ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಪ್ರಭಾವತಿ ದೇಸಾಯಿ ಅವರ ಗಜಲ್

ಕಾವ್ಯ ಸಂಗಾತಿ ಪ್ರಭಾವತಿ ದೇಸಾಯಿ ಗಜಲ್ ಬದುಕಿನ ಕಳವಳ ಎದೆಯ ಒಳಗೆ ಕಡೆಗೋಲು ಮಥಿಸಿತು ಇರುಳುಕಟ್ಟಿದ ಕರಿ ಮೋಡವು ತುಂತುರ ಹನಿಗಳ ಉದುರಿಸಿತು ಇರುಳು ನೆನಪಿನ ಹಳೆ ಗಂಟು ಬಿಚ್ಚಿ ಕಂಗಳ ನಿದಿರೆ ಕದಿಯಿತು ಚುಕ್ಕಿಹುಣ್ಣಿಮೆಯ ಚಂದಿರ ಕಿರಣ ಕೊಳದ ಮೊಗ್ಗು ಅರಳಿಸಿತು ಇರುಳು ಗತಕಾಲದ ವೈಭವ ನೆನೆಯುತ ಮೌನದಲಿ ಜಂತಿ ಎಣಿಸಿದೆ.ಮುತ್ತಿದ ಕತ್ತಲು ವಿರಹ ಅಗ್ನಿಯಲಿ ದೇಹ ದಹಿಸಿತು ಇರುಳು ಕುಸುಮದಲ್ಲಿ ಕಂಡ ಕನಸುಗಳು ಉದುರಿ ಮಣ್ಣಲಿ ಸೇರಿದವುಹೃದಯದ ಬಯಕೆಯು ಭೂತವಾಗಿ ಕಾಡಿಸಿ ನರಳಿಸಿತು ಇರುಳು ಅರ್ಧರಾತ್ರಿಯಲಿ ಗೊಂಬೆಗಳು ಎದ್ದು ಕುಣಿದಾಡ ತೊಡಗಿದವುಮೂಡಣದಲಿ ಮೂಡಿದ ಹೊನ್ನಕಿರಣ ಪ್ರಭೆ ಸರಿಸಿತು ಇರುಳು ಪ್ರಭಾವತಿ ಎಸ್ ದೇಸಾಯಿ

ಪ್ರಭಾವತಿ ದೇಸಾಯಿ ಅವರ ಗಜಲ್ Read Post »

