ಕಾವ್ಯಯಾನ
ಕಾಲದ ಕರೆ ಡಾ.ಪ್ರಸನ್ನ ಹೆಗಡೆ ಮನೆಯ ಒಳಗೇ ಉಳಿಯಬೇಕಾಗಿದೆ ನಮ್ಮನ್ನ ನಾವೇ ಉಳಿಸಿಕೊಳಬೇಕಾಗಿದೆ ನಮ್ಮ ನಂಬಿದವರ ನಾವೇ ರಕ್ಷಿಸಿಕೊಳಬೇಕಾಗಿದೆ ಒಳಗಿದ್ದುಕೊಂಡೇ ಸಮರ ಸಾರ ಬೇಕಾಗಿದೆ ಮುಖಗವಚ ಧರಿಸಬೇಕಾಗಿದೆ ವೈರಾಣುವ ದೂರವೇ ಇಡಬೇಕಾಗಿದೆ ನಡುನಡುವೆ ಅಂತರ ಕಾಪಾಡಿಕೊಂಡು ನಮ್ಮ ನಮ್ಮ ಅಂತಸ್ಥ ಮೆರೆಯಬೇಕಾಗಿದೆ ಕಾಲ್ಗಳ ಕಂಬವಾಗಿಸಿಕೊಂಡು ಇದ್ದಲ್ಲೇ ಇರಬೇಕಾಗಿದೆ ಮನಸ್ಸನ್ನು ಕಲ್ಲಾಗಿಸಿಕೊಂಡು ಯೋಚಿಸಬೇಕಾಗಿದೆ ಶಿರವನ್ನೇ ಹೊನ್ನಗಲಶವಾಗಿಸಿಕೊಂಡು ಆತ್ಮಜ್ಯೋತಿಯ ಬೆಳಗಬೇಕಾಗಿದೆ ಮನದಿ ಕುಣಿವ ಮಂಗಗಳ ಹಿಡಿದು ಉದ್ಯಾನವನ ಉಳಿಸಿಕೊಳಬೇಕಾಗಿದೆ ಉಳಿದಿದ್ದೆಲ್ಲವ ನಾಳೆಗೆ ಮುಂದೂಡಿ ಈ ದಿನವ ಹೇಗೋ ದೂಡಬೇಕಾಗಿದೆ ಹೊರಗೆ […]
ಕಾವ್ಯಯಾನ
ಗಝಲ್ ತೇಜಾವತಿ ಹೆಚ್. ಡಿ ಅಭಿಮಾನದ ಎದೆಪುಟದಲಿ ಅನುಮಾನದ ಸಾಲುಗಳೇತಕೆ ಗೆಳೆಯಾ ಆತ್ಮಸಾಕ್ಷಿಯ ದೀಪದೆದುರಲಿ ಅಂಧಕಾರದ ಚಿಂತೆಗಳೇತಕೆ ಗೆಳೆಯಾ ಅಂಗೈಯ್ಯಲೇ ಮಾಣಿಕ್ಯವಿದ್ದರೂ ಅದರಾಕರ್ಷಿತರ ಗೊಡವೆಗಳೇತಕೆ ಒಡೆಯಾ ನಿನ್ನಂತರಂಗದೊಳು ನಾನು ಪಣತಿಯಾಗಿದ್ದರೂ ಭ್ರಮೆಗಳೇತಕೆ ಗೆಳೆಯಾ ಹದವರಿತು ಹೆಪ್ಪಾಗಿರುವ ಮೊಸರಿನಲಿ ಕಲ್ಲ ಹುಡುಕುವುದೇತಕೆ ಇನಿಯಾ ಒಳಗವಿತಿರುವ ಕಂಪಿನ ಘ್ರುತವಿದ್ದರೂ ನಾರುವ ಭಾವಗಳೇತಕೆ ಗೆಳೆಯಾ ನೋವುನಲಿವಲೂ ಜೊತೆಯಾಗಿ ಹಿಂಬಾಲಿಸುವ ನೆರಳ ಬಾಧಿಸುವುದೇತಕೆ ಹೃದಯಾ ನೆರಳಿಗೆ ನಿನ್ನ ಹೊರತು ಮತ್ಯಾವ ಆಸರೆ, ನಿನಗೆ ಭಯಗಳೇತಕೆ ಗೆಳೆಯಾ ದುಃಖಗಳ ಮನದ ಮರುಭೂಮಿಯಲಿ ಬಿಸಿಗಾಳಿಯಾಗಿ ಸುಳಿಯುವುದೇತಕೆ […]
ಕಾವ್ಯಯಾನ
