ಬದುಕು

ಕಾವ್ಯಯಾನ

ಬದುಕು

ಕಾಂತರಾಜು ಕನಕಪುರ

ಒಟ್ಟಿಗೆ
ಮಿಡಿಯುತ್ತಿದ್ದ
ಹೃದಯಗಳು
ಲಯ ತಪ್ಪುತ್ತವೆ…!

ಒಟ್ಟಿಗೆ
ಪಲುಕುತಿದ್ದ
ಸ್ವರಗಳು
ಶೃತಿ ತಪ್ಪುತ್ತವೆ..!

ಒಟ್ಟಿಗೆ
ಸಾಗುವೆವೆಂದ
ಗಾಲಿಗಳು
ಹಳಿ ತಪ್ಪುತ್ತವೆ…!

ಬಿದ್ದ ಚಿಕ್ಕ ಗೀರುಗಳೂ
ನೀರು ತುಂಬಿ ಕೀವು ಒಸರಿ
ಅಸಹ್ಯ ವ್ರಣಗಳಾಗುತ್ತವೆ…!

ಕಾಲ ಕಳೆದಂತೆ
ಅಗತ್ಯವೋ
ಅನಿವಾರ್ಯವೋ
ಒತ್ತಡವೋ
ಹೃದಯಗಳು ಮತ್ತೆ ಮಿಡಿಯುತ್ತವೆ,
ಹಾಡು ಲಯಕ್ಕೆ ಮರಳುತ್ತದೆ,
ಬಂಡಿ ಹಳಿಗೆ ಹಿಂದಿರುಗುತ್ತದೆ
ಗಾಲಿ ಉರುಳತೊಡಗುತ್ತವೆ…!

ಗಾಯಗಳು ಗುರುತಾಗಿ
ನೆನಪುಗಳು ನೇಪಥ್ಯಕ್ಕೆ ಸರಿದು
ಲಯ ತಪ್ಪಿದ ಹಾಡು
ಶೃತಿ ಸಿಕ್ಕ ಸಂತಸದಿಂದ
ಬಾಳ ಪಥ ಸವೆಯತೊಡಗುತ್ತದೆ…!

*************************

Leave a Reply

Back To Top