ಇನ್ನಿಲ್ಲದಂತೆ ಕಾಡಿದವ

ಕಾವ್ಯಯಾನ

ಪ್ರೊ.ವಿಜಯಲಕ್ಷ್ಮೀ ಪುಟ್ಟಿ

ಇನ್ನಿಲ್ಲದಂತೆ ಕಾಡಿದವ

ಇನ್ನಿಲ್ಲದಂತೆ
ನನ್ನ
ಕಾಡಿದವ
ನೀನು
ಎಷ್ಟು
ಕೊಟ್ಟರೂ
ಮತ್ತೆ
ಬೇಡುವ
ನಾನು
ನನ್ನ ನಿನ್ನ
ನಡುವೆ
ಅಗಾಧ
ಭಾವತೀವ್ರತೆ
ನಿಂದು ತುಸು
ಹೆಚ್ಚು ಕೋಪ
ಆಗಾಗ ನನ್ನ
ಸಂಶಯ
ದೊಡ್ಡ ಶಾಪ
ಅದೇಕೆ ನೀ
ಹಾಗೆ ಗೊತ್ತಿಲ್ಲ
ಪ್ರೀತಿಯೆಂದು
ನಕ್ಷತ್ರ ಚಂದಿರನ
ತಂದು ಕೊಟ್ಟು
ಹಾಡು ಎಂದು
ಬಿಟ್ಟು ಹೋಗುವೆ
ಒಮ್ಮೆಲೆ
ಕಾರ್ಮೋಡ
ಮಂಕು ನನಗೆ
ಅಗಲಿಕೆ
ಸೋಂಕು
ಮುಂದಾರಿ
ತಿಳಿಯದ
ಬಳಲಿಕೆ
ಬೇಕಿತ್ತು ಒಂದು
ಒಡಂಬಡಿಕೆ
ಬೇಡ ನನಗೆ
ಚಂದ್ರತಾರೆ
ನೀನೆ ನನ್ನ
ಭಾವ
ಸೂರೇ…


One thought on “ಇನ್ನಿಲ್ಲದಂತೆ ಕಾಡಿದವ

Leave a Reply

Back To Top