ನೀನಿರಬೇಕಿತ್ತು…
ಕಳೆದ ಒಂದಷ್ಟು ದಿನಗಳಿಂದ ಭೋರೆಂದು ಸುರಿಯುತ್ತಿರುವ ಮಳೆ
ನಿರಾಳವಾಗಿ ಹರಿಯುತ್ತಿರುವ ನಿನ್ನ ನೆನಪುಗಳು
ಮನದಲ್ಲಿ
ಜೊತೆಯಾಗಿ ನೀನಿರಬೇಕಿತ್ತು…
ಕಾಂಕ್ರೀಟಿನ ತಾರಸಿಯಿಂದ ಪೈಪುಗಳ ಒಳಗೆ ತುಂಬಿ ಹರಿಯುತ್ತಾ ಬಾಲ್ಕನಿಯಲ್ಲಿ ಕುಳಿತವಳ ಪಾದಗಳ ತುಸುವೇ ನೆನೆಸುತ್ತಾ
ನೆನಪುಗಳಿಂದ ಒದ್ದೆಯಾದ ಎದೆ ತುಂತುರು ಹನಿಗಳ ಸಿಂಚನ
ಜೊತೆಗೆ ನೀನಿರಬೇಕಿತ್ತು…
ಕಪ್ಪು ಮೋಡಗಳಿಂದ ಸುರಿಯುವ ಬಿಳಿಯ ಮಣಿಗಳಂತ ಹನಿಗಳು ನೆಲಕ್ಕೆ ತಾಗುವ ಮುನ್ನವೇ ಕಲುಷಿತವಾಗಿ ಲೋಕದ ಪಾಪ ತೊಳೆಯಲು ಸುರಿವ ಪವಿತ್ರ ಗಂಗೆಯ ಹಿಡಿದು ನಿಂತವಳ ಜೊತೆಗೆ ನೀನಿರಬೇಕಿತ್ತು…
*******************
ಅವನ ಪ್ರೀತಿಸುವೆನೆಂದು…
ನನ್ನ ಭಾವಗಳಿಗೆ ಇನ್ನೂ ಹೇಳಿಲ್ಲ ಅವನ ಪ್ರೀತಿಸುವೆನೆಂದು…
ತುಂಟ ಮನ
ಕನಸು ಕಾಣತೊಡಗುತ್ತದೆ
ಭಾವ ಜೀವಕೆ ನೀರೆರೆಯುತ್ತದೆ ಕನಸುಗಳ ಬಾಚಿ ತಬ್ಬಿ
ಚುಂಬಿಸುತ್ತದೆ ಪ್ರತಿಕ್ಷಣ…
ಭಾವಗಳ ಪ್ರೀತಿಸದೆ
ನಾನಂತೂ ಕದಲುವುದಿಲ್ಲ
ನಿಸ್ತೇಜ ದಿನಗಳ ನುಂಗಲಾಗುವುದಿಲ್ಲ…
ಮತ್ತೆ ಭಾವ ಸಾಕ್ಷಿಯಲಿ ಉಸಿರಾಡುತ್ತೇನೆ
ನಡೆಯುತ್ತೇನೆ
ಕನಸುಗಳ ನೇವರಿಸುತ್ತ ದಿಗಂತದವರೆಗೂ…
ಹಿಡಿ ಭಾವ ಒತ್ತಿತ್ಕೊಂಡು
ನೆನಪುಗಳ ನೇವರಿಸು
ಭಾಷೆಕೊಡು ಕಾಡೆನೆಂದು,
ಮರೆತು ಬಿಡುವುದಿಲ್ಲವೆಂದು
ತುಂಟ ಗೆಳೆಯನಾಗುವೆನೆಂದು…
**(
ಅವನು ತಾರಸಿಯಲ್ಲಿ…
ಮನಸ್ಸು ಪ್ರಪುಲ್ಲವಿದ್ದ ದಿನ ಸಿಹಿ ಅಡಿಗೆ ಮಾಡಿ ಸಂಭ್ರಮಿಸುತ್ತಾಳೆ..
ಅವನು ತಾರಸಿಯಲ್ಲಿ
ಚಂದಿರನ ಕೆಳಗೆ
ವಿಶ್ರಾಂತ ಪ್ರಶಾಂತ
ಬಾನ ತುಂಬಾ ಪಸರಿಸಿದ ಬೆಳದಿಂಗಳು
ಭೂಮಿಯ ಪ್ರತಿಫಲಿಸಿದೆ
ಮನೆಯ ಮುಂದಿನ
ಚಪ್ಪರದ
ಮಲ್ಲಿಗೆಯ ಮೊಗ್ಗು
ತೊಟ್ಟು ಕಳಚುವರಲ್ಲಿದೆ
ಈ ಕರಾಳ ರಾತ್ರಿಯಲ್ಲಿ
ಯಾರಿಗಾಗಿ
ಈ ಹಕ್ಕಿ ಉಲಿಯುತ್ತಿದೆ
ಯಾರ ಕೊರಳಿಗೆ
ಧನಿಯಾಗ ಬಯಸಿದೆ
ಮಗುವಿನಂತ
ಪ್ರಾಂಜಲ ಭಾವಗಳಿಗೆ
ತಲೆಕೊಡವಿ ಅವನು
ಕೈಬೀಸಿ ಹೊರಟ ಗಳಿಗೆ
ಅವಳು ನಿಡಿದಾದ
ಉಸಿರು ಚೆಲ್ಲಿ
ವಿರಹಗೀತೆ
ಗುನಗುನೀಸುತ್ತಾಳೆ….
ಪ್ರೋ ವಿಜಯಲಕ್ಷ್ಮಿ ಪುಟ್ಟಿ
ನಾನೇ ಇರಬೇಕಿತ್ತು ಅಂತ ಹೇಳಿದರೆ….
Well written. Keep it up tq