ಕಾವ್ಯ ಸಂಗಾತಿ

ಮೂಕವಾಗಿವೆ…..

ಡಾ. ನಿರ್ಮಲ ಬಟ್ಟಲ

750+ Sea Beach Pictures | Download Free Images on Unsplash


ನುಡಿಯಲಾರವು
ನನ್ನ ಶಬ್ದ….!
ಮೂಕವಾಗಿವೆ ಏಕೊ
ಭಾವ ಭಾರಕೆ…..!
ನಿನ್ನ ಭಾವಗಳೆಲ್ಲ
ಕವನವಾಗಿ ಕಾಡುತ್ತಿವೆ….!
ಮಂಪರು ಕವಿದಾಗ
ಜೋಗುಳದ ಹಾಡಾಗುತ್ತವೆ….!
ನಸುಕಿನ ಜಾವದಿ
ಸುಪ್ರಭಾತ….!


ಮಧ್ಯಾಹ್ನದಿ ಮಥಿಸುವ
ವಿಚಾರಲಹರಿ….!
ಸಂಜೆ ಹಗುರಾದ ಭಾವದಿ
ಭಾವಗೀತೆ….!
ರಾತ್ರಿಯಲಿ ಕಾಡುವ
ಪಿಸುಮಾತು….!
ಬೇಡವೆಂದರೂ ಪದೆ ಪದೆ
ಬಂದು ಅಪ್ಪಿ ಕೊಳ್ಳುವ
ಭಾವತೆರೆಗಳ ಹರಿಬಿಟ್ಟ
ನೀನು ಮಾತ್ರ ವಿಶಾಲ ಕಡಲು…!


6 thoughts on “

    1. ಕವಿತೆ ಚೆನ್ನಾಗಿದೆ ಮ್ಯಾಡಮ್.ಆಲೋಚನೆ ಪತ್ರಿಕೆಯಲ್ಲೂ ಕೆಲ ಕವನ ಓದಿರುವೆ.ಕವಿತೆಗಳ ಸುಲಲಿತ ಲಯ ಭಾವಗೀತೆ ಪ್ರಕಾರಕ್ಕೆ ಚೆನ್ನಾಗಿದೆ.ಇದೇ ರೀತಿಯ ಒತ್ತಕ್ಕರ ಅಧಿಕವಿರದ ಪದಗಳಲಿ ಹೆಣೆದ ಭಾವಗೀತೆಗಳ ಮಾಲೆ ತಮ್ಮಿಂದ ಬರಲೆಂದು ಹಾರೈಸುವೆ.

  1. ಸುಂದರವಾದ ಕವಿತೆ ! ದಿನದ ಮೂರೂ ಹೊತ್ತು ಅಪ್ಪಿ ಕೊಳ್ಳುವ ಅದಮ್ಯ ವಿರಹದ ನೆನಪುಗಳನ್ನು ಕಾವ್ಯದ ಮೂಲಕ ಹೊರಹಾಕುವ ತುಡಿತ ವಿಶಾಲ ಸಾಗರವಾಗಿ ಹೊರ ಬಂದಿದೆ ಅಬ್ಬಾ ! ಓದುಗರೂ ಮೂಕರಾಗುವ ಹಾಗೆ !! ಪಿ ಬಿ ವಾಯ್

  2. ಸದರವಾದ ಕವಿತೆ! ದಿನದ ಮೂರೂ ಹೊತ್ತು ಅಪ್ಪಿಕೊಳ್ಳುವ ಅದಮ್ಯ ವಿರಹದ ನೆನಪುಗಳನ್ನು ಕಾವ್ಯದ ಮೂಲಕ ಹೊರ ಹಾಕುವ ತುಡಿತ ವಿಶಾಲ ಸಾಗರವಾಗಿ ಹೊರಬಂದು, ಓದುಗರೂ ಅಬ್ಬಾ! ಮೂಕ ರಾಗುತ್ತಾರೆ!! ಪಿ ಬಿ ವಾಯ್

Leave a Reply

Back To Top