ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಜಲ್

Eye Art Wallpapers - Top Free Eye Art Backgrounds - WallpaperAccess

ಕನವರಿಸುತಿದೆ ಕಳೆದ ಬಾಲ್ಯವು ಹೃದಯದಲಿ ಮರೆಯಲಾದೀತೆ ಹೇಳಿ ಒಮ್ಮೆ
ರಿಂಗಣಿಸುತಿದೆ ಸವಿ ನೆನಪುಗಳು ಬಾಳ ಪಥದಲಿ ಅಳಿಸಲಾದೀತೆ ಹೇಳಿ ಒಮ್ಮೆ !

ಸವೆದ ಹೆಜ್ಜೆ ಹೆಜ್ಜೆಗಳಲೂ ಹಸನಾಗುತಿದೆ ಮಧುರ ಗುರುತುಗಳು ತುಂಟತನದಿ
ಕೂಡಿ ಕಳೆದ ಆಟಗಳವು ಹೆಚ್ಚು ಗೆಳೆತನದಲಿ ತೊರೆಯಲಾದೀತೆ ಹೇಳಿ ಒಮ್ಮೆ !

ಶೃಂಗರಿಸಲೇ ಮನದ ಹೊತ್ತಗೆಯನು ಬಿತ್ತುತ ಸವಿಭಾವಗಳ ಚಿತ್ತಾರವ ಲಾಸ್ಯದಿ
ಆಪ್ತಭಾವಗಳ ಮೆರೆಸಲೇ ನೆನಹುಗಳ ದಿಬ್ಬಣದಲಿ ಬಿಡಲಾದೀತೆ ಹೇಳಿ ಒಮ್ಮೆ !

ಆಡಿ ಓಡುತ ಬಿದ್ದು ಏಳುತ ಕಲಿತ ಪಾಠಗಳವು ಹಸಿರು ಕಂಗಳಲಿ ಅರಳಿ ಚೆಲ್ವಲಿ
ಸ್ವಪ್ನಗಳ ಕಾಣುತಲಿ ನಲಿದಿದೆ ಬಾಳ ಯಾಣದಲಿ ಕಳಚಲಾದೀತೆ ಹೇಳಿ ಒಮ್ಮೆ !

ನವ್ಯತೆಯ ಬಿನ್ನಾಣ ಬರಲಿ ನೂರೆಂಟು ಬಾಲ್ಯವು ಸದಾ ಚೊಕ್ಕ ‘ನಯನಾ’ ಳಿಗೆ
ಬಾಳ ಕಣ್ಮಣಿಯಾಗಿ ಬಾಲ್ಯ ಹಸಿರು ಮನದಲಿ ಎಸೆಯಲಾದೀತೆ ಹೇಳಿ ಒಮ್ಮೆ !!


ನಯನ. ಜಿ. ಎಸ್

About The Author

Leave a Reply

You cannot copy content of this page

Scroll to Top