ಬದಲಾವಣೆ

ಕಾವ್ಯಯಾನ

ಬದಲಾವಣೆ

ಅಬ್ಳಿ,ಹೆಗಡೆ

ಸಖೀ,,,,,,,,
ನಿನ್ನ ಪ್ರೀತಿಯ ಆಲಿಂಗನ,
ಶಾಂತ,ತ್ರಪ್ತ,ನಿಶ್ಚಿಂತ ರಾತ್ರಿ
ಸುಖ ನಿದ್ದೆ ತಂದರೂ,,,,,
ಕ಼ಣದಲ್ಲಿ ಬದಲಾಗಬಹುದು,
ಪ್ರಶಾಂತ ಬೆಳಗು.
ಬದುಕು ಕೂಡ.
ತಣ್ಣಗಿನ ಮುಂಜಾವಲ್ಲೂ
ಸಣ್ಣಗೆ ಕಾಡುವ ತಲೆ-
ನೋವು,ಇದ್ದಕ್ಕಿದ್ದಲ್ಲೆ
ಹಾಳಾದ “ಟೀ(ಠೀ)ವಿ,
“ಸಿಗ್ನಲ್”ಇಲ್ಲದ ಮೊಬೈಲು,
ಹಾಲಿಲ್ಲದ ಚಹಾದ ಕಹಿ
“ಡಿಕಾಕಿ಼ನ್ನು”,ಅರ್ಜಂಟಲ್ಲಿ
ಯಾರೊ ಹೇಳಿದ,ನೆಂಟರ
ಅಪಘಾತದ,ಸಾವಿನಸುದ್ದಿ,
ಎಲ್ಲ ಪ್ರತಿಮೆ,,,,,ಗಳಾಗ-
ಬಹುದು ಕ಼ಣಮಾತ್ರದಲ್ಲಿ.
ದೈನಂದಿನ ವ್ಯಸ್ತ ಬದುಕಿಗೆ.
ನಾನು ಮತ್ತು ನನ್ನೊಳಗಿನ
ನೀನೂ ಕೂಡ
ಕೆಲವೊಮ್ಮೆ…..!

***************************

Leave a Reply

Back To Top