ಮಣ್ಣು ,ಅನ್ನ ಮತ್ತು ಪ್ರಭು

ಕಾವ್ಯಯಾನ

ಮಣ್ಣು ,ಅನ್ನ ಮತ್ತು ಪ್ರಭು

ನೆಲಕೆ ಬಿದ್ದರೆ ಅನ್ನದಾತ
ದಂಗೆಯೇಳುತ್ತದೆ ಅನ್ನ

*

ಮಕ್ಕಳ ಮುಂದೆ ಅಪ್ಪ ಅಳಬಾರದು
ಅಪ್ಪನ ಮುಂದೆ ಮಕ್ಕಳು ಸಾಯಬಾರದು
ಪ್ರಭುಗಳ ಮುಂದೆ ಪ್ರಜೆಗಳು ನರಳಬಾರದು

ಸುಳ್ಳಾಯಿತು
ಲೋಕರೂಢಿಯ ಮಾತು.

*

ಮಣ್ಣಿನೆದೆಯ ಮೇಲೆಯೆ ಇದ್ದವು ಪಾದಗಳು
ನೆಲದ ಮೇಲಿರುವ ತನಕ

ಅದೇ ಮಣ್ಣಿನ ಮೃದು ಪಾದಗಳು
ನೆಲದಡಿಗೆ ಸೇರಿದವನ ಎದೆಯ ಮೇಲೆ

*

ಮಣ್ಣಿಗೂ
ಅಪ್ಪನಿಗೂ ಸಂಬಂಧ ಕೇಳುವಿರಿ ನೀವು

ಇದೆ
ಅಜ್ಜ-ಮೊಮ್ಮಗನ ಸಂಬಂಧ!

*

ಉಣ್ಣುವ ಅನ್ನದ ಕಣ್ಣು
ಎದುರಿಸಲಾಗದ ಕೊಲೆಗಾರ

ಹೇಡಿ
ಹೇಡಿಯೆಂದು ಕಿರುಚಾಡುತ್ತಾನೆ

*

Agriculture - Wikipedia

ಕಳಚಿ ಬಿದ್ದಿವೆ
ಪದವಿಗಳು,ಪುರಸ್ಕಾರಗಳು
ಅಕ್ಷರಗಳು….ಬೀದಿಯ ತುಂಬಾ

ನಾನೀಗ
ಲೋಕದ ಸಾಲಿಯ ಪಾಲಿಗೆ ಬೆತ್ತಲೆ ಅಪರಾಧಿ


            ಬಿ.ಶ್ರೀನಿವಾಸ


One thought on “ಮಣ್ಣು ,ಅನ್ನ ಮತ್ತು ಪ್ರಭು

  1. ಇಂಥಾ ಕವಿತೆಗಳು ಜನರ ಕಣ್ಣು ತೆರೆಸಬೇಕು. ಜನ ಸ್ವಾಭಿಮಾನದಿಂದ ಬದುಕುವಂತಾಗಬೇಕು. ಅಭಿನಂದನೆಗಳು ಕವಿಗಳಿಗೆ

Leave a Reply

Back To Top