ಕಾವ್ಯ ಸಂಗಾತಿ ಡಾ ತಾರಾ ಬಿ ಎನ್ ಅಧಿಕಾರ ಅಧಿಕಾರವೆಂದರೆಕೈಯಲ್ಲಿರುವ ಕಿರೀಟವಲ್ಲ,ಜವಾಬ್ದಾರಿಯುತ ಹೊಣೆಗಾರಿಕೆಅದು ಗದ್ದುಗೆ ಮೇಲಿನ ಮೋಹ ಅಲ್ಲ,ನೆಲದ ಮೇಲಿನ ಬೆಳಕ ದೀವಿಗೆ.ಹೆಜ್ಜೆ ಹಾಕುವ ಪ್ರತಿ ಹಾದಿಯನ್ನೂಜವಾಬ್ದಾರಿಯಿಂದ ತೋರುವ ದೀಪ.ಕಠಿಣ ಧ್ವನಿಯಲ್ಲಿ ಕೂಗುವುದಲ್ಲ ಕೀಲುರಿಮೆಯಿಂದ ಕಾಣುವುದಿಲ್ಲ ಕಿರಿ ಮಾಡಿ ಮೊದಲಿಸುದಲ್ಲ ಅಧಿಕಾರ,!ಮೃದು ಭಾವದಲ್ಲಿ ನಂಬಿಕೆ ಹುಟ್ಟಿಸುವಂಥದ್ದು. ಅಧಿಕಾರ!ಭಯ ಹುಟ್ಟಿಸುವ ಕೈಯಲ್ಲಲ್ಲ,ಆಶ್ರಯ ಕೊಡುವ ಹೃದಯದ ಆದರ್ಶ ಅರ್ಥಪೂರ್ಣ ವ್ಯವಸ್ಥೆ ಅಧಿಕಾರ!ಒಮ್ಮೆ ಅಹಂಕಾರವಾದರೆಅದು ವಿಷವಾಗುತ್ತ ಮನಸ್ಸುಹದಗೆಡಿಸಿ ಮನಗಳ ಕೊಲೆಯಂತಪಾಪಕೃತ್ಯ ಇಳಿಸಿಬಿಡುವ ನಶೆ.ಸ್ವಂತ ಬೇರುಗಳನ್ನೇಸುಟ್ಟುಹಾಕುವ ಅಗ್ನಿ. ಅಧಿಕಾರ,,!ಸೇವೆಯಾಗಿ ಪರಿವರ್ತಿತವಾದರೆಅದು ಅಮೃತವಾಗುವ ಸಂಜೀವಿನಿಬಾಯಾರಿದ ಬದುಕುಗಳಿಗೆ ಜೀವ ನದಿ. ಅಧಿಕಾರ.!ಆಜ್ಞೆ ನೀಡುವುದು ಸುಲಭ,ಆದರ್ಶವಾಗಿಸುವುದು ಕಠಿಣ.ತೀರ್ಪು ಹೇಳುವುದು ಸುಲಭ,ನ್ಯಾಯ ಒದಗಿಸುವದು ಧೈರ್ಯ.ನಿಜವಾದ ಅಧಿಕಾರಎತ್ತರದಲ್ಲಿ ನಿಂತು ನೋಡುವುದಲ್ಲ,ಕೆಳಗಿಳಿದು ಕೈ ಹಿಡಿದು ನಡೆಯುವುದು.ತಾನೊಬ್ಬನೆ ಹೊಳೆಯುವುದಲ್ಲ, ಬಿದ್ದವರನ್ನು ಕೈ ಹಿಡಿದು ಎತ್ತಿ ಬದುಕ ಬೆಳಗಿಸಿ ಮೌನವಾಗುವುದು.ಅಧಿಕಾರಗೆಲುವಿನ ಘೋಷಣೆ ಅಲ್ಲ,ಸೋಲಿನ ಸಮಯದಲ್ಲಿಜೊತೆಯಾಗಿರುವ ಆಪ್ತತೆ.ಗತಕಾಲದಲ್ಲಿ ಆಳಿದಗದ್ದುಗೆಗಳು ಕರಗಿಮಣ್ಣಲ್ಲಿ ಮಣ್ಣಾಗಿವೆ.ಹುದ್ದೆಗಳು ರದ್ದಾಗುತ್ತವೆ.ಉಳಿಯುವುದು ಮಾತ್ರ ನಿನ್ನ ನಡತೆ ಘೋರತೆಯ ನೆನಪು.ಹಾಗಾಗಿಅಧಿಕಾರವನ್ನು ಧರಿಸುಭಾರವಾಗಿ ಅಲ್ಲ, ಭಕ್ತಿಯಂತೆ.ಅದನ್ನು ಬಳಸು.ಯುಕ್ತಿ, ಸ್ವಾರ್ಥಕ್ಕಾಗಿ ಅಲ್ಲ,ಸಾರ್ಥಕತೆಗಳಿಗಾಗಿ.ಏಕೆಂದರೆಅಧಿಕಾರಕ್ಕೆ ಅಂತ್ಯವಿದೆ,ಉತ್ತಮಾಧಿಕಾರದ ಮೌಲ್ಯಕ್ಕೆಅಂತ್ಯವಿಲ್ಲ. ಅದು ಶಾಶ್ವತ ಡಾ ತಾರಾ ಬಿ ಎನ್