ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

ಲಕ್ಷ್ಮೀ ನಾರಾಯಣ ಕೆ ವಾಣಿಗರಹಳ್ಳಿ

ಕಾಣದುದರ ಹಂಬಲಕೆ ತುಡಿಯುತ್ತಿದೆ ಯಾಕೆ ಈ ಮನ
ಕಾರಣಗಳಿಲ್ಲದೆ ಏನನ್ನೋ ಮಿಡಿಯುತ್ತಿದೆ ಯಾಕೆ ಈ ಮನ

ಕಾಣದ ಚಿತಾವಣೆಯಲ್ಲಿ ಮಿಸುಗಾಡುತ್ತಿದೆ ತನು ಮನ
ಕಾರಣಗಳಿಗಾಗಿ ಸದಾ ಹುಡುಕಾಡುತ್ತಿದೆ ಯಾಕೆ ಈ ಮನ

ಕಾಣದಾತನ ಕೈಚಳಕದಲಿ ಮಿಸುಕದೆ ಸಾಗಿದೆ ಎಲ್ಲ
ಕರುಣಾಮಯನ ಮೀರದೆಯೆ ಸಾಗುತ್ತಿದೆ ಯಾಕೆ ಈ ಮನ

ಕಾಣಿಸದ ನಿನ್ನ ಹುಡುಕುವುದೊಂದು ಬಾಳ ಗುರಿಯಾಗಿದೆ
ಕಾರುಣ್ಯನ ಕರುಣೆಯ ದಯೆಗೆ ಕಾಯುತ್ತಿದೆ ಯಾಕೆ ಈ ಮನ

ಕಾಣಿಸಬಾರದೆ ’ನಾಣಿ’ಗೆ ಕರುಣೆಯಲಿ ಒಮ್ಮೆಯಾದರು
ಕಾರಣಿಗನ ಕನಸಿನಲ್ಲಿಯೆ ಬದುಕುತ್ತಿದೆ ಯಾಕೆ ಈ ಮನ


About The Author

4 thoughts on “ಗಜಲ್”

Leave a Reply

You cannot copy content of this page

Scroll to Top