ಗಜಲ್
ಜಗದಲ್ಲಿ ಎಲ್ಲರಿಗೂ ಗೌರವ ಪಡೆಯುವ ಚಿಂತೆ
ಎಲ್ಲರಿಗೂ ತನ್ನದೊಂದು ಗೂಡು ಕಟ್ಟುವ ಚಿಂತೆ
ಚಿಂತನ-ಮಂಥನ ಕಟ್ಟೆಗಳು ಮೂಲೆಗುಂಪಾಗಿವೆ
ಧನಿಕರಿಗೆ ಸಂಪತ್ತಿನ ಗುತ್ತಿಗೆ ಹಿಡಿಯುವ ಚಿಂತೆ
ಪಾರಿವಾಳಗಳು ಮರೆಯಾಗುತಿವೆ ದುನಿಯಾದಲ್ಲಿ
ಮುಖವಾಡಗಳಿಗೆ ನೆಮ್ಮದಿಯನ್ನು ಕದಡುವ ಚಿಂತೆ
ಮುಖ ಕಪ್ಪು ಮಾಡಿಕೊಂಡು ಬೆಳ್ಳಗೆ ಬಾಳಲಾಗದು
ಬಲಿತ ಕುಳಗಳಿಗೆ ಅಧಿಕಾರ ಚಲಾಯಿಸುವ ಚಿಂತೆ
ಸಿಹಿ ನೀರ ಕೊಡವು ತುಂಬುವುದಿಲ್ಲ ಬಂಡವಾಳದಿ
ಅಸಹಾಯಕ ರಟ್ಟೆಗಳಿಗೂ ಹೋರಾಡುವ ಚಿಂತೆ
ಸಮಾನತೆ ಹರಿಕಾರರು ಬಂದರು-ಹೋದರು ಗೆಳೆಯ
ರಕುತ ಹೀರುವ ಜಿಗಣೆಗಳಿಗೆ ಫಲ ಬೆಳೆಸುವ ಚಿಂತೆ
ಮಸಣಗಳು ಮನದ ಸುತ್ತ ಸುತ್ತುತಿವೆ ಅನುದಿನವು
‘ಮಲ್ಲಿ’ಗೆ ಒಲವ ಶಾಂತಿ ಪತಾಕೆ ಹಾರಿಸುವ ಚಿಂತೆ
ರತ್ನರಾಯಮಲ್ಲ
ತುಂಬು ಹೃದಯದ ಧನ್ಯವಾದಗಳು ಸರ್ ಜೀ, ಪ್ರಕಟಣೆಗೆ..