ಆರೋಗ್ಯ, ಇತರೆ

“ಬೇಸಿಗೆಯಲ್ಲಿ ಆರೋಗ್ಯ ರಕ್ಷಣೆಯ ಅವಶ್ಯಕತೆ” ವಿಶೇಷಬರಹ ಸಂಗಮೇಶ್ ಜವಾದಿ

ಆರೋಗ್ಯ ಸಂಗಾತಿ ಸಂಗಮೇಶ್ ಜವಾದಿ “ಬೇಸಿಗೆಯಲ್ಲಿ ಆರೋಗ್ಯ ರಕ್ಷಣೆಯ ಅವಶ್ಯಕತೆ”  ಬೇಸಿಗೆಯು ವರ್ಷದ ಅದ್ಭುತ ಸಮಯವಾಗಿದ್ದು, ಬೆಚ್ಚಗಿನ ಹವಾಮಾನ, ದೀರ್ಘ ಹಗಲು ಸಮಯ ಮತ್ತು ಹೊರಾಂಗಣದಲ್ಲಿ ಆನಂದಿಸಲು ಸಾಕಷ್ಟು ಅವಕಾಶಗಳನ್ನು ತರುತ್ತದೆ. ಆದಾಗ್ಯೂ, ಸೂರ್ಯ, ಶಾಖ ಮತ್ತು ಆರ್ದ್ರತೆಯೊಂದಿಗೆ ಸಂಭಾವ್ಯ ಆರೋಗ್ಯ ಅಪಾಯಗಳು ಬರುತ್ತವೆ, ಅವುಗಳನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಅವು ಹಾನಿಕಾರಕವಾಗಬಹುದು. ಬೇಸಿಗೆಗೆ ನಾವು ಸಜ್ಜಾಗುತ್ತಿರುವಾಗ, ನಮ್ಮ ಬಗ್ಗೆ ಕಾಳಜಿ ವಹಿಸುವುದು ಪ್ರಮುಖ ಆದ್ಯತೆಯಾಗಿರಬೇಕು ಎಂಬುದನ್ನು ನೆನಪಿಟ್ಟುಕೊಳ್ಳುವುದು ಅಷ್ಟೇ ಮುಖ್ಯ.ಸೂರ್ಯನು ಸುಡುತ್ತಾ ಬಹುಮುಖಿ ದೇಹದ ತೊಂದರೆಗಳನ್ನು ಎದುರಿಸುತ್ತಿರುವಾಗ, ಬೇಸಿಗೆಯ ತಿಂಗಳುಗಳಲ್ಲಿ ಆರೋಗ್ಯವಾಗಿ ಮತ್ತು ಸುರಕ್ಷಿತವಾಗಿರಲು ಕೆಲವು ಸಲಹೆಗಳು ನೀಡುವ ಪ್ರಯತ್ನ ಇಲ್ಲಿ ಮಾಡಲಾಗಿದೆ. ರಾಜ್ಯಾದ್ಯಂತ ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗ ಅದರಲ್ಲಿಯೂ ಬೀದರ ಮತ್ತು ಕಲಬುರ್ಗಿಜಿಲ್ಲೆಯಾದ್ಯಂತ ಪ್ರಸ್ತುತ ತಿಂಗಳಿನಿಂದ ಬಿಸಿಲಿನ ಪ್ರಖರತೆ ಮತ್ತು ತೀವ್ರತೆ ಕಂಡುಬಂದ ಹಿನ್ನೆಲೆಯಲ್ಲಿ ಸಾರ್ವಜನಿಕರು, ಗರ್ಭಿಣಿಯರು, ಬಾಣಂತಿಯರು, ಮಕ್ಕಳು ಹಾಗೂ ವಯೋವೃದ್ದರು ತಮ್ಮ ಆರೋಗ್ಯದ ರಕ್ಷಣೆಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಬಹಳಷ್ಟು ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಬಿಸಿಲಿನ ಪ್ರಖರತೆ ಮತ್ತು ತೀವ್ರತೆ ಸಂದರ್ಭದಲ್ಲಿ ಸಾರ್ವಜನಿಕರು ಕೈಗೊಳ್ಳಬೇಕಾದ ಕ್ರಮಗಳ ಕುರಿತು. ಸರ್ಕಾರದಿಂದ ಸಾರ್ವಜನಿಕರಿಗೆ ಅನೇಕ ಸಲಹೆಗಳನ್ನು ನೀಡಿರುತ್ತಾರೆ. ಅವುಗಳನ್ನು ಖಂಡಿತವಾಗಿಯೂ ಪಾಲಿಸಬೇಕು. ಬೇಸಿಗೆ ಸಮಯದಲ್ಲಿ ಹೆಚ್ಚು ಹೆಚ್ಚು ನೀರನ್ನು ಕುಡಿಯಬೇಕು. ಮಜ್ಜಿಗೆ ಅಥವಾ ಎಳನೀರು, ಹಣ್ಣಿನ ರಸವನ್ನು ಹೆಚ್ಚಾಗಿ ಸೇವಿಸಬೇಕು. ನೀರಿನ ಅಂಶ ಹೆಚ್ಚಾಗಿರುವ ತರಕಾರಿಗಳು, ಹಣ್ಣುಗಳನ್ನು ಸೇವಿಸುವುದು ಆರೋಗ್ಯ ದೃಷ್ಟಿಯಿಂದ ಉತ್ತಮ. ಸಡಿಲವಾದ ತೆಳು ಬಣ್ಣದ ಹತ್ತಿಯ ಬಟ್ಟೆಯನ್ನು ಕಡ್ಡಾಯವಾಗಿ ಧರಿಸಬೇಕು ಹಾಗೂ ಗಾಳಿಯಾಡುವ ಪಾದರಕ್ಷೆ ಧರಿಸುವುದು ಅಷ್ಟೇ ಸುರಕ್ಷಿತ. ಹೊರಗಡೆ ತೆರಳುವ ವೇಳೆ ತಂಪು ಕನ್ನಡಕ, ಛತ್ರಿ, ಟವೆಲ್ ಅಥವಾ ಬಿಸಿಲಿನಿಂದ ಕಾಪಾಡಿಕೊಳ್ಳುವ ಸಾಮಾನ್ಯ ಕ್ರಮಗಳನ್ನು ಪಾಲಿಸಬೇಕು. ರೇಡಿಯೊ, ದೂರದರ್ಶನ ಹಾಗೂ ದಿನಪತ್ರಿಕೆಗಳಲ್ಲಿ ಬಿಸಿಯಾದ ಗಾಳಿ ಅಥವಾ ಶಾಖ ತರಂಗದ ಬಗ್ಗೆ ನೀಡುವ ಮಾಹಿತಿ ಅನುಸಾರ ದೈನಂದಿನ ಚಟುವಟಿಕೆಗಳನ್ನು ಚಾಚೂ ತಪ್ಪದೆ ಪಾಲಿಸಬೇಕು.ಅಲ್ಲದೆ  ವಿಶೇಷವಾಗಿ ಹೇಳಬೇಕೆಂದರೆ ‎ಬಿಸಿಲಿನಲ್ಲಿ  ಕಾರ್ಯನಿರ್ವಹಿಸುವವರು (ಜಮೀನು ಕೆಲಸ, ರಸ್ತೆ ಕಾಮಗಾರಿ ಮುಂತಾದವು) ಆದಷ್ಟು ಬೆಳಗ್ಗೆ 11 ಗಂಟೆಯ ಒಳಗೆ ಮತ್ತು ಸಂಜೆ 4 ಗಂಟೆ ನಂತರ ಕೈಗೊಳ್ಳುವುದು ಉತ್ತಮ. ಈ ಅವಧಿಯಲ್ಲಿ ಶ್ರಮದಾಯಕ ಕೆಲಸಗಳಿಂದ ವಿಶ್ರಾಂತಿ ಪಡೆಯಬೇಕು. ಬಿಸಿಲಿನಲ್ಲಿ ನಡೆಯುವಾಗ ಕಡ್ಡಾಯವಾಗಿ ಚಪ್ಪಲಿ ಧರಿಸಿ. ಟೀ ಅಥವಾ ಕಾಫಿ, ಹೆಚ್ಚು ಸಕ್ಕರೆ ಅಂಶವನ್ನು ಹೊಂದಿರುವ ಕಾರ್ಬೋನೇಟೆಡ್ ಪಾನೀಯ ಹಾಗೂ ಮದ್ಯಪಾನದಿಂದ ದೂರವಿರುವುದು ಆದಷ್ಟು ಒಳ್ಳೆಯದು. ವ್ಯಕ್ತಿ ತೊದಲು ಮಾತು ಅಥವಾ ಅರ್ಥ ರಹಿತವಾಗಿ ಬಡಬಡಿಸಿದಲ್ಲಿ ಕೂಡಲೇ ನೆರಳಿನ ಪ್ರದೇಶಕ್ಕೆ ಸ್ಥಳಾಂತರಿಸಿ. ಕೆಳಗೆ ಮಲಗಿಸಿ ಕಾಲುಗಳನ್ನು ಮೇಲಕ್ಕೆ ಎತ್ತಿ ವಿಶ್ರಾಂತಿ ಪಡೆಯುವುದು ಸೂಕ್ತ ಮತ್ತು ಅವಶ್ಯಕವಾಗಿದೆ.