ಗಝಲ್ ವೆಂಕಟೇಶ್ ಚಾ ಭವಿಷ್ಯದ ಬದುಕಿನ ಚಿತ್ರಪಟ ಹಸಿರಾಗಿದೆ ನಾವಿಬ್ಬರೂ ಜೊತೆಯಾದಾಗ ನಿಸರ್ಗವು ಹೊಸ ಬದುಕಿಗೆ ಸಾಕ್ಷಿಯಾಗಿದೆ ನಾವಿಬ್ಬರೂ ಜೊತೆಯಾದಾಗ|| ಬಾಹುಗಳ ಬಂಧನವು ಮತ್ತಷ್ಟು ಗಟ್ಟಿಗೊಂಡಿದೆ ತಂಗಾಳಿಯ ತಂಪಿನಲಿ ಮಣ್ಣಿನ ಕಂಪಿಗೆ ಮನಸ್ಸು ಹೂವಾಗಿದೆ ನಾವಿಬ್ಬರೂ ಜೊತೆಯಾದಾಗ|| ಹೆಜ್ಜೆಗಳು ಜೊತೆಯಾಗಿ ಲಜ್ಜೆಯಿಲ್ಲದೆ ಸುಂದರ ಪಯಣ ಬೆಳೆಸಿವೆ ಮುಂಗಾರು ಮಳೆಗೆ ದಾರಿಯು ಹಸನಾಗಿದೆ ನಾವಿಬ್ಬರೂ ಜೊತೆಯಾದಾಗ || ನಂಬಿಕೆಯ ಕೊಡೆಯೊಂದು ರಕ್ಷಣೆಯ ಹೊಣೆಯನ್ನು ಹೊತ್ತಿದೆ ಬಹುದಿನಗಳ ಕನಸು ಹಣ್ಣಾಗಿ ನನಸಾಗಿದೆ ನಾವಿಬ್ಬರೂ ಜೊತೆಯಾದಾಗ || ಅಗೋ,ಮುಂಬರುವ ದಿನಗಳ ತುಂಬಾ […]
ಕಾವ್ಯಯಾನ
ಗೆರೆಗಳು ಎನ್.ಆರ್.ರೂಪಶ್ರೀ, ಬದುಕಿನ ಗೆರೆಗಳು ಒಂದೊಂದಾಗಿ ಮೂಡುತ್ತಲೇ ಹೋಗುತ್ತವೆ ಅಳಿಸಲಾಗದ ಗೆರೆಗಳು ಅಳಿಸಿದರೂ ಅಳಿಸಲಾಗದ ಗೆರೆಗಳು ಗೆರೆಗಳು ಗೆರೆಗಳಾಗಿಯೇ ಇರಬೇಕಾದ್ದು ಇರದೇ ಇರುವುದು ಗೆರೆಗಳ ನಡುನಡುವೆ ಚುಕ್ಕಿಚಿತ್ತಾರಗಳು ಜೀವನದ ಗೆರೆಗಳಲ್ಲಿ ಎಲ್ಲವೂ ಎಲ್ಲರದ್ದಾಗಿದ್ದರೂ ಯಾರದ್ದು ಯಾವುದು ಆಗಿರುವುದಿಲ್ಲ. ಗೆರೆಗಳೇ ಹಾಗೆ ಬದುಕಿನಲ್ಲಿ ಎಳೆಎಳೆಯಾಗಿ ಬಂದು ಎಳೆಯುತ್ತವೆ ಗೆರೆಗಳಿಲ್ಲದ ಬದುಕು ಬದುಕು ಅಲ್ಲ ಬದುಕಿನಲ್ಲಿ ಗೆರೆಗಳು ಇರಬೇಕೆಂದೇನಿಲ್ಲ ಬದುಕು ಬದುಕೇ ಗೆರೆಗಳು ಗೆರೆಗಳೇ ತಾನೇ. ******
ಕಾವ್ಯಯಾನ
ಬಂಧಿ ಎನಿಸಿಲ್ಲ ಬಂಧನದಲ್ಲಿ ಜಿ.ಲೋಕೇಶ್ ನಿನ್ನ ನೆನಪುಗಳಲ್ಲಿ ಬಂಧಿಯಾದ ನನಗೆ ಗೃಹ ಬಂಧನವು ಕಷ್ಟವೇನು ಅನಿಸುತ್ತಿಲ್ಲ ಏಳಿ, ಮಲಗಲು,.ನಾಲಿಗೆ ಎದೆಯ ಹೆಸರನ್ನು ಸಾರಿ ಸಾರಿ ಹೇಳುವಾಗ ಬಂಧನವು ಬಂಧಿ ಎನಿಸಿಲ್ಲ ಪ್ರತಿ ಮೂಲೆ ಮೂಲೆಯಲ್ಲಿ ನಿನ್ನೂರಿನ ನೆನಪುಗಳು ಜೊತೆಯಿರುವಾಗ ಬಂಧನವು ಬಂಧಿ ಎನಿಸಿಲ್ಲ ***** ಕೊಡಿಸಿದ ಅಷ್ಟು ವಸ್ತುಗಳು ಹೋದ ಪ್ರತಿ ಜಾಗಗಳಿಗೆ ಕರೆದೊಯ್ಯುತಿರುವಾಗ ಬಂಧನವು ಬಂಧಿ ಎನಿಸಿಲ್ಲ ಎಷ್ಟೋ ಭಾವಗಳನ್ನು ಪದಗಳಲ್ಲಿ ಕವಿತೆಯಾಗಲು ಪೋಣಿಸುತಿರುವಾಗ ಬಂಧನವು ಬಂಧಿ ಎನಿಸಿಲ್ಲ ****
