ಶಾಪಗ್ರಸ್ಥ ಶಿಲೆ
ಕನ್ನಡದ ಮೂಲ : ಸ್ವಾಮಿ ಪೊನ್ನಾಚಿ
ಇಂಗ್ಲೀಷ್ಗೆ ಅನುವಾದ : ಮಾಲತಿ ಶಶಿಧರ್
ಶಾಪಗ್ರಸ್ಥ ಶಿಲೆ
ಈ ಹೂವು ಪರಿಮಳ ಸ್ಪರ್ಶ ಕನಸು ಬೆಳದಿಂಗಳು
ಯಾವುದೂ ಬೇಡ
ನನ್ನ ಪಾಡಿಗೆ ನನ್ನ ಬಿಟ್ಟುಬಿಡು
ಈ ಚಿಗುರು ವಸಂತ ತಲೆದೂಗುವವರೆಗೂ
ತಲೆ ಮರೆಸಿಕೊಳ್ಳುತ್ತೇನೆ
ನೀನೇನೋ ಮರೆತಂತೆ ನಾಟಕವಾಡಿದೆ
ನಟನೆ ಬರದ ನಾನೇನು ಮಾಡಲಿ
ನಿನ್ನ ಹೆಜ್ಜೆ ಗುರುತನ್ನು ಎಣಿಸಿಕೊಂಡು
ಬಂದ ತಪ್ಪಿಗೆ
ನನಗೀಗ ದಿಕ್ಕು ತಪ್ಪಿದೆ
ಹಿಂತಿರುಗುವ ದಾರಿಯನ್ನಾದರೂ ಒಮ್ಮೆ ತೋರು
ಒಮ್ಮೆಗೆ ನೀನು ಮರಣದಂಡನೆಯ
ತೀರ್ಪು ನೀಡಬೇಕಿತ್ತು
ಆಜೀವ ಶಿಕ್ಷೆ ಅನುಭವಿಸುವ ತ್ರಾಣ
ಈಗ ನನ್ನಲ್ಲಿಲ್ಲ
ಈ ವಸಂತದಲ್ಲಿ ಪ್ರೇಮಿಗಳು ಪರಸ್ಪರ
ಪ್ರೇಮ ನಿವೇದನೆ ಮಾಡಿಕೊಳ್ಳುತ್ತಿದ್ದರೆ
ಶಾಪಗ್ರಸ್ಥ ಶಿಲೆಯಂತೆ ಕುಳಿತಿದ್ದೇನೆ
ಎಂದಾದರೊಂದು ದಿನ
ನಿನ್ನ ಪಾದಸ್ಪರ್ಶವಾಗಬಹುದೆಂದು
—————–
A statue of curse
This flower, fragrance, proximity,
dream, moonshine
I dont need any of these
Leave me alone
Let me abscond till the
spring nod its head
You pretended like you have forgotten
What shall i do without knowing the pretence
I have got misdirected for the
sake of counting your footprints
Show me the path to come back
you could’ve
given the gallows at once
Now I dont have power to
sustain the life-sentence
In this spring am sitting like a
statue of curse
waiting to touch your feet
When the lovers are making
the petition of love with each other..
*********************