ಇನ್ನು ಆಹಾರವನ್ನು ತೆಗೆದುಕೊಳ್ಳುವಾಗ, ಯಾವಾಗಲೂ  ಕೈಗಳನ್ನು ಚೆನ್ನಾಗಿ ತೊಳೆಯಿರಿ ಮತ್ತು ಮೂಲಭೂತ ನೈರ್ಮಲ್ಯ ಮುನ್ನೆಚ್ಚರಿಕೆಗಳನ್ನು ಗಮನಿಸಿ. ಕಲುಷಿತ ಆಹಾರ ಮತ್ತು ನೀರಿನಿಂದ ಸೋಂಕು ತಗುಲುವುದನ್ನು ತಪ್ಪುತ್ತದೆ.ಪ್ರಯಾಣಿಸುವಾಗ ಅಥವಾ ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಾಗ ಸೂರ್ಯನ ಶಾಖದಿಂದ ಕಡ್ಡಾಯವಾಗಿ ರಕ್ಷಿಸಿಕೊಳ್ಳಲು ಕ್ಯಾಪ್ ಮತ್ತು ಸನ್ ಗ್ಲಾಸ್ ಧರಿಸಿ. ಟೋಪಿ ಮತ್ತು ಸನ್ ಗ್ಲಾಸ್ ಧರಿಸುವುದರಿಂದ ಸೂಕ್ಷ್ಮ ಪ್ರದೇಶಗಳು UV ಕಿರಣಗಳಿಗೆ ಹಾನಿಯಾಗದಂತೆ ರಕ್ಷಿಸುತ್ತದೆ.ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿ :ಏನು ತಿನ್ನುತ್ತೀರಿ ಮತ್ತು  ದೇಹವನ್ನು ಹೇಗೆ ನಡೆಸಿಕೊಳ್ಳುತ್ತೀರಿ ಎಂಬುದರ ಆಧಾರದ ಮೇಲೆ ಬೇಸಿಗೆಯು ಮಾನವರ ಶಕ್ತಿಯ ಮಟ್ಟಗಳು, ಚರ್ಮ, ರೋಗನಿರೋಧಕ ಶಕ್ತಿ ಮತ್ತು ಮಾನಸಿಕ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಒಂದು ವೇಳೆಬಿಸಿಗಾಳಿ ಮತ್ತು ಅತಿಯಾದ ತಾಪಮಾನದಿಂದ ಆರೋಗ್ಯ ಸಮಸ್ಯೆಗಳು ಉಂಟಾದಲ್ಲಿ ಸಮೀಪದ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿ ಅಥವಾ 108/102 ಕ್ಕೆ ಕರೆ ಮಾಡುವುದು ಸೂಕ್ತ.ಕೊನೆಯದಾಗಿ ಹೇಳುವುದಾದರೆ : ಬೇಸಿಗೆಯಲ್ಲಿ ಆರೋಗ್ಯವಾಗಿರಲು, ದಿನಕ್ಕೆ 4-5 ಲೀಟರ್ ನೀರು ಕುಡಿಯುವುದು, ಕಲ್ಲಂಗಡಿ, ಸೌತೆಕಾಯಿಯಂತಹ ನೀರಿನಂಶವಿರುವ ಆಹಾರ ಸೇವಿಸುವುದು, ಮತ್ತು ಮಧ್ಯಾಹ್ನ 11 ರಿಂದ 4 ರವರೆಗೆ ಬಿಸಿಲಿನಲ್ಲಿ ಓಡಾಡುವುದನ್ನು ಕಡಿಮೆ ಮಾಡುವುದು ಮುಖ್ಯ. ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸಿ, ಸನ್‌ಸ್ಕ್ರೀನ್ ಬಳಸಿ ಮತ್ತು ತಾಜಾ ಆಹಾರ ಸೇವಿಸುವ ಮೂಲಕ ನಿರ್ಜಲೀಕರಣ ಹಾಗೂ ಶಾಖದ ಹೊಡೆತವನ್ನು ತಪ್ಪಿಸಬಹುದು.ವಿಶೇಷವಾಗಿ ದಿನವಿಡೀ ಸಾಕಷ್ಟು ನೀರು, ಎಳನೀರು, ನಿಂಬೆ ಪಾನಕ, ಮತ್ತು ಮಜ್ಜಿಗೆ ಕುಡಿಯುವುದು.ಕಲ್ಲಂಗಡಿ, ಸೌತೆಕಾಯಿ, ಕಿತ್ತಳೆ, ದ್ರಾಕ್ಷಿ, ಮತ್ತು ಮಾವಿನಹಣ್ಣಿನಂತಹ ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಹೆಚ್ಚಾಗಿ ಸೇವನೆ ಮಾಡುವುದು ಆರೋಗ್ಯ ಹಿತದೃಷ್ಟಿಯಿಂದ ಅತ್ಯುತ್ತಮ ಕ್ರಮವಾಗಿದೆ.ಅಲ್ಲದೆ ಹಸಿರು ತರಕಾರಿಗಳು, ಕಲರ್ ಫುಲ್ ಹಣ್ಣುಗಳು ಮತ್ತು ಗಿಡಮೂಲಿಕೆಗಳನ್ನು ಸೇವಿಸುವುದು ಒಳ್ಳೆಯದು. ಇವು ದೇಹವು ಅದರ ಹೈಡ್ರೇಶನ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಚರ್ಮವನ್ನು ಸಂಪೂರ್ಣವಾಗಿ ರಕ್ಷಿಸುತ್ತದೆ.ಜೊತೆಗೆ ನಿಂಬೆ ನೀರು ಸಹ  ದೇಹವನ್ನು ತಂಪಾಗಿಸಲು ಸಹಾಯ ಮಾಡುತ್ತದೆ.ಅಂದಹಾಗೆ ಬೇಸಿಗೆಯು ವರ್ಷದ ಅದ್ಭುತ ಸಮಯ, ಆದರೆ ಸಂಭಾವ್ಯ ಆರೋಗ್ಯ ಅಪಾಯಗಳನ್ನು ತಪ್ಪಿಸಲು ನಮ್ಮನ್ನು ನಾವು ನೋಡಿಕೊಳ್ಳುವುದು ಅಷ್ಟೇ ಮುಖ್ಯವಾಗಿರುತ್ತದೆ. ಈ ಸಲಹೆಗಳನ್ನು ಅನುಸರಿಸುವ ಮೂಲಕ ಬೇಸಿಗೆಯಲ್ಲಿ ದೊರೆಯಬಹುದಾದ ಎಲ್ಲವನ್ನೂ ಆನಂದಿಸುತ್ತಾ ಆರೋಗ್ಯವಾಗಿ ಮತ್ತು ಸುರಕ್ಷಿತವಾಗಿರಲು ಸಾಧ್ಯವಾಗುತ್ತದೆ. ಬೇಸಿಗೆಯ ತಿಂಗಳುಗಳಲ್ಲಿ ಮಾನವರ ಆರೋಗ್ಯದ ಬಗ್ಗೆ ಯಾವುದೇ ಸಮಸ್ಯೆ ಇದ್ದರೆ ಅಥವಾ ಕಾಳಜಿಗಳಿದ್ದರೆ, ಸಮೀಪದ ಆರೋಗ್ಯ ಕೇಂದ್ರಗಳನ್ನು ದಯವಿಟ್ಟು ಸಂಪರ್ಕಿಸಿ. ಸಂಗಮೇಶ ಎನ್ ಜವಾದಿ

