ಕಾವ್ಯಯಾನ
ಬಿ.ಶ್ರೀನಿವಾಸ ಹೊಸ ಕವಿತೆ
ಗೊತ್ತೇ ಆಗಲಿಲ್ಲ
ಬಣ್ಣಗಳು ಹೇಗೆ ಕಳಚಿಕೊಂಡವೆಂದು
ಊರುಗಳಿಗೂ ಗೊತ್ತೇ ಆಗಲಿಲ್ಲ
ಗಾಯಗೊಂಡು ರಕ್ತ ಸುರಿಸಿದರೂ ಊರ ಶರೀರ
ಗೊತ್ತೇ ಆಗಲಿಲ್ಲ
ಅರವಳಿಕೆ ನೀಡಿದವರಾರೆಂದು
ಈಗೀಗ…
ಮಕ್ಕಳು ಬಿದ್ದರೆ….
ಅತ್ತರೆ…
ಅವ್ವಂದಿರುಗಳಿಗೂ ಗೊತ್ತಾಗುವುದಿಲ್ಲ
ಶೋಧಿಸಬೇಕಿದೆ ಗೆಳೆಯಾ..
ಎದೆಯ
ಅಪರಾಧ ಎಸಗದೆಯೂ,
ಜೈಲಿನ ಗೋಡೆಗಳೊಂದಿಗೆ ಮಾತನಾಡುವ
ಊರುಗಳ ಎದೆಯಾ
ಅಸ್ಪೃಶ್ಯನೊಬ್ಬ ಊರೊಳಗೆ ಬಂದರೆ….
ನೆನಪಿಟ್ಟುಕೊಂಡ
ಸ್ಪರ್ಶ ಜ್ಞಾನಕೆ
ಆಶ್ಚರ್ಯವಾಗುತಿದೆ
ಶೋಧಿಸಬೇಕಿದೆ ಗೆಳೆಯಾ..
ಎದೆಯ
ಬಣ್ಣ
ರುಚಿ
ಶಕ್ತಿ
ಕಳೆದುಕೊಂಡವರ
ಶೋಧಿಸಬೇಕಿದೆ ಗೆಳೆಯಾ
ಹೌದು
ಶೋಧಿಸಬೇಕಿದೆ ನಮ್ಮ ನಮ್ಮ ಎದೆಗಳ
ಸಿಕ್ಕರೂ ಸಿಗಬಹುದು ಕಳೆದು ಹೋದ ಸಂಪತ್ತು
ಕವಿಗೆ ಅಭಿನಂದನೆಗಳು
Very good thought sir
Very good thought