ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com


೧
ಪ್ರೀತಿ
ನಿನ್ನ ಹತ್ತರ ಎಷ್ಟರ ಐತಿ
ಅಂತಾಳ ಆಕಿ !
ಅಯ್ಯೋ ಮಾರಾಯಾ
ಅದೆಲ್ಲಿ ಐತಿ ಅಂತಾಳ ಈಕಿ?

೨
ಸಾಕು ಬಿಡು‌ ಮಾರಾಯ್ತಿ
ಒಮ್ಮೆ‌ ಪ್ರೀತಿ‌ ಮಾಡಿದ್ನಿ
ಮತ್ತ ಅದನ್ನ‌ ನೆನೆಸಿ‌ನೆನೆಸಿ
ಈಗ್ಯಾಕ ಜೀಂವ ನೀ ತಿಂತಿದಿ

೩
ಔಷದ ಇಲ್ಲದ ರೋಗ
ಪ್ರೀತಿ,ಅದನ್ನು ತಿಳದೂ  ತಿಳದೂ
ಮಾಡತೈತಲ್ಲ ಈ ಲೋಕಕ್ಕ
ಎಂಥಾ ಹುಚ್ಚ ಹಿಡದೈತಿ!

೪
ಹತ್ತಿರ ಬರಬೇಡ ಅಂತ
ಆರನೂರ ಕೊಟ್ಟ
ಗೋದ್ರೇಜ್ ಕೀಲಿ ಹಾಕಿನಿ
ಕನಸನ್ಯಾಗ ಗೊತ್ತಿಲ್ಲದಾಂಗ
ಕೀಲಿ‌ ಮುರದಾಳ
ಏನ ಅನಬೇಕರಿ ಆಕಿಗಿ

೫
ಬರಿ ಬ್ಯಾಡರಿ ಅಜ್ಜ
ನಿವ್ ಮುದಕಾರಾಗಿರಿ
ಅಂತ ಹುಡುಗರ ವರಾತ
ಹೌದು
ಬರುದುಲ್ಲಲ್ಲ ನಮಗ
ಇದನ
ಬಿಟ್ಟ  ಬ್ಯಾರೆ  ಕವಿತಾ!

೬
ನಾವು ಬರೆಯುವವರು
ಬರೆದು ಹುಚ್ಚ ರಾಗತೆವಿ
ನಿವ್  ಅನುಭವಿಸಿತಿರಿ
ಅನುಭವಿಸಿ ಧನ್ಯರಾಗತಿರಿ

೭
ಹೆಂಡತಿ ಹತ್ತರ ಇದ್ದರ
ಒಂದೆ ಸಮ ಬೈಗಳ
ಬೇಜಾರ
ಇವನ್ ಮನಸು ಇಲ್ಲೆ ಇಲ್ಲಿ
ಅಂತ
ಆಕಿದ ಒಂದ ತಕರಾರ

೮
ಮುಗದ ಮಾತಿಗೆ ಯಾಕ
ಅಳತೆರಿ ಸ್ವಾಮಿ ಇರೋದನ್ನು
ಚಂದಾಂಗಿ ಅನುಭವಿಸ್ರಿ !
ನಿಮ್ಮನ್ನ ಬಿಟ್ಟ ಹೋದವರು
ಖಂಡಿತವಾಗೂ ಅಲ್ಲಿನೂ ಚಂದ
ಅದಾರ್ರಿ!!

೯
ಜೀವನ ಅಂದರ
ಮೊದಮೊದಲ ಕಳಕೊಳ್ಳೊದು
ಪಡಕೋಳ್ಳೊದರಿ!
ನಂತರ  ಎಲ್ಲಾನೂ
ಬಿಟ್ಕೊತ
ಹೋಗೂದರಿ!!

೧೦
ಇದೆಂಥಾ ಕವಿತಾ
ಒಂದ‌ ಲಯ ಇಲ್ಲ, ಪ್ರಾಸ ಇಲ್ಲ
ಅಂತಾನ ವಿಮರ್ಶಕ!
ನಿವ್ ಏನ್ ಚಂದ ಬರದಿರಿ
ಅಂತಾಳ ವಿಮರ್ಶಕಿ!!


ʼ

About The Author

Leave a Reply

You cannot copy content of this page

Scroll to Top