ಪುಸ್ತಕ ಸಂಗಾತಿ

ಫಾತಿಮಾ ಶೇಖ್

ಆಧುನಿಕ ಭಾರತದ ಮೊದಲ ಮುಸ್ಲಿಂ ಶಿಕ್ಷಕಿ

ಚರಿತ್ರೆಯಸೂತಕದಪುಟಗಳಲ್ಲಿಸಿಲುಕಿದಉರ್ಪೊಂಕಿಮಾಫಾತಿಮಾಶೇಖ್

          ೦೯-೦೧-೨೦೨೨ ರಂದು ಫಾತಿಮಾ ಶೇಖ್ ಅವರ ೧೯೧ ನೆಯ ಜನ್ಮ ದಿನಾಚರಣೆ

ಜೀವನದ ಹಕ್ಕು, ನ್ಯಾಯಹಕ್ಕು, ಸ್ವಾತಂತ್ರ ಹಕ್ಕು, ಅಭಿವ್ಯಕ್ತಿ ಸ್ವಾತಂತ್ರö್ಯದ ಹಕ್ಕು, ಶೈಕ್ಷಣಿಕ ಹಕ್ಕು, ಸಾಮಾಜಿಕ, ವೈಜ್ಞಾನಿಕ, ಸಾಂಸ್ಕೃತಿಕ ಮುಂತಾದವುಗಳನ್ನು ಒಟ್ಟು ಗೂಡಿಸಿ ಮಾನವ ಹಕ್ಕು ಎಂದು ಹೆಸರಿಸಿದರು.

ಮಾನವ ಹಕ್ಕುಗಳ ಆಯೋಗ ರಕ್ಷಣೆ, ಉತ್ತೇಜನ, ಜೀವನ ಸ್ವಾತಂತ್ರö್ಯ, ಸಮಾನತೆ, ಸಂವಿಧಾನದ ಭರವಸೆಯ ವ್ಯಕ್ತಿಯ ಘನತೆಗೆ ಸಂಬಂಧಿಸಿದಂತೆ ಅನೇಕ ಕಾನೂನುಗಳನ್ನು ಜಾರಿಗೆ ತಂದರೂ ಕೂಡಾ ನಮ್ಮ ದೇಶದ ೧೮% ರಷ್ಟು ಜನಸಂಖ್ಯೆ ಇರುವ ಮುಸ್ಲಿಂ ಜನಾಂಗದ ಸ್ಥಿತಿ ದಯನೀಯವಾಗಿದೆ.

ದಮನಿತ, ಶೋಷಿತ, ದಲಿತ, ನಿಮ್ನವರ್ಗದ ಸ್ಥಿತಿಗಿಂತಲೂ ಕನಿಷ್ಠ ಮಟ್ಟದಲ್ಲಿದೆ ಎಂಬುದು ಜಸ್ಟಿಸ್ ರಾಜಿಂದರ್ ಸಾಚಾರ್ ಅವರ ವರದಿ ಕಣ್ಣಿಗೆ ಕಾಣುವ ಹುಣ್ಣಿಗೆ ಹಿಡಿದ ಕನ್ನಡಿಯಂತಿದೆ.

ಮಹಿಳೆಯರು ಶೋಷಣೆಯಿಂದ ಮುಕ್ತರಾಗಲು ಅಕ್ಷರ ಒಂದು ಪ್ರಮುಖ ಪಾಶಾಸ್ತç. ದಲಿತರ, ಅಲ್ಪಸಂಖ್ಯಾತರ ಮಹಿಳೆಯರ ಮೇಲೆ ಇಂದಿಗೂ ಶೋಷಣೆ ನಡೆಯುತ್ತಲೇ ಇದೆ. ಕಾರಣ ಅಕ್ಷರ ವಂಚಿತ ಸಮಾಜ.

