ಕಾವ್ಯ ಸಂಗಾತಿ
ಗುರುತು
ಎಸ್. ವಿ. ಹೆಗಡೆ
ಜೀವನದ ಪರ್ಯಂತ
ದಾಯಾದಿಗಳೊಂದಿಗೆ
ನಡೆದ ಅಜ್ಜನ ವ್ಯಾಜ್ಯದ
ಜಮೀನಿನ ಗಡಿಯ
ಗುರುತು ಮಾಸ್ತಿಯ ಕಲ್ಲು
ಮುಚ್ಹಿಹೋಗಿದೆ ವರುಷ
ವರುಷವು ಕುಸಿವ
ಮಣ್ಣಿನಲ್ಲಿ ॥
ಮನೆಯ ಮುಂದಿನ ಗುರುತು
ಬಿರಿವ ಹಲಸು ಹಣ್ಣಿನ ಮರ
ಕವಲುಗಳು ಒಣಗಿ ಧರೆಗೊರಗಿ
ಯಾರದೋ ಹೆಣ ಸುಡುವ
ಬೆಂಕೆ ಹೊತ್ತಿ ಮರೆಯಾಯಿತು ಭಸ್ಮದಲ್ಲಿ ॥
ಅಸ್ಥಿತ್ವದ ಸಾಕ್ಶಿ ವೃಕ್ಷ
ಅಶ್ವತ್ಥ ಬೆಳೆದ ಬೇರುಗಳೆಲ್ಲ
ಹರಡಿ ಹೋಗಿವೆ ದೂರ
ಹುಡುಕಿ ಬಾಳ ನೀರ.
ಪರಸ್ಪರ ಗುರುತಿಲ್ಲದೆ
ತೂರಾಡುತಿವೆ ಎಲ್ಲೆಲ್ಲೋ
ವಿಸ್ತಾರ ಮರದಲ್ಲಿ ಅರಳಿದ
ಹೊಸಚಿಗುರುಗಳೆಲ್ಲ ಗಾಳಿಯಲ್ಲಿ॥
ಮುಖದ ಹೋಲಿಕೆ ನೋಡಿ
ಗುರುತು ಹಿಡಿವ ಕಳೆದು ಹೋದ
ಹಿರಿಯರ ನೆನಪಿನಲಿ
ಗುರುತಿಲ್ಲದ ದಾರಿಯಲ್ಲಿ ನಡೆದು
ಸಿಕ್ಕಿದ್ದು ಕಾಲಿಯಾದ ಅಜ್ಜನ ಮನೆ
ಗುರುತೇ ಸಿಗಲಾರದ ಅಸ್ಥಿ ಪಂಜರ.
Beautiful
ಬಹಳ ಚೆನ್ನಾಗಿದೆ.
Very good
Too good