ಉತ್ತರಾಯಣ

ಕಾವ್ಯ ಸಂಗಾತಿ

ಉತ್ತರಾಯಣ

ಡಾ. ನಿರ್ಮಲ ಬಟ್ಟಲ

ಎಳ್ಳಷ್ಟು ಬಿಸಿ ತಾಪ
ಏರಿಸಿನಿಂತರೂ ನೇಸರ
ಈ ನಡು ಮಧ್ಯಾನದಲ್ಲಿ
ಕೊರೆವ ಚಳಿಗೆ
ನಿನ್ನ ಅಪ್ಪುಗೆ
ಬೇಕೆನಿಸುತ್ತದೆ….!

ಮರಕೆ ಹೊಸೆದುಕೊಂಡು
ಬಳ್ಳಿಯಂತೆ ಹೊಸೆದ
ಬಿಸಿಯೂಸಿರಿನ ಬಿಸಿ
ತಾಪವನೂ ಸೂರ್ಯನಿಗೂ
ತಾಗಿಸಬೇಕೆನಿಸುತ್ತಿದೆ…..!

ತುಟಿಗೆ ನೀನಿತ್ತ ಕುಸುರಿನ
ಮುತ್ತುಗಳ ಸಿಹಿಯನು
ಎಳ್ಳುಬೆಲ್ಲದ ಜೊತೆಗೆ ಬೇರೆಸಿ
ಸವಿಯಬೇಕೆನಿಸುತ್ತಿದೆ….!

ಕಬ್ಬು ಕಡಲೆಯ ಬೀರಿ
ಒಲವಿನ ನುಡಿಯಾಡಿ
ಮುನಿಸ ಹೊರದೂಡಿ
ತೆರೆದ ಬಾಹುಬಂಧದಿ ಸಂಬಂಧಗಳು ಅಪ್ಪಬೇಕೆನಿಸುತ್ತದೆ….!

ಉತ್ತರಾಯಣಕೆ ಕಾಲಿಟ್ಟು
ಸೂರ್ಯ ನಮ್ಮಿಬ್ಬರನೂ
ದೂರಮಾಡುವ ಮುನ್ನ
ಚಳಿಯ ಸುಖವನು
ಕಂಬಳಿ ಹೊದ್ದು
ಅನುಭವಿಸಬೇಕಿದೆ…!


Leave a Reply

Back To Top