“ಬೇಸಿಗೆಯಲ್ಲಿ ಆರೋಗ್ಯ ರಕ್ಷಣೆಯ ಅವಶ್ಯಕತೆ” ವಿಶೇಷಬರಹ ಸಂಗಮೇಶ್ ಜವಾದಿ Read Post »

ಪುಸ್ತಕ ಸಂಗಾತಿ

ಲೇಖಕ ಡಾ. ಹೊನ್ಕಲ್ ಅವರ ಹತ್ತನೇ ಪ್ರವಾಸ ಕಥನ “ದಕ್ಷಿಣ ಧ್ರುವದಿಂ ಉತ್ತರ ಧ್ರುವಕೆ”ಲೋಕಾರ್ಪಣೆ

ಪುಸ್ತಕ ಸಂಗಾತಿ ಲೇಖಕ ಡಾ. ಹೊನ್ಕಲ್ ಅವರ ಹತ್ತನೇ ಪ್ರವಾಸ ಕಥನ “ದಕ್ಷಿಣ ಧ್ರುವದಿಂ ಉತ್ತರ ಧ್ರುವಕೆ” ಲೋಕಾರ್ಪಣೆ ಯಾದಗಿರಿ:- ಇತ್ತೀಚೆಗೆ ಇಲ್ಲಿಗೆ ಸಮೀಪದ ಗುರುಮಠಕಲ್ ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕನ್ನಡದ ಅಸ್ಮಿತೆ ಕಾರ್ಯಕ್ರಮದಲ್ಲಿ ಲೇಖಕ ಡಾ. ಸಿದ್ಧರಾಮ ಹೊನ್ಕಲ್ ಅವರ *ದಕ್ಷಿಣ ಧ್ರುವದಿಂ ಉತ್ತರ ಧ್ರುವಕೆ..* ಎಂಬ ಅವರ ಹತ್ತನೇ ಪ್ರವಾಸ ಕಥನವನ್ನು ಸಾನಿಧ್ಯ ವಹಿಸಿದ ಪರಮಪೂಜ್ಯ ಗುರು ಮುರುಘರಾಜೇಂದ್ರ ಮಹಾಸ್ವಾಮಿಗಳು ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ವೇದಿಕೆಯಲ್ಲಿದ್ದ ಡಾ.ಜೆ.ವಿ.ಪುರುಷೋತ್ತಮ ಅವರು ಹಾಗೂ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿದ್ದ ಡಾ.ಎಂ.ಎಸ್.ಶಿರವಾಳ,ಶರಣ ಸಾಹಿತಿ ವಿಶ್ವಾರಾಧ್ಯ ಸತ್ಯಂಪೇಟೆ ಮತ್ತು ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಬಾಬುರಾಯ ದೊರೆ, ಇಂಗ್ಲಿಷ್ ಉಪನ್ಯಾಸಕರಾದ ಮಹೇಶ ಚಂದಾಪುರ ಮುಂತಾದವರು ಲೋಕಾರ್ಪಣೆ ಮಾಡಿದರು.ಲೇಖಕ ಸಿದ್ಧರಾಮ ಹೊನ್ಕಲ್ ಉಪಸ್ಥಿತರಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಈ ಹಿಂದೆ ಪ್ರಶಸ್ತಿ ಪಡೆದ ಅವರ ಪ್ರವಾಸ ಕೃತಿ ಪಂಚನದಿಗಳ ನಾಡಿನಲ್ಲಿ, ಗುಲ್ಬರ್ಗಾ ವಿವಿಯ ಪ್ರಶಸ್ತಿ ಪಡೆದ ಕನ್ಯಾಕುಮಾರಿಯಿಂದ ಹಿಮಾಲಯದವರೆಗೆ, ಗಾಂಧೀಯ ನಾಡಿನಲ್ಲಿ, ಕಲ್ಬುರ್ಗಿಯಿಂದ ಕಾಠಮಂಡುವಿನವರೆಗೆ, ಪಂಚವಟಿಯ ನೆಲದಲ್ಲಿ, ಮೂರು ದೇಶ ನೂರೊಂದು ಅನುಭವ, ಲಕ್ನೋ ಸಾಂಸ್ಕೃತಿಕಯಾನ, ಲೋಕ ಸಂಚಾರಿ, ಹೀಗೆ ವೈವಿಧ್ಯಮಯ ಪ್ರದೇಶಗಳ, ವಿದೇಶಗಳ ಪ್ರವಾಸ ಕಥನ ಬರೆದು ನಾಡಿನಲ್ಲಿ ಅತ್ಯಂತ ಹೆಚ್ಚು ಪ್ರವಾಸ ಕಥನ ಬರೆದ ಲೇಖಕರ ಸಾಲಿನಲ್ಲಿ ಇರುವ ಲೇಖಕ ಸಿದ್ಧರಾಮ ಹೊನ್ಕಲ್ ಅವರ ಹೊಸ ಕೃತಿ  “ದಕ್ಷಿಣ ಧ್ರುವದಿಂ ಉತ್ತರ ಧ್ರುವಕೆ” ಇಂದು ತಮ್ಮ ಕಾಲೇಜಿನಲ್ಲಿ,  ಅದು ಈ ಗಡಿನಾಡಿನಲ್ಲಿ ಕನ್ನಡದ ಅಸ್ಮಿತೆ ಕುರಿತ ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಆದದ್ದೂ ತುಂಬಾ ಸಂತೋಷ ಎಂದು ಪ್ರಾಚಾರ್ಯರಾದ ಡಾ.ಜೆ.ವಿ.ಪುರುಷೋತ್ತಮ ಅವರು ಲೇಖಕ ಸಿದ್ಧರಾಮ ಹೊನ್ಕಲ್ ಅವರಿಗೆ ಅಭಿನಂದಿಸಿದರು.ಅವರ ಪ್ರವಾಸ ಕಥನಗಳು ಅನೇಕ ವಿಶ್ವ ವಿದ್ಯಾಲಯಗಳಲ್ಲಿ ಪಠ್ಯವಾಗಿ ರೋದು ಈ ಗಿರಿ ನಾಡಿಗೆ ಸಂದ ಗೌರವ ಎಂದು ಮುಂದುವರಿದು  ಕೃತಿ ಕುರಿತು ಮಾತನಾಡಿದರು. ಪೂಜ್ಯರಾದ ಗುರು ಮುರುಘರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿ ಸಿದ್ಧರಾಮ ಹೊನ್ಕಲ್ ರು ಈಗಾಗಲೇ ಎಂಬತ್ತು ಕೃತಿ ರಚಿಸಿ ಗಡಿನಾಡಿನ ಈ ಜಿಲ್ಲೆಗೆ ಹೆಸರು ತಂದಿದ್ದಾರೆ.ಅವರು ನೂರು ಕೃತಿ ತರಲಿ ಎಂದು ಶುಭಾಶೀರ್ವಾದ ಮಾಡಿ ಅಭಿನಂದಿಸಿದರು.