ಪ್ರಸಕ್ತ ಸಂದರ್ಭದಲ್ಲಿ ಸರ್ಕಾರ ಅನೇಕ ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಿದೆ. ಅದರಲ್ಲಿ ‘ಬೇಟಿ ಬಚಾವೋ – ಬೇಟಿ ಪಡಾವೋ’, ‘ಬಾ ಬಾಲೆ ಶಾಲೆಗೆ’, ‘ನಮ್ಮ ಚಿತ್ತ ಶಾಲೆಯತ್ತ’, ‘ವಿದ್ಯಾಗಮ’ ಮುಂತಾದ ಯೋಜನೆಗಳು ಜಾರಿಗೆ ತಂದು ಮಹಿಳೆಯರಿಗೆ ಉಚಿತ ಶಿಕ್ಷಣ ನೀಡುವ ಕಾನೂನು ಜಾರಿಗೆ ತಂದರೂ ಇನ್ನೂ ಪೂರ್ಣ ಪ್ರಮಾಣದಲ್ಲಿ ಮಹಿಳೆಯರು ಸಾಕ್ಷರರಾಗಿಲ್ಲ. ಭಾರತೀಯ ಮುಸ್ಲಿಂ ಮಹಿಳೆಯರು ಸಾಮಾಜಿಕ, ಕೌಟುಂಬಿಕ, ಶೈಕ್ಷಣಿಕ, ರಾಜಕೀಯ, ಆರ್ಥಿಕ, ಔದ್ಯೋಗಿಕವಾಗಿ ಊಹಿಸಲಾರದಷ್ಟು ಹಿಂದುಳಿದಿದ್ದಾರೆ.

‘ಹೆಣ್ಣೊAದು ಕಲಿತರೆ ಶಾಲೆಯೊಂದು ತೆರೆದಂತೆ’ ಎಂಬ ಹಿರಿಯರ ಮಾತನ್ನು ಅಕ್ಷರ ಸಹ ಸತ್ಯವೆಂದು ಮನಗಂಡವರು ಜೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ, ಫಾತಿಮಾ ಶೇಖ್ ಹಾಗೂ ಉಸ್ಮಾನ್ ಶೇಖ್ ಮುಂತಾದವರು ಹದಿನೆಂಟನೇ ಶತಮಾನದಲ್ಲಿ ಅಕ್ಷರ ಕ್ರಾಂತಿ ಮಾಡಿದ ಧ್ರುವತಾರೆಗಳು.

ಅಕ್ಷರಗಳು ಒಂದು ವರ್ಗ, ಜಾತಿ, ಪಂಗಡಗಳ ಸ್ವತ್ತಲ್ಲ. ಕಲಿತವರ ಸ್ವತ್ತು ಎಂದು ಸಾರಿ ಸಾರಿ ಹೇಳಿದವರು. ಸಾಮಾಜಿಕ ಹೋರಾಟದ ಮೂಲಕ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿದ ಫುಲೆ ದಂಪತಿಗಳ ಜೊತೆಯಲ್ಲಿ ಭಾರತದ ಆಧುನಿಕ ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರ ತರಬೇತಿ ಪಡೆದುಕೊಂಡು ಎಲ್ಲಾ ದಾನಕ್ಕಿಂತಲೂ ಶ್ರೇಷ್ಠವಾದ ದಾನ ವಿದ್ಯಾದಾನವೆಂಬುದು ಮನಗಂಡಿದ್ದರು. ಆ ಕಾರಣಕ್ಕಾಗಿಯೇ ವಿದ್ಯಾದಾನ ನೀಡಲು ಪಣತೊಟ್ಟವರು ಭಾರತದ ಮೊದಲ ಮುಸ್ಲಿಂ ಶಿಕ್ಷಕಿ ಫಾತಿಮಾ ಶೇಖ್‌ರವರು.

ಶಿಕ್ಷಕಿ ಫಾತಿಮಾ ಶೇಖ್ ಮಹಾರಾಷ್ಟç ರಾಜ್ಯದ ನೇಕಾರ ಕುಟುಂಬದ ಕರುಳ ಕುಡಿ. ಬಾಲ್ಯದಲ್ಲಿಯೇ ಮಾತಾಪಿತರನ್ನು ಕಳೆದುಕೊಂಡ ನತದೃಷ್ಠೆ. ಅಣ್ಣನ ಅಂಗೈಯಲ್ಲಿ ಬೆಳೆದ ಅಕ್ಕರೆಯ ತಂಗಿ, ಸಾವಿತ್ರಿಬಾಯಿ ಫುಲೆಯವರ ಪ್ರೀತಿಯ ಸಹೇಲಿ, ಫುಲೆ ದಂಪತಿಗಳ ಯಶಸ್ಸಿನ ಹೆಗಲಿಗೆ ಕೀಲೆಣ್ಣೆ.

