ವಿಳಾಸ ಇಲ್ಲದವನ…

ಕಾವ್ಯ ಸಂಗಾತಿ

ವಿಳಾಸ ಇಲ್ಲದವನ.

ಪ್ರೋ ವಿಜಯಲಕ್ಷ್ಮಿ ಪುಟ್ಟಿ

ನೆನಪುಗಳ ಬೆಂಬತ್ತಿ
ಹೊರಟಿರುವೆ
ಅಸಂಖ್ಯಾತ ಹೆಜ್ಜೆಗಳು
ಮೂಡಿಸಿದೆ
ಗುರುತರ ಹೆಜ್ಜೆಗುರುತು
ಸೋತ ಪಾದಗಳು
ಇಲ್ಲವಾದ ಸೊಲ್ಲುಗಳು
ಬೆಂಬತ್ತಿ ಅಗೋಚರದಲಿ
ವಿಳಾಸ ಇಲ್ಲದವನ,
ಕತ್ತಲೆ ಮಗ್ಗುಲದ
ಬೆಳಕಿನ ಹುಡುಕಾಟ
ನೆನಪುಗಳ ಹಗ್ಗ ಹಿಡಿದು ಏರಬಯಸುವೆ
ಕುಣಿಕೆ ಆಗದಿರೇ ಸಾಕು
ನೆನಪುಗಳ ಲಂಘನ,
ಪ್ರೀತಿಯ ಲೋಕದಲ್ಲಿಟ್ಟ ಅಂಬೆಗಾಲುಗಳ ಕುರುಹು, ಅನಾಮಧೇಯ
ಭಾವಗಳ ಎಡೆಗೆ
ಹೊರಟ ದಾರಿಯ ಸವೆಸಲು..
ಕಳೆದ ನೆನಪುಗಳ ಬುತ್ತಿ ಸಾಕು …


Leave a Reply

Back To Top