ಕಾವ್ಯ ಸಂಗಾತಿ
ಸುಗ್ಗಿಕಾಲ…
ಶಿವಲೀಲಾ ಹುಣಸಗಿ
ಅಯನದೊಳು ನಯನವಿರಿಸಿ
ಬದಲಾದ ಪ್ರಕೃತಿಗೆ ನಮಿಸೊಂದು ಬಾಕಿ
ಎತ್ತ ಸಾಗಿದರೂ ತೆನೆಹೊತ್ತ ಭಾವವು
ಮುತ್ತಿಡಲು ಕಾತರಿಸುವುದೊಂದೆ ಸಾಕಿ
ಬಾನ ಭಾಸ್ಕರ್ ಗೆ ಸುಗ್ಗಿಯ ಸಂಭ್ರವು
ಕಾಮನಬಿಲ್ಲನು ಬಾಗಿಸಿ ಅಪ್ಪಿದಂತೆ
ಕಬ್ಬಿನ ಗುಣಕಿಗಳ ಸಾಲಿನಲಿ ನಿಂತಂತೆ
ರಾಶಿ ರಾಶಿ ಹೊಳವುಗಳ ಅಂಚಿನಲಿಂದು
ದಿಕ್ಕು ಬದಲಿಸಿದ ನೇಸರನ ಜಾಡಿನಲಿ
ಬಲಿತ ಕಾಳುಗಳ ರೂಪದಲ್ಲಿ
ಹೊಲದೊಡೆಯನ ಬಾನಂಗಳದಲ್ಲಿ
ಹರವಿಕೊಂಡು ಕುಂತಿದೆ ಮೈಮನವಿಲ್ಲಿ
ಸುಗ್ಗಿಕಾಲ ಹಿಗ್ಗಿನ ಕಾಲ ಮನಸಿಗೆ
ಉತ್ತರೊತ್ತರ ದಾಪುಗಾಲಿಗೆ
ಮುತ್ತಿನ ಗೆಜ್ಜೆಯ ಹೆಜ್ಜೆ ನಾದಕೆ
ಪ್ರಕೃತಿ ಮನಸೋತು ಕುಂತಿದೆ
ಬಣ್ಣದ ಬದುಕೊಂದು ನವಿಲಂತೆ
ಜಗದ ಸುಂದರತೆಗೊಂದು ರಂಗು
ಮೂಡಲ ಮನೆಯ ಕದ ತೆರೆದಂತೆ
ಹೊಂಗಿರಣ ಚಿಮ್ಮಿದ ಹಬ್ಬದ ತೇರು
ಸುಗ್ಗಿಯ ಚಂದದ ವರ್ಣನೆ ಮೇಡಮ್.
ಹಬ್ಬದ ಶುಭಾಶಯಗಳು
ಸುಗ್ಗಿಯ ಹಬ್ಬ ದ ತೇರಿನ ಅಕ್ಷರ ಮಾಲೆ ಸುಂದರ ಮುತ್ತಿನ ಹಾರ ದಂತೆ ಮನಸ್ಸಿಗೆ ಉತ್ತರಾಯಣದ ಪರ್ವ ಕಾಲ ದ ಮುದವನ್ನು ನೀಡುತ್ತದೆ ತಮ್ಮ ಈ ಕವನ ಕುಸುಮ.ಆಭಿನಂದನೆಗಳು .
ಸುಗ್ಗಿಯ ಸಂಭ್ರಮೇ ಚೆಂದ .
ಕಾವ್ಯಯಾನ ಸೂಪರ್.
ಸುಂದರ ಬರಹ. ಬಂಗಾರ ವರ್ಣದ ತೆನೆಗಳಂತೆ ಸಾಲಿಟ್ಟ ಮುತ್ತಿನಕ್ಷರಗಳು
ಸಂಕ್ರಾಂತಿಯ ಸಂಭ್ರಮದ ಕವನ ಸುಂದರವಾಗಿ ಚಿತ್ರಿಸಿದ್ದಿರಿ.ಉತ್ತರಾಯಣ ಶುಭವೆಂಬ ಕಾಲಕೆ ಕವಿತೆ ಸೂಪರ್….