ಪೇಶ್ವೆಶಾಹಿ ಸರ್ಕಾರ ಮಹಿಳಾ ಸಮೂಹದ ಶಿಕ್ಷಣಕ್ಕೆ ವಿರೋಧಿಯಾಗಿದ್ದ ಕಾಲಘಟ್ಟವದು. ದಲಿತ, ಮುಸ್ಲಿಂ ಮುಂತಾದ ದಮನಿತ ಶೋಷಿತ ಸಮುದಾಯಕ್ಕೆ ಶಿಕ್ಷಣವೆಂದರೆ ಗಗನ ಕುಸುಮವಾಗಿತ್ತು. ಪೇಶ್ವೆಗಳ ಒತ್ತಾಯಕ್ಕೆ ಮಣಿದು ಗೋವಿಂದರಾವ್ ಫುಲೆಯವರು ಜೋತಿಬಾ ಫುಲೆಯವರಿಗೆ ಮನೆಯಿಂದ ಹೊರ ಹಾಕಿದಾಗ ಬೀದಿಗೆ ಬಿದ್ದ ಬದುಕಿಗೆ ಸ್ಥಿರತೆ ಒದಗಿಸಲು ಗೃಹ ರಕ್ಷಣೆಯ ಜೊತೆಗೆ ದವಸ ಧಾನ್ಯ, ಪಾತ್ರೆ-ಪಗಡಿ ಆತ್ಮಸ್ಥೆöÊರ್ಯ ಆಲೋಚನೆಗಳನ್ನು ಧಾರೆ ಎರೆದವರು ಮಾತೆ ಫಾತಿಮಾ ಮತ್ತು ಅವರ ಸಹೋದರ ಉಸ್ಮಾನ್ ಶೇಖ್ ಅವರೆಂಬುದು ಇತಿಹಾಸ.

ಭಾರತರತ್ನಕ್ಕಿಂತ ಉನ್ನತ ವ್ಯಕ್ತಿತ್ವ ಹೊಂದಿದ ಅಕ್ಷರದ ಆಯಿ, ಸಾವಿತ್ರಿಬಾಯಿ ಫುಲೆ ಅವರ ಸಹೋದ್ಯೋಗಿ ಜೀವದ ಗೆಳತಿ ಮುಸ್ಲಿಂ ಸಮುದಾಯದ ಪೆಹಲಿ ಉರ್ಪೊಂಕಿ ಮಾತಾಜಿ ಫಾತಿಮಾ ಶೇಖ್.

ಉಸ್ಮಾನ್ ವಾಡಾ ಮನೆಯಲ್ಲಿ ಗೃಹಪಾಠ ಆರಂಭಿಸಿದ ಭಾರತ ದೇಶದ ಮೊದಲ ಮುಸ್ಲಿಂ ಮಹಿಳಾ ಶಿಕ್ಷಕಿ. ಆಧುನಿಕ ಭಾರತದ ನಿರ್ಮಾಣದಲ್ಲಿ ಫಾತಿಮಾ ಮೆಟ್ಟಿದ ಕಲ್ಲು ಮುಳ್ಳು, ಸವೆಸಿದ ಹೆಜ್ಜೆ, ಎದುರಿಸಿದ ಸಂಕಷ್ಟ ಅಪಾರವಾದುದು.

ಸಾವಿತ್ರಿಬಾಯಿ ಫುಲೆಯವರು ಶಾಲೆಗೆ ಪಾಠ ಮಾಡಲು ಹೋಗುವ ಸಂದರ್ಭದಲ್ಲಿ ಶಿಕ್ಷಣ ದ್ರೋಹಿಗಳು ಎಸೆದ ಕಲ್ಲು, ಸಿಡಿಸಿದ ಸಗಣಿಯ ರಾಡಿ, ನಿಂದನೆಯ ಕುಹಕದ ಮಾತುಗಳು ಕೇವಲ ಫುಲೆ ದಂಪತಿಗಳಿಗೆ ಮಾತ್ರ ತಗುಲಲಿಲ್ಲ. ಫಾತಿಮಾ ಶೇಖ್ ಮತ್ತು ಅವರ ಸಹೋದರ ಉಸ್ಮಾನ್ ಶೇಖ್ ಅವರಿಗೂ ತಗುಲಿದೆ. ಹಾಗಾಗಿ, ಫುಲೆ ದಂಪತಿಗಳಿಗೆ ಸಿಗುವ ಕೀರ್ತಿ, ಗೌರವ ಶೇಖ್ ಸಹೋದರ ಸಹೋದರಿಯವರಿಗೂ ಸಲ್ಲಬೇಕಿತ್ತು.

