ಕಾವ್ಯ ಸಂಗಾತಿ
ನಿಲ್ಲು ಶಾಲ್ಮಲೆ ನಿಲ್ಲು
ಇಷ್ಟೊಂದು ಅವಸರವ ಏಕೆ
ಬಂಡಾಯ ಕಹಳೆಯ ಎತ್ತಿದ ಧ್ವನಿ
ಜವರಾಯನ ಜೊತೆ ಏಕೆ ಎತ್ತಲಿಲ್ಲ
ಕುಂಟ ಕೂರುವತ್ತಿಯ ಕೈ ಹಿಡಿಯುವ
ಆಸರೆಯಾಗಿ ನಿಲ್ಲುವ ಭರವಸೆಯ ಬೆರಗುಗಾರ
ನಿಲ್ಲು ಶಾಲ್ಮಲೆ ನಿಲ್ಲು
ಇಷ್ಟೊಂದು ಅವಸರವ ಏಕೆ
ಅರ್ಧ ಸತ್ಯದ ಹುಡಗಿಯನ್ನು ಮುಂದಿಟ್ಟು
ಪೂರ್ಣ ಸತ್ಯ ಹೇಳದೆ ಹೀಗೆ ಹೊದರೆ ಹೇಗೆ
ಆದಿಗೆ ಪಂಪ ಅಂತ್ಯಕ್ಕೆ ಚಂಪಾವಾಗಿ
ಚೆಂದದ ನಗೆ ಬೀರಿ ನಿಂತ ಶಾಲುಧಾರಿ ಚಂಪಾ
ಪ್ರೀತಿಯ ಜ್ವಾಲೆಯಲ್ಲಿ ಎಲ್ಲರನ್ನೂ ಸಿಕ್ಕಿಸಿ
ದ್ವೇಷಕ್ಕೂ ಕಾರಣ ಹುಡುಕಿಸಿ ಹೊರಟವನೆ
ಕನ್ನಡ ಕನ್ನಡ ಬನ್ನಿ ನಮ್ಮ ಸಂಗಡವೆಂದು
ಹೀಗೆ ಹೇಳದೆ ಹೊರಟರೆ ಹೇಗೆ
ನಿಲ್ಲು ಶಾಲ್ಮಲೆ ನಿಲ್ಲು
ಇಷ್ಟೊಂದು ಅವಸರವ ಏಕೆ
ಡಾ.ಸುಜಾತಾ.ಸಿ