ಹೇಗೆ ನೋವ ನಗಿಸುವುದು?

ಕಾವ್ಯ ಸಂಗಾತಿ

ಹೇಗೆ ನೋವ ನಗಿಸುವುದು?

ಲಕ್ಷ್ಮಿ ಕೆ ಬಿ

Lovebirds, lovebird art, two birds, original watercolor painting 14 X 11 in  | Lovebirds art, Original watercolor painting, Watercolor paintings

ಹೇಗೆ ನೋವ ನುಂಗಿ
ಮುಗಿಲಾಗುವುದು?

ರೆಕ್ಕೆ ಮುರಿದ ಮೇಲೂ
ಆಗಸಕ್ಕೇರುವ ಹಕ್ಕಿಯಂತೆ

ಮುರಿದ ಕಾಲಲ್ಲೇ
ತೆವಳಿ ನಡೆವ ಇರುವೆಯಂತೆ

ಹೇಗೆ ನೋವ ನಗಿಸಿ
ಮಗುವಾಗುವುದು?

ಕಾರ್ಮೋಡದ ನಡುವೆಯೂ
ಬೆಳಕ ತೂರಿಬಿಡುವ ರವಿಯಂತೆ

ದಾರಿ ಕಾಣದಿದ್ದರೂ
ಸಾಗರ ಸೇರುವ ನದಿಯಂತೆ

ಮುಳ್ಳುಗಳ ಒಡಲಾಳದಲ್ಲೂ
ನಗುವ ಹೂವಿನಂತೆ

ಹೇಗೆ ನೋವ ಮರೆತು
ಬಾಳ ಮುನ್ನಡೆಸುವುದು?

ಸಾವ ಮಸಣದಲ್ಲೂ
ನಗುವ ಹೂ ಹೃದಯದಂತೆ


2 thoughts on “ಹೇಗೆ ನೋವ ನಗಿಸುವುದು?

Leave a Reply

Back To Top