೧೯೦ ವರ್ಷಗಳು ಗತಿಸಿದ ನಂತರ ಫುಲೆ ದಂಪತಿಗಳ ಸಾಧನೆ ಮುನ್ನೆಲೆಗೆ ಬರುತ್ತಿದೆ. ಆದರೆ ಫಾತಿಮಾರ ಸಾಧನೆ, ಸಹಕಾರ, ಅವರ ಹೋರಾಟದ ಚರಿತ್ರೆಯ ಪುಟಗಳಿಗೆ ಸೂತಕ ಆವರಿಸಿದೆ. ಫಾತಿಮಾ ಶೇಖ್ ಅವರ ಹೆಸರನ್ನೂ ಮುನ್ನೆಲೆಗೆ ತಂದು ಓಟ್ ಬ್ಯಾಂಕ್ ಮಾಡಿಕೊಳ್ಳುವ ಹಪಾಹಪಿ ಯಾರಿಗೂ ಇಲ್ಲ. ಆದರೆ ಅವರ ಆಶಯದಂತೆ ಪ್ರತಿಯೊರ್ವ ಮಹಿಳೆ ಸಾಕ್ಷರರಾಗಬೇಕೆಂಬ ಕನಸು ನನಸಾಗಬೇಕಿದೆ. ಮಹಾರಾಷ್ಟç ಸರ್ಕಾರ ಉರ್ದು ಪಠ್ಯ ಪುಸ್ತಕದಲ್ಲಿ ಫಾತಿಮಾರಿಗೆ ಸ್ಮರಿಸಿದೆ ಆದರೆ ಅವರಿಗೆ ಸಿಗಬೇಕಾದ ಗೌರವ ಮನ್ನಣೆ ಸಿಕ್ಕಿಲ್ಲ.

ನಾವು ಮರೆತ ಸಾಧಕಿ ಫಾತಿಮಾರಿಗೆ ಆಂದ್ರ ಪ್ರದೇಶದ ಹಿರಿಯ ಬರಹಗಾರ, ಸಾಹಿತಿ ಮತ್ತು ಸಾಮಾಜಿಕ ಚಿಂತಕ ಸೈಯದ್ ನಸೀರ್ ಅಹಮ್ಮದ್ ರವರು ‘ಆಧುನಿಕ ಭಾರತದ ಮೊದಲ ಮುಸ್ಲಿಂ ಶಿಕ್ಷಕಿ ಫಾತಿಮಾ ಶೇಖ್’ ಅವರ ಕುರಿತಾಗಿ ತೆಲುಗು ಭಾಷೆಯಲ್ಲಿ ಪುಸ್ತಕ ಪ್ರಕಟಿಸಿದ್ದಾರೆ. ಕನ್ನಡ ಸಾರಸ್ವತ ಲೋಕದಲ್ಲಿ ಹಿರಿಯ ಚಿಂತಕರಾದ ಡಾ. ಕೆ.ಷರೀಫಾ, ಹಿರಿಯ ಪತ್ರಕರ್ತ ಸನತ್ ಕುಮಾರ ಬೆಳಗಲಿ, ಮಹಿಳಾ ಹೋರಾಟಗಾರ್ತಿ ಕೆ.ನೀಲಾ, ವೈದ್ಯೆ, ಸಾಹಿತಿ ಡಾ.ಹೆಚ್.ಎಸ್. ಅನುಪಮಾ ಅವರು ಇತಿಹಾಸದ ಮೇಲೆ ಬೆಳಕು ಚೆಲ್ಲುವ ಪುಟ್ಟ ಪ್ರಯತ್ನ ಮಾಡಿದ್ದಾರೆ.

ಗದುಗಿನ ತೋಂಟದಾರ್ಯೆ ಮಠದ ದಲಿತ ವಿಮೋಚನಾ ಕೇಂದ್ರ, ದಲಿತ ಸಾಹಿತ್ಯ ಪರಿಷತ್ತು ರಾಜ್ಯ ಘಟಕ ಸಾವಿತ್ರಿಬಾಯಿ ಫುಲೆ, ಫಾತಿಮಾ ಶೇಖ್ ಅವರ ಹೆಸರಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಗುರುಮಾತೆಯರಿಗೆ ಪುರಸ್ಕಾರ ನೀಡಿ ಗೌರವಿಸಿದೆ.

