ಬೆಳಕು ಹರಿಯಲಿ

ಕಾವ್ಯ ಸಂಗಾತಿ

ಬೆಳಕು ಹರಿಯಲಿ

ದೀಪಿಕಾ ಚಾಟೆ

ನಭದ ತುಂಬೆಲ್ಲ
ಕೆಂದಾವರೆಯ ರಂಗೋಲಿ
ಭುವಿಯಲ್ಲಿ ಅರಳುವ ಅಬೋಲಿ
ನಕ್ಕುಬಿಡಲಿ ಜಗವೆಲ್ಲ ಎಲ್ಲಲ್ಲಿ

ಬೆಳಕು ಹರಿದಂತೆ
ಯುದ್ಧದ ಕಾರ್ಮೋಡ
ಅತ್ತ ಜರುಗಲಿ
ಶಾಂತಿಯ ಬೆಳಗು ಹರಿಯಲಿ

ತಾನಷ್ಟೇ ಉಳಿದು
ಅನ್ಯರ ಅಳಿವಿಗೆ
ಕಾರಣವಾಗುತ
ಮೆರೆವ ಮನುಜ ಅರಿವಾಗದೇ

ಬೆರಗಿನ ಬಿರು ಬಿಸಿಲಿಗೆ
ಬಾಂಬಿನ ಬೆಂಕಿ ಚೆಂಡಿಗೆ
ಅವನತಿಯ ಹಾದಿಯಲಿ
ಹೆಜ್ಜೆ ಇಡುವುದು ಸರಿಯೇ

ಅಂತರಾತ್ಮದ ಧನಿಗೆ
ಓಗೊಡು ಮನುಜಾ
ನಿಚ್ಚಳದ ಬೆಳಕಿಗೆ
ಎಚ್ಚತ್ತುಕೋ ಸಹಜಾ

ಮೂಡಣದ ಅಂಚಿಂದ
ರವಿಯು ಬೆರಗು ಮೂಡಿಸಿದಂತೆ
ಶಾಂತಿಯಹಕ್ಕಿಗಳ ಇನಿ ಧನಿಯು
ಎಲ್ಲೆಡೆ ಹರಿದು ಬಿಡಲಿ


One thought on “ಬೆಳಕು ಹರಿಯಲಿ

Leave a Reply

Back To Top