ಬಣ್ಣ

ಕಾವ್ಯಯಾನ

ಬಣ್ಣ

ಡಾ.ಜಿ.ಪಿ.ಕುಸುಮ, ಮುಂಬೈ

ಬಣ್ಣಕ್ಕೆ ಹಿಗ್ಗಿ ನಗುತ್ತಿದ್ದವರು
ಬೀಗಿ ನಡೆಯುತ್ತಿದ್ದವರು
ವರ್ಣಮಯ ಹಾಳೆಗಳ
ಮೈತುಂಬಿ ಬಂದವರು
ಕೇರಿ ಕೇರಿ ಹಂಚಿದವರು
ಬೀದಿ ಬೀದಿ ಅಲೆದು
ಬಣ್ಣದ ಮೋರೆ ತೋರಿದವರು
ಅನ್ಯರ ಹಾಳೆ ಹರಿದವರು
ಬೇಡದ ಬಣ್ಣವ ಬಳಿದವರು
ಒಂದಷ್ಟು ಹೊಂದಿಸಿಟ್ಟವರು
ಕೊರಗನ್ನು ಮುರಿದವರು
ಒಳಗನ್ನು ಹೊಕ್ಕದವರು
ಬಣ್ಣಕ್ಕೆ ಮರುಳಾದವರು
ಬಣ್ಣವಿಲ್ಲದೆ ಹೊರಟವರು
ಬಾಗಿಲಾಚೆ ನಿಂತು
ಮಣ್ಣೊಂದಿಗೆ ಮಾತನಾಡುವ ಹೊತ್ತು
ನೆನಪಿನ ದೀಪ ಹಚ್ಚಿದರು
ಮಣ್ಣು ಮತ್ತು ಬೆಂಕಿಗೆ ದಕ್ಕಿದ
ಬೆಟ್ಟದಷ್ಟು ತಾಳ್ಮೆ
ಎಷ್ಟು ಹಾಡಿಗೆ ಎಷ್ಟು ದಿಗಿಣ
ಎಷ್ಟು ಬಣ್ಣಕ್ಕೆ ಎಷ್ಟು ಚಪ್ಪಾಳೆ
ಮಣ್ಣಿಗೆಷ್ಟು ಬೆಂಕಿಗೆಷ್ಟು
ಇನ್ನೂ ತೀರ್ಮಾನವಾಗಿಲ್ಲ


5 thoughts on “ಬಣ್ಣ

  1. ಅದ್ಬುತ.. ವರ್ಣಮಯ ಬಣ್ಣದ ಕವಿತೆ ಕಣ್ಣಿಗೆಷ್ಟು ಹಬ್ಬವೊ ಮನದಾಳದಲ್ಲೂ ರಂಗು ರಂಗಿನ ಕನಸ್ಸಿನ ಚಿತ್ತಾ ರ ಬರೆಯಿತು..ವಾವ್..

  2. ಸಾಥ೯ಕ ಬದುಕಿನ ಸಾಹಿತ್ಯ ಸಂಗಾತಿ. ‘ ಒಳಗನು ಹೊಕ್ಕದವರು’ ಆಕಷ೯ಕ ಬಣ್ಣಕ್ಕೆ ಮರುಳಾಗಿ, ಅಂತರಂಗದ ಮಮ೯, ತಿರುಳು
    ಸಂವೇದನೆ ಅರಿಯದ ತಿಳಿಗೇಡಿಗಳು……..
    ಗಭಿ೯ತಾಥ೯ ಕವನ. ಹೃದಯ ತಲುಪುವ ಕವನ ಕುಸುಮ ಮಾಡಮ್ತುಂಬು ಹೃದಯದ . ಇನ್ನೂ ಕುಸುಮಗಳು ಬಿರಿಯುತಿರಲಿ ತಮ್ಮ ಲೇಖನಿಯಿಂದ.

  3. ಸಾಥ೯ಕ ಬದುಕಿನ ಸಾಹಿತ್ಯ ಸಂಗಾತಿ. ‘ ಒಳಗನು ಹೊಕ್ಕದವರು’ ಆಕಷ೯ಕ ಬಣ್ಣಕ್ಕೆ ಮರುಳಾಗಿ, ಅಂತರಂಗದ ಮಮ೯, ತಿರುಳು
    ಸಂವೇದನೆ ಅರಿಯದ ತಿಳಿಗೇಡಿಗಳು……..
    ಗಭಿ೯ತಾಥ೯ ಕವನ. ಹೃದಯ ತಲುಪುವ ಕವನ ಕುಸುಮ ಮಾಡಮ್ತುಂಬು ಹೃದಯದ . ಇನ್ನೂ ಕುಸುಮಗಳು ಬಿರಿಯುತಿರಲಿ ತಮ್ಮ ಲೇಖನಿಯಿಂದ.

Leave a Reply

Back To Top