ಪ್ರಜಾವಾಣಿ ಪತ್ರಿಕೆಯಲ್ಲಿ ಡಾ. ಕೆ.ಷರೀಫಾರವರ ಲೇಖನ, ವಾರ್ತಾಭಾರತಿಯಲ್ಲಿ ಸನತ್ ಕುಮಾರ ಬೆಳಗಲಿಯವರ ಲೇಖನ, ಸಾವಿತ್ರಿಬಾಯಿ ಫುಲೆಯವರ ಪುಸ್ತಕ ರಚಿಸಿದ ಡಾ. ಹೆಚ್.ಎಸ್.ಅನುಪಮಾ ಅವರ ಉಲ್ಲೇಖದನ್ವಯ ಗೆಳೆಯ, ಯುವ ಬರಹಗಾರ ಕಾ.ಹು.ಚಾನ್‌ಪಾಷ ಅವರ ಕುತೂಹಲ ಇಮ್ಮಡಿಯಾಯ್ತು. ಕೋಲಾರದ ಅಲ್-ಅಮೀನ್ ಪ್ರೌಢಶಾಲೆಯ ಕನ್ನಡ ಭಾಷಾ ಶಿಕ್ಷಕ ಕಾ.ಹು ಹೊಸತನಕ್ಕೆ ತುಡಿಯುವ ಗೆಳೆಯ. ಕರ್ನಾಟಕ, ಆಂದ್ರ ಪ್ರದೇಶದ ಸಾಹಿತಿ ಮತ್ತು ಚಿಂತಕರ ಜೊತೆಗೂಡಿ ಚರ್ಚಿಸಿದ ಪ್ರತಿಫಲವಾಗಿ ಫಾತಿಮಾ ಶೇಖ್‌ರವರ ಕುರಿತ ಸೈಯದ್ ನಸೀರ್ ಅಹಮ್ಮದ್ ಅವರ ತೆಲುಗು ಮೂಲ ಕೃತಿಯನ್ನು ಕನ್ನಡೀಕರಿಸಲು ತೊಡಗಿಕೊಂಡರು. ಉರ್ದು ಭಾಷೆಗೂ ಅನುವಾದಿಸಲು ಕೈಂಕರ್ಯರಾದರು. ಈಗಾಗಲೇ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಸಲೀಂ ಅವರ ಮುಸ್ಲಿಂ ಸಂವೇದನೆಯ ತೆಲುಗು ಕಥೆಗಳನ್ನು ಕಾ.ಹು ಅತ್ಯಂತ ಶ್ರದ್ಧೆಯಿಂದ ಅನುವಾದ ಮಾಡಿದ್ದಾರೆ.

ಆಂದ್ರ ಪ್ರದೇಶದ ಗಡಿಭಾಗದ ಸೆರಗು ತೆಲುಗು ಭಾಷೆಯನ್ನು ಸುಲಲಿತವಾಗಿ ಕನ್ನಡಕ್ಕೆ ಅನುವಾದ ಮಾಡುತ್ತಿದ್ದಾರೆ. ಮೂಲ ಕೃತಿಗೆ ಭಂಗಬಾರದೆ ಹಿರಿಯರಿಂದ ಅನೇಕ ಉಪಯುಕ್ತ ಮಾಹಿತಿಗಳನ್ನು ಪಡೆದುಕೊಂಡು ಫಾತಿಮಾ ಶೇಖ್ ಅವರ ಕೃತಿಯನ್ನು ಪ್ರಕಟಿಸಲು ಸಜ್ಜಾಗಿದ್ದಾರೆ.

