ಕಾವ್ಯ ಸಂಗಾತಿ

ಹಿಗ್ಗಿನ ಸುಗ್ಗಿ

ಶೃತಿ ಮೇಲುಸೀಮೆ

Lohri, Makar Sankranti, Pongal: History and Significance

ಚುಮುಚುಮು ಚಿಗುರೆಲೆ, ಹೊಸ ಪಸಿರು
ಬಣ್ಣ ಬಣ್ಣದ ರಂಗಿನ ಹೊಸ ಕಳೆ
ಹಿಗ್ಗಿ ಹಿಗ್ಗಿ ಸುಗ್ಗಿಯ ಹರುಷದ ಹೊನಲು
ಪಳ ಪಳ ಕಂಗೊಳಿಸಿತಿಹಳು ಭೂರಮೆ

ಕರ ಕರ ಚಪ್ಪರಿಸುತ ಸವಿಯುವ ಚಕ್ಕುಲಿ ಎಳ್ಳುoಡೆ
ಜಿಗಿ ಜಿಗಿ ನೊಣವ ಅಟ್ಟುತ ಕಬ್ಬಿನ ರಸವ ಹೀರುವ
ಘಮ ಘಮ ತುಪ್ಪದಲ್ಲಿ ಎಳ್ಳೂಹೋಳಿಗೆ ಅದ್ದಿ ತಿನ್ನೋಣ
ಡುಂ ಡುಂ ಸದ್ದಿನಲಿ ಗೆದ್ದ ಎತ್ತುಗಳ ಜಾಥಾ ನೆಡೆಸೋಣ

ತಕ ತಕ ಕುಣಿಯುತ್ತಾ ಬೀದಿಗೆ ಬಂದಿದೆ ಕರಡಿ
ರಂಗು ರಂಗಿನ ರಿಬ್ಬನ್ನು ಕೊಡಿಗೆ ಕಟ್ಟಿಕೊಂಡಿಹ ಕೊಲೆ ಬಸವ
ಮಿಣಿ ಮಿಣಿ ಮಿಂಚುವ ಉಡುಗೆ ತೊಟ್ಟಿಹಳು ಕೊರವಂಜಿ
ಜುಳು ಜುಳು ಗಂಗೆಯನ್ನು ಶಿರದ ಮೇಲೆ ಹೊತ್ತ ಒಕ್ಕಲು

ಎಳ್ಳು ಬೆಲ್ಲವ ಸವಿಯುತ ಒಳ್ಳೆಯ ಮಾತನಾಡುತ
ಉಯ್ಯಾಲೆಯ ಸುಖ ದುಃಖಗಳ ಸಮಾವಾಗಿ ತೂಗುತ
ಚಳಿಗೆ ಮುದುಡಿದ ಮೈಯ ಸೂರ್ಯ ರಶ್ಮಿಗೆ ಒಡ್ಡುತ
ಕುಗ್ಗದೆ, ಹಿಗ್ಗದೆ ಸಮ ಚಿತ್ತದಲಿ ಸಾಗೋಣ


Leave a Reply

Back To Top