ಕಾವ್ಯಯಾನ
ಗಝಲ್ ತೇಜಾವತಿ ಹೆಚ್. ಡಿ. ಸರಿರಾತ್ರಿಯ ನಿದಿರೆಯನ್ನು ಕಸಿದು ಮನವು ಕೇಳುತ್ತದೆ ನಿನ್ನನ್ನೆ ಒತ್ತಿದರು ಮುಚ್ಚದ ರೆಪ್ಪೆಯೊಳಗೆ ಕಂಗಳು ಅರಸುತ್ತವೆ ನಿನ್ನನ್ನೆ ಸಂತೆಯೊಳಗಿದ್ದರು ಏಕಾಂತದ ಭಾವ ಕವಿದು ವಿರಹ ಕಾಡಿದೆ ಬಂದಪ್ಪಿ ಬಿಡು ದಾಹ ತೀರುವಷ್ಟು ಬೆಳಗೊಳಗೆ ಬೇಡುತ್ತದೆ ನಿನ್ನನ್ನೆ ಹೃದಯದೊಳಗೆ ಅಡಗಿಸಿಟ್ಟ ಒಲವು ಹೊರಗಿಣುಕಿ ನೋಡುತ್ತಿದೆ ಎಲ್ಲಾದರು ಮಿಡಿಯಬಹುದೇ ಅಂತರಂಗ ತುಡಿತ ಕಾಯುತ್ತದೆ ನಿನ್ನನ್ನೆ ಸೆರೆಮನೆಯ ಬದುಕು ಸ್ವಚ್ಛಂದ ಹಾರಾಡಲು ಹಾತೊರೆಯುತ್ತಿದೆ ವಂಚನೆಯಿಂದ ನ್ಯಾಯ ಬಯಸಿ ನಂಬಿಕೆಯಲ್ಲಿ ಹಂಬಲಿಸುತ್ತದೆ ನಿನ್ನನ್ನೆ ಪ್ರತಿ ಇರುಳು ಹೊಂಗನಸಿನೊಡನೆ ಹತಾಶೆಗೊಳ್ಳುತ್ತಿವೆ […]
ಕಾವ್ಯಯಾನ
ಗಝಲ್ ಮರುಳಸಿದ್ದಪ್ಪ ದೊಡ್ಡಮನಿ ನನ್ನೆದೆಯ ಒಳಗ ನೋವು ತಂದಿರುವೆ ಹೇಳಿ ಹೋಗುಕಾರಣ ಸತ್ತ ಕನಸುಗಳ ಹೊತ್ತು ಹರದಾರಿ ನಡೆದಿರುವೆ ಹೇಳಿಹೋಗುಕಾರಣ ಜೀವ ಪ್ರೀತಿಯ ಒಡಲೊಳಗೆ ತುಂಬಿಕೊಂಡಿದ್ದೆನೆ ಗಂಜಿಯಾದರು ಕುಡಿದು ಬದುಕಿಸುವೆ ಹೇಳಿ ಹೋಗುಕಾರಣ ಸಂದುಕದಲ್ಲಿದ್ದ ಒಂಕಿ ಡಾಬು ಜೂಲ್ಪಿಹೂ ತೋಳ್ ಬಂದಿ ತೊಡಿಸಿರುವೆ ರೇಶ್ಮಿ ಇಳಕಲ್ಲ ಜರತಾರಿ ಸಿರೆ ಉಡಿಸಿರುವೆ ಹೇಳಿ ಹೋಗುಕಾರಣ ನನ್ನೊಂದಿಗೆ ಒಮ್ಮೆಯೂ ಮಾತನಾಡಲಿಲ್ಲ ಮೌನ ಮುರಿದು ನಿನ್ನೊಳಗೆ ಎನು ತುಂಬಿಕೊಂಡಿರುವೆ ಹೇಳಿ ಹೋಗುಕಾರಣ ಅನುಮಾನಗಳಿದ್ದರೆ ಬಿಡು ಅಗ್ನಿ ಪರಿಕ್ಷೆಯ ನೇಪ ಮಾತ್ರ ಬೇಡ […]
ಕಾವ್ಯಯಾನ