ಜ್ಞಾನಾಧಾರಿತ, ಉದ್ಯೋಗ, ಧಾರ್ಮಿಕ, ಶೈಕ್ಷಣಿಕ ಆಧಾರದಲ್ಲಿ ಸೂಫಿ ಜಲಾಲುದ್ದೀನ್ ರೊಮಿಯವರ ತಂದೆ ಶಿಕ್ಷಣ ಸಂಸ್ಥೆಯೊAದನ್ನು ಹುಟ್ಟಿಹಾಕಿದ್ದರು. ಜಗತ್ತಿನಲ್ಲಿಯೇ ಪ್ರಸಿದ್ಧವಾಗಿದ್ದ ಶಿಕ್ಷಣ ಸಂಸ್ಥೆ ಅದಾಗಿತ್ತು. ೨೧ ನೇ ಶತಮಾನದ ಇಂದಿನ ದಿನಮಾನಗಳಲ್ಲಿ ಶಿಕ್ಷಣ ಸಂಸ್ಥೆಗಳು ವ್ಯಾಪಾರಿ ಕೇಂದ್ರಗಳಾಗುತ್ತಿದೆ ಎಂಬ ಅಪವಾದ ಬಲವಾಗಿ ಕೇಳಿ ಬರುತ್ತಿದೆ. ದೇಶದ ಜನ ಸಂಖ್ಯೆಯಲ್ಲಿ ಶೇಕಡ ೫೩.೭ ಭಾರತದ ಹೆಣ್ಣು ಮಕ್ಕಳ ಸಾಕ್ಷರತೆ ಇದೆ. ಸಾಚಾರ್ ವರದಿಯಂತೆ ಶಿಕ್ಷಣದ ದುಸ್ಥಿತಿ ನೋಡಿದರೆ; ‘ಮುಸ್ಲೀಮರ ೧೪ ವರ್ಷಕ್ಕಿಂತ ಕೆಳಗಿನ ೨೫% ಮಕ್ಕಳು ಶಾಲೆಯೇ ಸೇರಿಲ್ಲ. ಇದಕ್ಕೆ ಒಂದು ಕಾರಣ, ಮುಸಲ್ಮಾನರು ಹೆಚ್ಚಿಗೆ ವಾಸವಿರುವ ಪ್ರದೇಶಗಳಲ್ಲಿ ಅನೇಕ ಕಡೆ ಪ್ರಾಥಮಿಕ ಶಾಲೆಗಳೇ ಇಲ್ಲ. ಶಾಲೆಗೆ ದಾಖಲಾದವರ ಪೈಕಿ ಎಸ್.ಎಸ್.ಎಲ್.ಸಿ ವರೆಗೆ ಬರುವವರು ೧೭% ಮಾತ್ರ. ಒಟ್ಟಿನಲ್ಲಿ ೧೫% ಜನಸಂಖ್ಯೆ ಇದ್ದರೂ ೩.೪ ರಷ್ಟು ಮಾತ್ರ ಪದವೀಧರರು. ೩% ಮಾತ್ರ ಸ್ನಾತಕೋತ್ತರರು, ಐ.ಐ.ಎಂ.ಗಳಲ್ಲಿ ದಾಖಲಾದವರು ೧.೩ ಮಾತ್ರ. ಮದ್ರಸಾಗಳಲ್ಲಿ ಓದುತ್ತಿರುವವರ ಪ್ರಮಾಣ ಬರೀ ೩%.