ಲೇಖಕ ಡಾ. ಹೊನ್ಕಲ್ ಅವರ ಹತ್ತನೇ ಪ್ರವಾಸ ಕಥನ “ದಕ್ಷಿಣ ಧ್ರುವದಿಂ ಉತ್ತರ ಧ್ರುವಕೆ”ಲೋಕಾರ್ಪಣೆ Read Post »

ಕಾವ್ಯಯಾನ

ಜಯಶ್ರೀ .ಭ.ಭಂಡಾರಿ ಕವಿತೆ”ನೀನುಬಂದ ಮೇಲೆ”

ಕಾವ್ಯಸಂಗತಿ ಜಯಶ್ರೀ .ಭ.ಭಂಡಾರಿ “ನೀನುಬಂದ ಮೇಲೆ” ಪತ್ರ ಬರೆಯುವ ಸಂಸ್ಕೃತಿಮಾಯವಾಯಿತುಬರೀ ಫೋನಿನಲ್ಲಿ ಮಾತುಕತೆಮುಗಿಯುವಂತಾಯ್ತು. ಎಳ್ಳು ಬೆಲ್ಲ, ಬನ್ನಿ ಕೊಡುವ ಸಂಪ್ರದಾಯಕಡಿಮೆಯಾಯಿತುಇವೆಲ್ಲಾ ಇಮೇಜುಗಳ ಮೂಲಕವಾಟ್ಸಾಪ್ನಲ್ಲಿ ಕಾಣುವಂತಾಯಿತು. ಮನೆ ಮನೆಗೆ ಹೋಗಿ ಆಮಂತ್ರಣ ಪತ್ರಿಕೆಕೊಡ್ತಿದ್ವಿಈಗ ಮೊಬೈಲ್ ನಲ್ಲಿ ಕಳಿಸಿ ಬನ್ನಿ ಅಂತಕರಿತಿವಿ. ಗ್ರಂಥಾಲಯಕ್ಕೆ ಹೋಗಿ ಪುಸ್ತಕ ಹುಡುಕಿಓದುತ್ತಿದ್ವಿಈಗ ಏನಿದ್ದರೂ ಗೂಗಲ್ ಸರ್ಚ್ ಮಾಡಿಪಡಕೊಂತೀವಿ. ದಿನಪತ್ರಿಕೆಗಳು ಮನೆಗೆ ತರಿಸುವದುಕಡಿಮೆಯಾಯಿತುಸಮಯ ಸಿಕ್ಕಾಗ , ತಾಳ್ಮೆ ಇದ್ದಾಗ ಮಾತ್ರಮೊಬೈಲ್ ನಲ್ಲಿ ಓದುವಂತಾಗಿದೆ. ಪಿಯಾನೋ ಪೆಟ್ಟಿಗೆ, ತಬಲಾ ತಂದು ವಾರ್ಷಿಕ ಸಮ್ಮೇಳನಪ್ರಾಕ್ಟೀಸ್ ಮಾಡಸ್ತಿದ್ವಿ.ಈಗ ಮಕ್ಕಳು ಮೊಬೈಲ. ನೋಡಿಭರ್ಜರಿ ಡ್ಯಾನ್ಸ್ ಮಾಡ್ತಾರೆ. ಒಂದು ಹೊತ್ತಿನ ಊಟ ಇರದಿದ್ದರೂಜೀವನ ನಡೆದೀತು..ಒಂದು ಕ್ಷಣ ಮೊಬೈಲು ಕೈಗೆ ಸಿಗದಿದ್ದರೆಜೀವವೇ ಹೋದೀತು.. ನೀನಿಲ್ದಾಗ ಅದೆಷ್ಟು ಚಂದ ಇದ್ವಿಕೂಡಿ ಬದುಕುತ್ತಿದ್ದಿ ಕೂಡಿ ಮಾತಾಡ್ತಿದ್ವಿನೀ ಬಂದ್ಮೇಲೆ ನಿನ್ ಕೈಯಾಗ ಸಿಕ್ಕುಒದ್ದಾಡ್ತಿದ್ದೀವಿ. ಜಯಶ್ರೀ .ಭ.ಭಂಡಾರಿ.

ಜಯಶ್ರೀ .ಭ.ಭಂಡಾರಿ ಕವಿತೆ”ನೀನುಬಂದ ಮೇಲೆ” Read Post »

ಕಾವ್ಯಯಾನ

ಡಾ ಅನ್ನಪೂರ್ಣ ಹಿರೇಮಠ ಗಜಲ್

ಕಾವ್ಯ ಸಂಗಾತಿ ಡಾ ಅನ್ನಪೂರ್ಣ ಹಿರೇಮಠ ಗಜಲ್ ನನ್ನೆದೆಯ ಖಾಲಿ ಪುಟದ ಮೇಲೆ ಬರೆದೆ ನೋವಿನ ಶಾಯರಿಹೃದಯದಾ ಗೋಡೆಯ ಮೇಲೆ ಕೊರೆದೆ ನೋವಿನ ಶಾಯರಿ ಪುಟಿದೇಳುವ ಭಾವಗಳ ಸಲುಹಲಾರದೆ ನೆಚ್ಚಿದೆ ಮಧುಶಾಲೆಮನದಂಗಳ ರಂಗವಲ್ಲಿ ತುಂಬಾ ಹಾಸಿದೆ ನೋವಿನ ಶಾಯರಿ ನೆನಪಿನಲೆ ಅಪ್ಪಳಿಸೋ ವೇಗಕೆ ತುಟಿಗಂಟಿತು ಮಧುಬಟ್ಟಲುತಲ್ಲಣಿಸೋ ದೇಹಧರೆ ಮೇಲೆಲ್ಲಾ ಹೊಸೆದೆ ನೋವಿನ ಶಾಯರಿ ಪ್ರೇಮದೋಲೆಯ ಅಕ್ಷರಗಳು ಕಾಣದಂತೆ ಕುಡಿದೆ ಮಧುಪಾಕಸಂತಸದ ಸರಸದಲೆಯ ಅಬ್ಬರಕೆ ಬೆಸೆದೆ ನೋವಿನ ಶಾಯರಿ ತನು ಒಲವ ಒಸುಗೆಯ ಕಸಿವಿಸಿಯಲಿರೆ ಸುರೆ ಒಳಗೆ ಸುರಿದೆಜೀವ ತರಂಗದ ಆಲಾಪಕೆ ಕಲ್ಲಂತೆ ಎಸೆದೆ ನೋವಿನ ಶಾಯರಿ ಆ ಸಮ್ಮಿಲನ ಸಲುಗೆಗಳ ನೆನೆನೆನೆದು ಮಧಿರೆಯ ಬೆನ್ನತ್ತಿರುವೆತೋಂ ತನನನ ರಾಗ ತಾಳಕೆ ಹೊದಿಸಿದೆ ನೋವಿನ ಶಾಯರಿ ಅನು ಹುಚ್ಚೆದ್ದಾಸೆಗಳ ತಣಿಸಲಾರದೆ ನಂಜು ಗುಟುಕಿಸಿದಳುಸವಿ ಸಲ್ಲಾಪದ ಅಂದದ ಚಿತ್ರಕೆ ಅಂಟಿಸಿದೆ ನೋವಿನ ಶಾಯರಿ ಡಾ ಅನ್ನಪೂರ್ಣ ಹಿರೇಮಠ

ಡಾ ಅನ್ನಪೂರ್ಣ ಹಿರೇಮಠ ಗಜಲ್ Read Post »

ಕಾವ್ಯಯಾನ

ಕೆ.ಬಿ.ವೀರಲಿಂಗನ ಗೌಡ್ರ ಅವರ ಕವಿತೆ “ಗುಂಪಿಗರ್ಥವಾಗಲಿಲ್ಲ”

