ಹಾಯ್ಕುಗಳು

ಕಾವ್ಯ ಸಂಗಾತಿ

ಹಾಯ್ಕುಗಳು

ಸಂತೋಷ ಅಂಗಡಿ

ನಿನ್ನುಸುರಿನ ಉಗಿ
ತಾಗಿದ ಗಾಳಿ
ಅಂಡಲೆಯುತಿದೆ ತಣ್ಣಗಾಗಲು

ನೋವುಂಡ
ಎದೆಗೆ ಸದ್ದಿಲ್ಲದೆ
ಕಲ್ಲಾದ ಸಂಭ್ರಮ

ವಿಷಾದದ ಕಣ್ಣುಗಳಲಿ
ಸಂತ್ವಾನದ
ಹನಿಗಳು

ಹಾಡೊಂದು
ಜಾರಿತು
ಕಣ್ಣೊಳಗೆ ಕರಗಿ

ಕಡಲ ದಂಡೆ
ನಿನ್ನ ಒಲವು
ಅಲೆಯಾಗಿ ಅಪ್ಪಳಿಸುತಿದೆ ವಿರಹ

ಕಲ್ಲಿನ ಬಂಡೆ
ದುಬ್ಬದ ಮೇಲೆ ನಿದಾನ
ಹೊತ್ತು ನಡೆಯುತ್ತಿದೆ ಆಮೆ

ತೂಗು ಸೇತುವೆಯ ಕನಸು
ಕೆಳಗೆ ಹರಿಯುತಿರು
ನೀನು ನದಿಯಂತೆ

ದುಗುಡವೆಲ್ಲಾ ದುಂಡುಗೂಡಿಸಿ
ಬೊಗಸೆಯಲಿ ನುಂಗುವೆ
ವಸಂತ ಬರಲಿ ಬಾಗಿಲಿಗೆ

ಗರಿಕೆಯ ಮೊನಚಿಗೆ
ತುಂಡಾಗದೆ
ಅಪ್ಪಿದೆ ಇಬ್ಬನಿ

ದಂಡೆಯಲಿ
ತೆರೆಗಳ ಬುರುಗು
ಶಾಂತವೀಗ ಕಡಲು ಮತ್ತು ಒಡಲು.
………………

Leave a Reply

Back To Top