ಪ್ರಕೃತಿ ಆಚರಿಸುತಿದೆ ಹಬ್ಬ ಶಾಲಿನಿ ಆರ್. ಮಾನವನ ತಗ್ಗು ದಿಬ್ಬಗಳ ಲೀಲೆಗೆ, ನಲಿದಿದೆ ಪ್ರಕೃತಿ ಈ ಸೋಜಿಗೆ, ಹಲವು ಜೀವನವ ಕಸಿದ ಕರೋನಾ, ಪ್ರಕೃತಿಗೆ ಇದುವೇ ವರವಾಯಿತೇನಾ? ಮನುಜನ ವಿಪರೀತಗಳನ್ನೆಲ್ಲ ಅಳಿಸಿ ಪ್ರಕೃತಿ ತನ್ನತನದ ಪ್ರೀತಿ ಉಳಿಸಿ ಹರಸಿ, ಹಾಡುವ ಹಕ್ಕಿಗಳೆಲ್ಲ ಹಾರುತಿವೆ ಮನಸಾರೆ ಖುಷಿಯಾಗಿ, ನಭದ ನೀಲಿಯಲಿ ನೀಲವಾಗಿ, ಬೀಸುವ ತಂಪೆಲರಿಗು ಬಂದಿದೆ ಅಭಿಮಾನ, ನಾ ನಾಗಿಹೆನೆಂಬ ಸಮ್ಮಾನ, ಹರಿವ ನದಿಯದು ಈಗ ಶುದ್ದ ಸ್ಪಟಿಕವಂತೆ, ಝುಳು ಝುಳು ನಿನಾದಕದು ಗೆಜ್ಜೆ ಕಟ್ಟಿ ಸಡಗರಿಸುತಿಹದಂತೆ, ಪ್ರಾಣಿ […]
ಕಾವ್ಯಯಾನ
ಕನಸು ಶ್ವೇತಾ ಮಂಡ್ಯ ದಿಟ್ಟಿಸುತ ನೀ ನನ್ನ ತುಸುವೇ ಒತ್ತರಿಸಿ ಬಂಧಿಸಿ ಬಾಹುವಿನೊಳು … ನಿನ್ನೊಲವಿನ ಗಾಳಿಯೊಳು ಸುಳಿದಾಡಿದ ಮುಂಗುರಳ ಮೆಲ್ಲನೆ ಸರಿಸಿ…. ರವಾನಿಸಿ ಎನ್ನೆದೆಗೆ ನಿನ್ನೊಲುಮೆ ನಿಂತ ನೆಲವನೆ ಮರೆಸಿ ಹರಸಿ ಅನೂಹ್ಯ ಪ್ರೀತಿ… ಭಾವದ ಮಳೆಯಲಿ ನೆನೆ ನೆನಸಿ ಅವಿಚ್ಛಿನ್ನ ಅನುಭಾವದ ಸಾಂಗತ್ಯ ಕನಸಲಷ್ಟೇ ನಿನ್ನೊಂದಿಗೆ ಒಂದಾಗಿಸಿದೆ. ******
ಕಾವ್ಯಯಾನ
ಗಝಲ್ ಕೆ.ಮಹದೇವನಾಯಕ ನವಿರಾಗಿ ಬಾ ಬಾ ನನ್ನುಸಿರ ಬಾರಕ್ಕೆ ಜೀವ ರಸ ತುಂಬಿ ನಗು ನಗುತ ಬಾಡಿರುವ ಹೃದಯಕ್ಕೆ ಭಾವ ತುಂಬು ದಿಕ್ಕುತಪ್ಪದಂತೆ ಮೆಲ್ಲನೆ ನಗುತ ಕಮರಿದ ಕನಸಿಗೆ ನೆನಪುಗಳ ಸೂರು ಮುಗಿಲಗಲ ಬೆಳಕಿನ ಪಥದಂತೆ ಬಾ ಕಲ್ಪನೆಗಳ ಸ್ವಾರ್ಥದ ದುಃಖ ಸವೆಸಿ ಜೊತೆ ಜೊತೆಯಾಗು ನಗುತ ಮಲೆತು ಮರೆಯಾದ ನೊರಜು ನೆನಪ ನೆಲಬಾನಿನಂಚಿನಲಿ ಹೂತುಬಿಡು ಒಡಲಾಳದ ಸಾಗರದ ಅಲೆಯಲ್ಲಿ ತೂಗಿ ಗಗನ ಚುಂಬನದಂತೆ ನಗುತ ಕಾನನದ ಸೊಬಗು ನಿನ್ನ ಸರಸವಿಲ್ಲದೆ ಬೀಕೋ ಎಂದು ಗಾಳಿ ತೂರಿದೆ […]