ಕಾವ್ಯ ಸಂಗಾತಿ
ತಪ್ಪಲ್ಲದ ತಪ್ಪು..
ಪ್ರಾಥಃಸ್ಮರಣೀಯ
ಪಂಚ ಕನ್ಯೆಯರು
ಬ್ರಹ್ಮನ ಅತೀ ಸುಂದರ ಸೃಷ್ಟಿ ಅಹಲ್ಯ
ಮಹರ್ಷಿ ಗೌತಮನ ಸತಿ
ಮಹಾ ಪಾತಿವ್ರತ್ಯಕ್ಕೆ ಪ್ರಸಿದ್ಧಿ
ಇಂದ್ರನ ಕುಟಿಲತೆ ಬಲಿಪಶು ಅಹಲ್ಯ
ದಾಂಪತ್ಯ ದ್ರೋಹ
ಪತಿಯಿಂದ ಶಾಪಗ್ರಸ್ತ…
ತಪ್ಪು ಮಾನವನ ಸಹಜ ಗುಣ
ಗೊತ್ತಿಲ್ಲದೆ ಘಟಿಸುತ್ತದೆ ಕೆಲವೊಮ್ಮೆ
ರೂಪವತಿ ಭಾರ್ಯೆ ಶತ್ರು
ಅನಿಸಿತ್ತು ಮಹರ್ಷಿಗೆ..
ಇಂದ್ರನ ತಪ್ಪಿಗೆ ವಾಂಛೆಗೆ
ಕಲ್ಲಾದವಳು ಅಹಲ್ಯೆ.
ಗ್ರಹಿಸಲಿಲ್ಲ ಪತಿ ಸಕಾರಣವ
ಕೊಟ್ಟ ಸಿಟ್ಟಿನ ಕೈಯಲ್ಲಿ ಬುದ್ಧಿ
ಕಲ್ಲಾಗಿದ ಪತ್ನಿಯ ತಪ್ಪಲ್ಲದ ತಪ್ಪಿಗೆ
ವಿಗ್ರಹವಾದ ಅಹಲ್ಯ
ಮಹಿಳೆಯ ದಾಸ್ಯ ಭಾವದ ಪ್ರತೀಕವಾದಳು
ರಾಮ ಬರುವವರೆಗೂ ತಾಳ್ಮೆಯ ನಿಕೇತನವಾದಳು
ಗೌತಮ ಮಹರ್ಷಿ ಸಿಟ್ಟು ಮತಿಭ್ರಮಣೆ, ಅನುಭವಿಸಿದ್ದು ಅಹಲ್ಯ…
ಇದೀಗ ತಪ್ಪಿಲ್ಲ ನನ್ನದೇನು
ನನಗೆ ಶಿಕ್ಷೆಯಾಗಿ
ನೀ ಕುಳಿತೆ
ಕಲ್ಲಾಗಿ ನಿರ್ವಿಕಾರವಾಗಿ
ಕಾಯುತ್ತಿದ್ದೇನೆ ನಾನು ರಾಮನಿಗಾಗಿ
ಆತ ನೀಡುವ ಶಾಪವಿಮೋಚನೆಗಾಗಿ ರಾಮ ಬರುವನೆಂದು? ವಿಗ್ರಹ ಮಾತನಾಡುವುದೆoದು?
ಪ್ರೋ ವಿಜಯಲಕ್ಷ್ಮಿ ಪುಟ್ಟಿ