ಮುಳ್ಳೇ ನೀ ಇರಿಯದಿರು

ಕಾವ್ಯಯಾನ

ಮುಳ್ಳೇ ನೀ ಇರಿಯದಿರು

ಡಾ.ಗೀತಾ ಪಾಟೀಲ

Dalit Women, Sexual Violence And The Role Of Media | Feminism In India

ದುಂಬಿಗಳು ಛಿದ್ರಿಸಿದ ಹೂ ನರಳುತಿದೆ ಮುಳ್ಳೇ ನೀ ಇರಿಯದಿರು
ಮತ್ತೇರಿದ ದಾಳಿಗೆ ಬೆದರಿ ಬಾಡಿದೆ ಮುಳ್ಳೇ ನೀ ಇರಿಯದಿರು

ಅರಿತಿರಲಿಲ್ಲ ಅಲರು ಆ ಸಂಜೆ ದುಂಬಿಗಳು ಹೂಡಿದ್ದ ಸಂಚು
ಮಿಂಚಿನ ಪ್ರಹಾರಕೆ ಜೀವ ನಲುಗಿದೆ ಮುಳ್ಳೇ ನೀ ಇರಿಯದಿರು

ಸರಳವಲ್ಲ ಉಸಿರುಗಟ್ಟುವ ಮೌನದ ಬಸಿರ ಭಾರ ಹೊರುವುದು
ಬೆಂದೊಡಲ ಬೆಂಕಿ ಉಮ್ಮಳಿಸುತಿದೆ ಮುಳ್ಳೇ ನೀ ಇರಿಯದಿರು

ಚಿಂತೆಯಲಿ ನಿದ್ದೆ ಕೊರೆಯುತಿಹರು ನ್ಯಾಯ ದೇವತೆಯ ವಂಶಸ್ಥರು
ಅಳಿದ ಕನಸುಗಳು ಜೋಗುಳ ಹಾಡುತಿವೆ ಮುಳ್ಳೇ ನೀ ಇರಿಯದಿರು

ಘೋರ ಬಂಡೆಯಡಿ ಸಿಲುಕಿವೆ ದೈವ ಪೂಜೆಯ ಹೂವಿನೆಸಳು
ಅಲ್ಲೆಲ್ಲೋ ಚರಮ ಗೀತೆ ಕೇಳಿಬರುತಿದೆ ಮುಳ್ಳೇ ನೀ ಇರಿಯದಿರು

*************************

22 thoughts on “ಮುಳ್ಳೇ ನೀ ಇರಿಯದಿರು

  1. ಎದೆಯಲ್ಲಿ ಮುಳ್ಳು ಮುರಿದಂತೆ ನೋವಾಗುತ್ತದೆ.
    ಎಲ್ಲರೆದೆಯಲ್ಲಿ ಸದ್ಗುಣಗಳ ಹೂ ಅರಳಲಿ

    1. ನಿಮ್ಮ ಕಳಕಳಿ, ಆಶಯದ ನುಡಿಗಳಿಗೆ ಧನ್ಯವಾದಗಳು ವಿಜಯ್ ….

  2. ಮುಳ್ಳಿರಿತದಿಂದ ಮೈಮನ ಛಿದ್ರಗೊಂಡ ಹೆಣ್ಣಿನ ನೋವು ಮಡುಗಟ್ಟಿದ ಕವನ ಗೆಳತಿ…ಮುಳ್ಳುಗಳಿಗೆ ಮುಳ್ಳು ತಾಕುವುದು ಯಾವಾಗ??ಇನ್ನೂ ಅದೆಷ್ಟು ಹೆಣ್ಣುಮಕ್ಕಳು ಈ ಕೀಚಕರಿಂದ ನರಳಬೇಕು..??

  3. ತುಂಬಾ ಮನೋಜ್ಞವಾಗಿ ಮೂಡಿ ಬಂದ ಕವನ. ಕಾಮಾಂಧರಿಗೆ ಘೋರ ಶಿಕ್ಷೆ ವಿಧಿಸಬೇಕು.

  4. ಬಹಳ ಮನ ಕಲಕುವ ಸಾಲುಗಳು… ತುಂಬಾ ಚೆನ್ನಾಗಿ ಬಂದಿದೆ ಮೇಡಂ ಅಭಿನಂದನೆಗಳು…..

  5. ಒಂದು ಕ್ಷಣ ಗಂಟಲುಬ್ಬಿ ಬಂದಂತಾಯಿತು. ನಿಮ್ಮೊಳಗಿನ ದುಃಖ ಮತ್ತು ರೋಷ ಕವಿತೆಯ ಮೂಲಕ ಬಹಳ ಪರಿಣಾಮಕಾರಿಯಾಗಿ ಅಭಿವ್ಯಕ್ತಗೊಂಡಿದೆ. ಕೆಲವು ಪದಗಳ ಬಳಕೆಯಂತೂ ನಿಜಕ್ಕೂ ಅದ್ಭುತ! ಇಂತಹ ವಾಸ್ತವತೆಯ ಕವಿಗಳು ಇನ್ನಷ್ಟು ನಿಮ್ಮ ಬೆರಳ ತುದಿಗಳಿಂದ ಪುಟಿಯಲಿ.ನಿಮ್ಮ ಬರವಣಿಗೆಯ ಮೆರವಣಿಗೆ ಹೀಗೆ ನಿರಂತರವಾಗಿ ಸಾಗಲಿ ಎಂದು ಹಾರೈಸುತ್ತೇನೆ.

    ಧನ್ಯವಾದಗಳು
    -ದೀಕ್ಷಿತ್ ನಾಯರ್
    ಯುವ ವಾಗ್ಮಿ,ಲೇಖಕ ಮತ್ತು ನಿರೂಪಕ
    ಮಂಡ್ಯ

  6. ಒಂದು ಕ್ಷಣ ಗಂಟಲುಬ್ಬಿ ಬಂದಂತಾಯಿತು. ನಿಮ್ಮೊಳಗಿನ ದುಃಖ ಮತ್ತು ರೋಷ ಕವಿತೆಯ ಮೂಲಕ ಬಹಳ ಪರಿಣಾಮಕಾರಿಯಾಗಿ ಅಭಿವ್ಯಕ್ತಗೊಂಡಿದೆ. ಕೆಲವು ಪದಗಳ ಬಳಕೆಯಂತೂ ನಿಜಕ್ಕೂ ಅದ್ಭುತ! ಇಂತಹ ವಾಸ್ತವತೆಯ ಕವಿತೆಗಳು ಇನ್ನಷ್ಟು ನಿಮ್ಮ ಬೆರಳ ತುದಿಗಳಿಂದ ಪುಟಿಯಲಿ.ನಿಮ್ಮ ಬರವಣಿಗೆಯ ಮೆರವಣಿಗೆ ಹೀಗೆ ನಿರಂತರವಾಗಿ ಸಾಗಲಿ ಎಂದು ಹಾರೈಸುತ್ತೇನೆ.

    ಧನ್ಯವಾದಗಳು
    -ದೀಕ್ಷಿತ್ ನಾಯರ್
    ಯುವ ವಾಗ್ಮಿ,ಲೇಖಕ ಮತ್ತು ನಿರೂಪಕ
    ಮಂಡ್ಯ

Leave a Reply

Back To Top