ಗಜಲ್
ಮಾಜಾನ್ ಮಸ್ಕಿ


ವಿಶಾಖದತ್ತ ಭುವನೇಶ್ವರಿಯ ಮಗನಾಗಿ ಹುಟ್ಟಿದರು ವಿವೇಕಾನಂದ
ಭಾರತೀಯ ಸಂಸ್ಕೃತಿಯ ವಿಶ್ವವಿಖ್ಯಾತಕ್ಕೆ ಮೆರಗಾದರು ವಿವೇಕಾನಂದ
ಚಿಕಾಗೋದಲ್ಲಿಯ ಭಾಷಣದಿ ವಿಶ್ವವನ್ನೇ ಬೆರಗುಗೊಳಿಸಿದರು
ಸಹೋದರತ್ವದ ಗುಣದಿ ವೀರಸನ್ಯಾಸಿಯಾಗಿ ಬೆಳೆದರು ವಿವೇಕಾನಂದ
ಏಳಿ ಎದ್ದೇಳಿ ಗುರಿ ಮುಟ್ಟುವವರೆಗೆ ನಿಲ್ಲದಿರಿ ಎಂದು ಘರ್ಜಿಸಿ
ಯುವಕರ ಸೋಮಾರಿತನ ಬಡಿದು ಓಡಿಸಿದರು ವಿವೇಕಾನಂದ
ಜೀವ ನಮ್ಮ ಕೈಯ್ಯಲ್ಲಿ ಇಲ್ಲ ಜೀವನ ನಮ್ಮ ಕೈಯ್ಯಲ್ಲಿ ಇದೆ ಎಂದು ನಂಬಿ
ಮೂಢನಂಬಿಕೆ ಬಿಟ್ಟು ಜೀವನ ಮಾರ್ಗ ತೋರಿಸಿದರು ವಿವೇಕಾನಂದ
ಭಾರತ ನಿರ್ಮಾಣದ ಅದಮ್ಯ ಚೇತನ ಆದ್ಯಾತ್ಮಿಕತೆಯ ಮೇರು ಪರ್ವತ ಇವರು
ಮಾಜಾ ನರೇಂದ್ರರು ವಿಶ್ವ ಮಾನವ ಸಿಡಿಲ ಸಂತರಾಗಿ ಮಿಂಚಿದರು ವಿವೇಕಾನಂದ