ಕಾವ್ಯ ಸಂಗಾತಿ ಕೆ.ಬಿ.ವೀರಲಿಂಗನ ಗೌಡ್ರ “ಗುಂಪಿಗರ್ಥವಾಗಲಿಲ್ಲ” ಆಒಬ್ಬಂಟಿಯನ್ನುತಂಗಾಳಿ ತಬ್ಬಿಕೊಂಡಾಗನೆರಳು ನಾಚಿ ನೀರಾಯಿತು ಆಒಬ್ಬಂಟಿಯನ್ನುಪುಸ್ತಕ ನೆತ್ತಿನೇವರಿಸಿದಾಗಬೆಳಕು ಕತ್ತಲೆಗೆ ಮುತ್ತಿಕ್ಕಿತು ಆಒಬ್ಬಂಟಿಯನ್ನುಕ್ಯಾಂಟೀನ್ ಉಣಿಸಿದಾಗಇಂದಿರಮ್ಮನಾತ್ಮ ತಣಿಯಿತು ಆಒಬ್ಬಂಟಿಯನ್ನುಆಲಯ ನೋಡಿ ನಕ್ಕಾಗಬಯಲು ಎದೆಗಾಣಿಸಿಕೊಂಡಿತು ಆಒಬ್ಬಂಟಿಗುಂಪಿಗರ್ಥವಾಗಲಿಲ್ಲಗಾಳಿ ಬೆಳಕು ನೆರಳಿಗರ್ಥವಾದ. -ಕೆ.ಬಿ.ವೀರಲಿಂಗನಗೌಡ್ರ.

ಕೆ.ಬಿ.ವೀರಲಿಂಗನ ಗೌಡ್ರ ಅವರ ಕವಿತೆ “ಗುಂಪಿಗರ್ಥವಾಗಲಿಲ್ಲ” Read Post »

ಕಾವ್ಯಯಾನ

ಶುಭಲಕ್ಷ್ಮಿ ಆರ್ ನಾಯಕ “ಚಿವುಟಿದಷ್ಟು ಚಿಗುರು”

ಕಾವ್ಯ ಸಂಗಾತಿ ಶುಭಲಕ್ಷ್ಮಿ ಆರ್ ನಾಯಕ “ಚಿವುಟಿದಷ್ಟು ಚಿಗುರು” ಚಿವುಟಿದಷ್ಟು ಚಿಗುರುವ ರೀತಿಯುನಿನ್ನದಾಗಲಿ ಮನವೆಕವಿಯುವ ಕತ್ತಲ ಹಾದಿಯಲಿದೀಪವಾಗು ಮನವೆ// ತಿವಿಯುವ ಮುಳ್ಳಿನ ಮೇಲೆ ಹೆಜ್ಜೆಯಹಾಕದಿರು ತನುವೆಅವಿತಿಹ ಧೈರ್ಯವ ಹೊರಗೆ ಎಳೆದುಬಾಳುತಿರು ಸುಮವೆ// ಛಲವದು ಇದ್ದರೆ ಚಿವುಟಿದ ಹಾಗೆಚಿಗುರುವೆ ನೀಗಿಡವೆಒಲವನು ಬದುಕಲಿ ಅನುಕ್ಷಣ ತೋರುತಸಾಗುತಿರು ಬಲವೆ// ಚುಚ್ಚುವ ಮಾತಿಗೆ ಇರಿಯುವ ನುಡಿಗೆಅಳುಕದಿರು ಎಂದೂಹಚ್ಚು ಎಲ್ಲರ ಮನದಲಿ ಸಮತೆಯ ಹಣತೆಯ ನೀ ಮುಂದೂ// ಗೋಳನು ಹೊಯ್ಸುತ ಖುಷಿಯ ಪಡುವರುಕುಹಕದ ಜನರಿಲ್ಲಿಗಾಳವ ಹಾಕುತ ಸಿಕ್ಕಿಸಿ ಹಾಕಲುಕಾಯುವ ಸ್ಥಿತಿಯಿಲ್ಲಿ// ಕಮರದೆ ಕುಂದದೆ ಬಾಡಿ ಹೋಗದೆಬೆಳೆಯೋ ಬದುಕಲ್ಲಿವಿಮಲ ಚರಿತಗೆ ಸಕಲವ ಒಪ್ಪಿಸಿಶರಣಾಗು ಬಾಳಲ್ಲಿ// ಶುಭಲಕ್ಷ್ಮಿ ಆರ್ ನಾಯಕ

ಶುಭಲಕ್ಷ್ಮಿ ಆರ್ ನಾಯಕ “ಚಿವುಟಿದಷ್ಟು ಚಿಗುರು” Read Post »

ಕಾವ್ಯಯಾನ

ಹಮೀದ್ ಹಸನ್ ಮಾಡೂರು “ಮೂರ್ಖರ ಯುದ್ದ”

ಕಾವ್ಯಸಂಗಾತಿ ಹಮೀದ್ ಹಸನ್ ಮಾಡೂರು “ಮೂರ್ಖರ ಯುದ್ದ” ಯುದ್ಧ ರಣರಂಗದಲ್ಲಿ …ಬೆಂಕಿಯುಂಡೆ ಹಾರಿತು ಅತ್ತಿತ್ತ,ಪುಣ್ಯ ರಮಝಾನ್ ಮಾಸದಲ್ಲೂಸೈತಾನನ ಬಿಚ್ಚಿ ಹೊರ ಬಿಟ್ಟರೇಕೆ?ರಕ್ತದಾಹಕೆ ಮಕ್ಕಳ ಬಲಿ ಕೊಟ್ಟರೇಕೆ? ರಕ್ತದಾಹಿ ದುಷ್ಟರವರುಜಗದೊಳು ಕಂಟಕ ದುರಾಂಕಾರಿಗಳುಮಾನವೀಯತೆಯ ನರರಹಿತರಾಕ್ಷಸಪುತ್ರ ಅಧಿಕಾರಶಾಹಿಗಳವರುಕೆಣಕಿ ನೋಡ ಬಾರದಿತ್ತು ಶತ್ರುಗಳನು,! ಕಂದಮ್ಮಗಳ ಸರಣಿ ಕೊಲೆಅದೊಂದು ಅಮಾನವೀಯ ಕೃತ್ಯಪಾಪಿಗಳು ಅನುಭವಿಸುತ್ತಿಹರುಪ್ರತಿಕಾರ ಪ್ರಾರಂಭ ಅವಕಾಶವೆಲ್ಲೊ?ರಕ್ತದಾಹಿಗೆ ರಕ್ತದಿಂದ ಪ್ರತ್ಯೂತ್ತರವಷ್ಟೇ,! ಯಾರ ಬೆವರಿನ ಬಂಗಲೆ,ಯಾರದ್ದೊ ಬಾಂಬಿಗೆ ಉರುಳಲುಕನಸು ಹಲವರ ನುಚ್ಚುನೂರಾಗಲುಯುದ್ದವೆಂಬ ಭಯಾನಕತೆ ಕಾವೇರಿದೆಸರ್ವನಾಶಕ್ಕೆ ಹೊಸ ಇತಿಹಾಸ ಬರೆಯಲಿದೆ,! ಸೋತು ಹೋದರೇನು?ಗೆದ್ದು ಪ್ರತಿಕಾರ ತೀರಿಸಿದರೇನು?,ಈ ಸಾವು ನೋವಿಗೆ ಬಲಿಗಳಾರೊ,ಬೆವರಿಳಿಸಿ ಕಟ್ಟಿಸಿದ ಬೆಚ್ಚನೆ ಆ ಮನೆಗಳು,ಯುದ್ಧದ ಕಾರ್ಮೊಡಕೆ ಸಿಲುಕಿ ಮಣ್ಣಾಗಲು.! ಹಮೀದ್ ಹಸನ್ ಮಾಡೂರು

