ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಒಲವು ಬಾಡಿತೇಕೆ ಹೇಳು ಮನವೇ
ಬತ್ತಿ ಹೋದವೇ ಭಾವಗಳು
ನಲಿವ ಹೃದಯದ ಬಡಿತ ನಿಂತಿತೇ
ಸೋತು ಸೊರಗಿದೆ  ಬಂಧಗಳು

ಕಣ್ಣು ಕಣ್ಣಲಿ ಬೆಸೆದು ನೋಟವು
ಹೊಸತು ಲೋಕವ ಕಟ್ಟಿದೆ
ಮಣ್ಣು ಮಾಡಿದೆ ಎದೆಯ ಕನಸನು
ಪ್ರೇಮದರಮನೆ ಕುಸಿದಿದೆ

ಮಾತು ಬಾರದ ಮೂಕ ಹಕ್ಕಿಯ
ತೆರದಿ ಜೀವನವಾಗಿದೆ
ತಂತಿ ಹರಿದ ಜೀವ ನಾದದಲಿ
ಮೌನದ ಆಲಾಪನೆ ಕೇಳಿದೆ

ಬಾಳ ಪಯಣದಿ ಆಸರೆ ಇಲ್ಲದೆ
ಬಾಡಿ ಹೋಗಿದೆ ಬಯಕೆಯು
ಓಡಿ ಬರುವೆಯಾ ಒಮ್ಮೆಯಾದರೂ
ಕೊನೆಗೆ ನೋಡುವಾಸೆಯು


About The Author

Leave a Reply

You cannot copy content of this page

Scroll to Top