ಕಾವ್ಯ ಸಂಗಾತಿ
ಕಹಿ ಉಂಡವ ಅಜರಾಮರ..
ಪ್ರೊ ವಿಜಯಲಕ್ಷ್ಮಿ ಪುಟ್ಟಿ
ಅಂಬಿಗರ ಚೌಡಯ್ಯ ವಿಹಿತರಿಗೆ ಕಾದ ನೇಸರ,
ಹಿತರಿಗೆ ಬೆಸುಗೆಯ ನೇಸ,
ಕಂಡದ್ದನ್ನು ಕಂಡಂತೆ ಹೇಳುವ
ಬರಿಸುವ ಕೆಂಡದಂತ ಕೋಪ
ಕೆಂಡಗಣ್ಣ ಮೂರ್ತಿ,
ಮುಚ್ಚುಮರೆಯಿಲ್ಲದ ತೆರೆದ ಮನಸ್ಸಿನ
ಇತಿ ಮಾತಿನ ತಿರುಳು ನಿಮ್ಮ ವಚನ
ವಿಡಂಬಿಸಿದ ಡಂಭಾಚಾರ
ಮೂಡನಂಬಿಕೆ,
ಸಾತ್ವಿಕದ ಕೇಚ್ಚು ಕೆರಳಿಸಿಕೊಂಡವ
ನಿಜದ ನಗಾರಿ ಬಾರಿಸಿ ನಿರ್ಭಯತೆ ಬೀರಿದವ, ಯಾವ ಕುಟುಂಬ ಚಿಂತೆಯ ಚಿತೆಯಿಂದ ಹೊರತಲ್ಲ ಎಂದು ಸಾರಿದವ,
ಚಾಟಿ ಏಟು ಬಿಸಿ ಮಲಗಿದದಂತವರ ಬಡಿದೆಬ್ಬಿಸಿದ ಕೆಚ್ಚಿಗ,
ನುಡಿದಂತೆ ನಡೆದ ನಡೆದಂತೆ ನುಡಿದ ಧೀರ ಶರಣ,
ನಿಮ್ಮ ಸಾಹಿತ್ಯ ಅಧರಕ್ಕೆ ಕಹಿ ಉದರಕ್ಕೆ ಸಿಹಿ ಬೇವು ತಿಂದವ ಬದುಕುವ ಬಹುಕಾಲ ಕಹಿ ಉಂಡವ ಅಜರಾಮರ
ಕಿವುಡ ಸಮಾಜ ಎಬ್ಬಿಸಲು ಸಾಧನ ಚೌಡಯ್ಯನ ಬಲ್ಲರಿಯ ನುಡಿಗಳು,
ಇದೋ ನಿಮಗೆ ನಮನ….
ಅಂಬಿಗರ ಚೌಡಯ್ಯ