ಹಮೀದ್ ಹಸನ್ ಮಾಡೂರು “ಮೂರ್ಖರ ಯುದ್ದ” Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ ಸಂಗಾತಿ-114 ಒಬ್ಬ ಅಮ್ಮನ ಕಥೆ ರುಕ್ಮಿಣಿ ನಾಯರ್ ಸುಮತಿಯ ತಳಮಳ ಮಕ್ಕಳಿಗೆ ಊಟವನ್ನು ಬಡಿಸಿ ನಂತರ ತಾನು ತಟ್ಟೆಯಲ್ಲಿ ಅನ್ನ-ಸಾರು, ಹೀರೇಕಾಯಿ ಪಲ್ಯವನ್ನು ಬಡಿಸಿಕೊಂಡು ಅನ್ನಕ್ಕೆ ಸಾರನ್ನು ಹಾಕಿ ಕಲಸಿ ಪಲ್ಯ ಸೇರಿಸಿ ಮೂವರಿಗೂ ಒಂದೊಂದು ತುತ್ತು ತಿನಿಸಿ ತಾನು ಊಟ ಮಾಡಿದಳು. ಅಮ್ಮ ಊಟ ಮಾಡುವ ಮುನ್ನ ಅಮ್ಮನ ಕೈಯಿಂದ ಒಂದೊಂದು ತುತ್ತು ತಿನ್ನುವುದೆಂದರೆ ಮಕ್ಕಳಿಗೆ ಪಂಚಪ್ರಾಣ. ಸುಮತಿ ಮಾಡುತ್ತಿದ್ದ ಅಡುಗೆಯೂ ಅಷ್ಟೇ ರುಚಿಕರವಾಗಿರುತ್ತಿತ್ತು. ಒಮ್ಮೊಮ್ಮೆ ಮನೆಯಲ್ಲಿ ಏನೂ ಇಲ್ಲದಿದ್ದಾಗ ಒಣ ಮೆಣಸಿನಕಾಯಿಯನ್ನು ಕೆಂಡದ ಮೇಲೆ ಹಾಕಿ ಸುಟ್ಟು ಈರುಳ್ಳಿಯನ್ನು ಸಣ್ಣ ಸಣ್ಣದಾಗಿ ಹೆಚ್ಚಿ ಹುಣಸೆಹಣ್ಣನ್ನು ಸೇರಿಸಿ ಸ್ವಲ್ಪ ಉಪ್ಪು ಹಾಕಿ ಕಿವುಚಿ ಅಮ್ಮ ಮಾಡವ ಗೊಜ್ಜು ಬಹಳ ರುಚಿಕರವಾಗಿರುತ್ತದೆ ಎಂದು ಹೇಳುತ್ತಾ ಮಕ್ಕಳು ಬೆರಳುಗಳನ್ನು ಚಪ್ಪರಿಸಿ ನೆಕ್ಕುತ್ತಾ ಆಸ್ವಾದಿಸುತ್ತಿದ್ದರು. ಊಟದ ನಂತರ ಮಕ್ಕಳು ಚಾಪೆ ಹಾಸಿ ಸುಮತಿಯ ಕೈಯನ್ನು ದಿಂಬಾಗಿಸಿಕೊಂಡು ಮಲಗಿ ಅಮ್ಮ ಹೇಳುವ ಕಥೆಯನ್ನು ಕೇಳುತ್ತಾ ಮಕ್ಕಳು ನಿದ್ರೆಗೆ ಜಾರಿದರು. ಸುಮತಿ ಬೆಳಗ್ಗೆ ಬೇಗನೆ ಎದ್ದು ತಿಂಡಿ ಮಾಡಿದಳು. ಭಾನುವಾರ ಬೆಳಗ್ಗೆ ಸುಮತಿಯ ಜೊತೆ ಮೂವರು ಮಕ್ಕಳು ಶಾಲೆಗೆ ಹೊರಟರು. ಮಕ್ಕಳು ಬಂದರೆ ಸುಮತಿಗೆ ಸ್ವಲ್ಪ ನಿರಾಳವಾಗಿರುತ್ತಿತ್ತು. ತೋಟದ ಕೂಲಿ ಕೆಲಸಗಾರರ ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸಲು ಮಕ್ಕಳು ಅವಳಿಗೆ ನೆರವಾಗುತ್ತಿದ್ದರಿಂದ ಅಷ್ಟು ಆಯಾಸವಾಗುತ್ತಿರಲಿಲ್ಲ. ಶಾಲೆಗೆ ಹೊರಡುವ ಮುನ್ನ ಮಧ್ಯಾಹ್ನದ ಊಟಕ್ಕೆ ಬೇಕಾದ ಬುತ್ತಿ ತುಂಬಿಕೊಳ್ಳುತ್ತಿದ್ದರು. ಅಲ್ಲಿನ ಬಂಗಲೆಯ ಮೇಲ್ವಿಚಾರಕ ಬಂಗಲೆಯ ಸುತ್ತಲಿರುವ ಹಣ್ಣಿನ ಗಿಡಗಳಿಂದ ಹಣ್ಣುಗಳನ್ನು ಕಿತ್ತು ತಂದು ಕೊಡುವರು.. ಆ ಹಣ್ಣುಗಳನ್ನು ಶಾಲೆಯ ಮಕ್ಕಳಿಗೂ ಕೊಟ್ಟು ಸುಮತಿ ಮತ್ತು ಮಕ್ಕಳು ತಿನ್ನುತ್ತಿದ್ದರು.  