ಸರಕಾರಿ ಉದ್ಯೋಗಗಳಲ್ಲಿ, ಐ.ಎ.ಎಸ್. ಅಧಿಕಾರಿಗಳ ಪೈಕಿ ಬರೀ ೩%, ಐ.ಪಿ.ಎಸ್. ನವರು ೪%, ಐ.ಎಫ್.ಎಸ್.ನಲ್ಲಿ ಬರೀ ೧.೮%. ನಾಗರಿಕ ಸೇವಾ ಪರೀಕ್ಷೆ ಬರೆದವರು ೪.೯%, ಯಾವ ರಾಜ್ಯದಲ್ಲಿಯೂ ಯಾವ ಇಲಾಖೆಯಲ್ಲಿಯೂ ಜನಸಂಖ್ಯೆಗೆ ತಕ್ಕಷ್ಟು ನೌಕರಿಗಳಿಲ್ಲ. ರೈಲ್ವೆ ಇಲಾಖೆಯಲ್ಲಿ ೪.೫%, ಬ್ಯಾಂಕ್‌ಗಳಲ್ಲಿ ೨.೨%, ಅಂಚೆ ಇಲಾಖೆಯಲ್ಲಿ ೫%, ವಿಶ್ವವಿದ್ಯಾಲಯಗಳಲ್ಲಿ ೪.೭%, ರಾಜ್ಯ ಸರಕಾರಗಳ ಇಲಾಖೆಗಳಲ್ಲಿ ಒಟ್ಟು ೬.೩%. ಅಂದರೆ ಶಿಕ್ಷಣ ಇಲಾಖೆಯಲ್ಲಿ ೪.೪%, ಸಾರಿಗೆಯಲ್ಲಿ ೬.೫%, ಗೃಹಲಾಖೆಗಳಲ್ಲಿ ೭.೫ (ಇವರಲ್ಲಿ ಪೇದೆಗಳೇ ೬%), ಆರೋಗ್ಯ ಇಲಾಖೆಗಳಲ್ಲಿ ೪.೪%… ಈ ಮೇಲಿನ ಸಂಖ್ಯಾ ಪ್ರಮಾಣದಲ್ಲೂ ಹೆಚ್ಚಿನವರು ಕೆಳದರ್ಜೆಯ ನೌಕರಿಗಳಲ್ಲಿರುವವರು. ಉನ್ನತ ದರ್ಜೆಯ ಹುದ್ದೆಗಳಲ್ಲಿ ಇಲ್ಲವೆನ್ನುವಷ್ಟು ಕಡಿಮೆ!’ ಭಾರತದ ಮುಸ್ಲಿಂ ಹೆಣ್ಣುಮಕ್ಕಳ ಸ್ಥಿತಿ ಶೋಚನೀಯವಾಗಿದೆ. ಎಲ್ಲಾ ಜಾತಿಯ ಮಹಿಳೆಯರಿಗಿಂತಲೂ ಕನಿಷ್ಠ ಪ್ರಮಾಣದಲ್ಲಿ ಮುಸ್ಲಿಂ ಮಹಿಳೆಯರು ಶಿಕ್ಷಣವಂತರಾಗಿದ್ದಾರೆ.

ಹೊಸ ಪೀಳಿಗೆಯ ಪಾಲಿಗೆ ಫಾತಿಮಾ ಅನ್ಯರಾಗಿ ಕಳೆದು ಹೋಗಬಾರದು. ಅವರ ಹೋರಾಟ, ಬದುಕು ಕುರಿತು ಇನ್ನಷ್ಟು ಪರಿಶೋಧನೆಗಳು ನಡೆಯಬೇಕಿದೆ. ಪುರುಷ ಪ್ರಧಾನ ಸಮಾಜ ಮಹಿಳೆಯರ ಸಾಧನೆಗಳಿಗೆ ಬುರ್ಖಾ ತೊಡಿಸದೆ ಅವರ ಸಮಾಜಮುಖಿ ಕಾರ್ಯಗಳಿಗೆ ಪ್ರೋತ್ಸಾಹಿಸಬೇಕಿದೆ. ಈ ದೆಸೆಯಲ್ಲಿ ಗೆಳೆಯ ಕಾ.ಹು.ಚಾನ್‌ಪಾಷ ಮತ್ತು ಮೂಲ ಲೇಖಕ ಸೈಯದ್ ನಸೀರ್ ಅಹಮ್ಮದ್ ಅವರು ಅಭಿನಂದನಾರ್ಹರು.

ಭಾರತೀಯ ಇನ್ನಿತರೆ ಭಾಷೆಗಳಲ್ಲಿ ಫಾತಿಮಾ ಶೇಖ್ ಅವರ ಕೃತಿ ಅನುವಾದಗೊಳ್ಳಲಿ. ಐತಿಹಾಸಿಕವಾಗಿ ಅನ್ಯಾಯಕ್ಕೊಳಪಟ್ಟ ಫಾತಿಮಾ ಅವರಿಗೆ ಸಾಮಾಜಿಕ, ಚಾರಿತ್ರಿಕ ನ್ಯಾಯಸಿಗಲಿ. ಈ ದೆಸೆಯಲ್ಲಿ ಕಾರ್ಯಪ್ರವೃತ್ತರಾದ ಮಹನೀಯರಿಗೆ ಸಲಾಂ ಹೇಳಲೇಬೇಕು.

