
ಗರಗರ ಗಾಲಿಯೇ
ಬರದಿರು ಬರದಿರು
ಗೋಧೂಳಿಯ ಪಯಣಕೆ
ತುಂಬಿ ತುಳುಕಲಿ
ಈ ಕಾವ್ಯದ ಸಂಜೆ
ಆಕಳ ಕೊರಳಿನ
ಕಿಣಿಕಿಣಿ ನಾದ
ಮಂಗಳ ಸಂಜೆಯ
ಸೌಖ್ಯದ ಭಾವ.


Leave a Reply

Back To Top