          ಮನದ ಮಲ್ಲಿಗೆ (ಚುಟುಕು ಸಂಕಲನ), ಜನ ಮರುಳೋ! ಜಾತ್ರೆ ಮರುಳೋ! (ಕಥಾ ಸಂಕಲನ), ಭಲೇ! ಗಿಣಿರಾಮ, ಮೂರು ವರಗಳು (ಮಕ್ಕಳ ನಾಟಕ) – ಇವು ಇವರ ಸ್ವತಂತ್ರ ಕೃತಿಗಳು. ‘ಓ ನನ್ನ ಚೇತನ’, ‘ಕಗ್ಗತ್ತಲೆಯ ಮಿಂಚು ಹುಳುಗಳು’, ‘ಗರಿಬಿಚ್ಚಿದ ಹಕ್ಕಿಗಳು’, ‘ಬೀಜದೊಳಗಿನ ವೃಕ್ಷಗಳು’, ‘ಸಾಗರದಾಳದ ಮುತ್ತುಗಳು’, ‘ಮೊಗ್ಗು ಅರಳಿದಾಗ’ – ಇವು ರಾಜ್ಯ ಮಟ್ಟದ ಸಂಪಾದಿತ ಕೃತಿಗಳು.

          ಸಲೀಂ ಅವರ ಕಥೆಗಳು (ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ತೆಲುಗು ಸಾಹಿತಿ ಸಲೀಂ ಅವರ ಸಮಗ್ರ ಕಥಾ ಸಾಹಿತ್ಯದಲ್ಲಿನ ಮುಸ್ಲಿಂ ಸಂವೇದನೆಯ ಕಥೆಗಳು) ಎಂಬುದು ಇವರ ಅನುವಾದ ಕೃತಿ. ತೆಲುಗು ಭಾಷೆಯಿಂದ ಕನ್ನಡಕ್ಕೆ ಹಲವಾರು ಕಥೆ, ಕವನಗಳನ್ನು ಅನುವಾದ ಮಾಡಿದ್ದಾರೆ. ಕುವೆಂಪು ವಿಶ್ವವಿದ್ಯಾಲಯದ ದ್ವಿತೀಯ ಬಿ.ಎ., ಬಿ.ಎಸ್ಸಿ., ಬಿ.ಎಸ್.ಡಬ್ಲುö್ಯ ಪದವಿಯ ತೃತೀಯ ಸೆಮಿಸ್ಟರ್ ನುಡಿ ಸಂಪದ-೩ ಪಠ್ಯಪುಸ್ತಕದಲ್ಲಿ ‘ನನ್ನ ನಮಾಜ್’ ಕವಿತೆ ಸೇರ್ಪಡೆಯಾಗಿದೆ. ಇವರಿಗೆ ‘ಕಾವ್ಯಶ್ರೀ ಪ್ರಶಸ್ತಿ’, ‘ಸಾಹಿತ್ಯ ಶ್ರೀ ಪ್ರಶಸ್ತಿ’, ‘ಚುಟುಕು ಕವಿ ಶ್ರೇಷ್ಠ ಪ್ರಶಸ್ತಿ’ ಗಳು ಲಭಿಸಿವೆ.

ಸೈಯದ್ ನಸೀರ್ ಅಹಮ್ಮದ್ ಅವರು ಸಾಹಿತ್ಯ ಸೇವೆಯನ್ನು ಗುರುತಿಸಿ ತೆಲುಗು ಭಾಷಾ ಪುರಸ್ಕಾರ, ಡಾ|| ಬಿ.ಆರ್.ಅಂಬೇಡ್ಕರ್ ಫೆಲೋಷಿಪ್ ಪ್ರಶಸ್ತಿ, ಅಷ್ಫಾಖುಲ್ಲಾ ಖಾನ್ ಸ್ಮಾರಕ ಪ್ರಶಸ್ತಿ, ಜೀವಿತ ಸಾಫಲ್ಯಾ ಪುರಸ್ಕಾರ, ಮಾಟಿ ರತನ್ ಪುರಸ್ಕಾರ – ಹೀಗೆ ಇನ್ನೂ ಹಲವಾರು ಪ್ರಶಸ್ತಿಗಳು ಲಭಿಸಿವೆ.

ತೆಲುಗು ಮೂಲ : ಸೈಯದ್ ನಸೀರ್ ಅಹಮ್ಮದ್

ಕನ್ನಡಕ್ಕೆ : ಕಾ.ಹು.ಚಾನ್‌ಪಾಷ

ಪ್ರಕಾಶನ : ಪೂರ್ಣದೃಷ್ಠಿ ಪ್ರಕಾಶನ, ಬಂಗಾರಪೇಟೆ

ಪ್ರತಿಗಳಿಗಾಗಿ : ೭೦೧೯೯೩೮೩೮೫


ಎ.ಎಸ್.ಮಕಾನದಾರ

One thought on “

Leave a Reply

Back To Top