ಸಂಜೆ ಹೊತ್ತಿಗೆ ಶಾಲೆಯಿಂದ ಹೊರಟು ಮಾತನಾಡುತ್ತಾ ಅಮ್ಮನ ಕೈಹಿಡಿದು ಮಕ್ಕಳು ಜೊತೆಗೆ ನಡೆಯುವರು. ದಾರಿ ಹೋಕರಿಗೆ ಈ ತಾಯಿ ಮಕ್ಕಳ ಬಾಂಧವ್ಯ ಕಂಡು ಸಂತಸವಾಗುತ್ತಿತ್ತು. ಸುಮತಿ ಟೀಚರಿಗೆ ಹಣ ಐಶ್ವರ್ಯ ಇಲ್ಲದಿದ್ದರೇನು, ಮಕ್ಕಳು ಆಕೆಗೆ ನೆರಳಾಗಿ ಇರುವರು ಎಂದು ಹೇಳಿಕೊಳ್ಳುತ್ತಿದ್ದರು. ಮಕ್ಕಳೊಂದಿಗೆ ಮಾತನಾಡುತ್ತಾ ನಡೆದರೆ ಸುಮತಿಗೆ ದಾರಿ ಸಾಗುವುದು ತಿಳಿಯುತ್ತಿರಲಿಲ್ಲ. ಮನೆ ತಲುಪಿದ ಮೇಲೆಯೂ ಮಕ್ಕಳು ಸುಮತಿಯ ಹಿಂದೆ ಮುಂದೆ ಸುಳಿದಾಡುತ್ತಾ ಕೀಟಲೆ ಮಾಡುತ್ತಾ ನಗಿಸುತ್ತಾ ಕಾಲ ಕಳೆಯುವರು. ಮಾರನೇ ದಿನ ಬೇಗನೆ ಎದ್ದು ಮಗಳು ಹೊರಡಲು ಅನುವಾದಳು. ವಾರಕ್ಕೊಮ್ಮೆ ಮಗಳು ಬರುವಾಗ ಎಷ್ಟು ಸಂಭ್ರಮಿಸುತ್ತಿದ್ದಳೋ ಅವಳನ್ನು ಕಳುಹಿಸಿಕೊಡುವಾಗ ಸುಮತಿಗೆ ಅಷ್ಟೇ ಸಂಕಟವಾಗುತ್ತಿತ್ತು. ಹೀಗೆ ಕೆಲವು ತಿಂಗಳುಗಳು ಕಳೆದವು. ಸುಮತಿಗೆ ಈಗ ಮೊದಲಿಗಿಂತ ಆಯಾಸ ಹೆಚ್ಚಾಗುತ್ತಿತ್ತು. ಒಂದು ದಿನ ಸುಮತಿ ಬೆಳಗಿನ ಬಸ್ಸಿನಲ್ಲಿ ಎರಡನೇ ಮಗಳು ಕೆಲಸ ಮಾಡುತ್ತಿದ್ದ ಅನಾಥಾಶ್ರಮದ ಕಡೆಗೆ ಹೊರಟಳು. ಮೂರನೇ ಮಗಳು ಬಸ್ಸು ಹತ್ತಲು ಅಮ್ಮನಿಗೆ ಸಹಾಯ ಮಾಡಿದಳು. ಸುಮತಿಯ ಬದಲಿಗೆ ಶಾಲೆಗೆ ಹೋಗಬೇಕಾಗಿದ್ದ ಕಾರಣ ಅವಳು ತಾಯಿಯೊಂದಿಗೆ ಸಕಲೇಶಪುರಕ್ಕೆ ಹೊರಡಲಿಲ್ಲ. ಒಂದು ದಿನವೂ ಶಾಲೆಯ ಕೆಲಸ ತಪ್ಪಿಸುವಂತೆ ಇರಲಿಲ್ಲ. ತಪ್ಪಿದರೆ ಎಲ್ಲಿ ಕೆಲಸ ಕೈಬಿಟ್ಟು ಹೋಗುವುದೋ ಎನ್ನುವ ಭಯ ಸುಮತಿಯನ್ನು ಸದಾ ಕಾಡುತ್ತಿತ್ತು. ವರಮಾನಕ್ಕೆ ಇದೊಂದೇ ಮಾರ್ಗವಿತ್ತು. ಎರಡನೇ ಮಗಳು ಈಗಷ್ಟೇ ಕೆಲಸಕ್ಕೆ ಸೇರಿಕೊಂಡಿದ್ದಾಳೆ. ಅವಳಿಗೆ ಸಿಗುವ ಸಂಬಳದಿಂದ ಮನೆಯ ಪೂರ್ತಿ ಖರ್ಚು ವೆಚ್ಚಗಳನ್ನು ಸರಿತೂಗಿಸಲು ಸಾಧ್ಯವಾಗುತ್ತಿರಲಿಲ್ಲ.  ಅದೂ ಅಲ್ಲದೇ ಇತ್ತೀಚೆಗೆ ಕೆಲವು ತಿಂಗಳುಗಳಿಂದ ತಾನೇ ಅವಳು ಕೆಲಸಕ್ಕೆ ಹೋಗುತ್ತಿರುವುದು. ಜೊತೆಗೆ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಿದ್ದಾಳೆ. ಹಾಗಾಗಿ ನನ್ನ ಬದಲು ಈ ಮಗಳಾದರೂ ಶಾಲೆಗೆ ಹೋಗಲೇಬೇಕು ಎಂದು ಆಲೋಚಿಸಿ ಮೂರನೇ ಮಗಳನ್ನು ಶಾಲೆಗೆ ಹೋಗುವಂತೆ ತಿಳಿಸಿದಳು. ಸಕಲೇಶಪುರ ನನಗೆ ಗೊತ್ತಿಲ್ಲದ ಊರಲ್ಲ. ಮಗಳು ಕೆಲಸ ಮಾಡುತ್ತಿರುವ ಅನಾಥಾಶ್ರಮ ಹುಡುಕುವುದು ಕಷ್ಟವೇನಲ್ಲ ಎಂದೂ ಮಗಳಿಗೆ ತಿಳಿಸಿದಳು. ಆದರೆ ಸಕಲೇಶಪುರದ ಬಸ್ ನಿಲ್ದಾಣ ಬಂದಾಗ ಬಸ್ಸಿಂದ ಕೆಳಗಿಳಿಯಲು ಸುಮತಿ ಬಹಳ ಕಷ್ಟ ಪಡಬೇಕಾಯಿತು. ಒಂದೊಂದು ಹೆಜ್ಜೆ ಇಡುವುದೂ ಅವಳಿಗೆ ಕಷ್ಟಕರವೆನಿಸುತ್ತಿತ್ತು. ಬಸ್ ನಿಲ್ದಾಣದಿಂದ ಮಗಳು ಇರುವ ಅನಾಥಾಶ್ರಮದ ಬಳಿಗೆ ಹೋಗಲು ಹೆಚ್ಚು ದೂರವೇನೂ ಇರಲಿಲ್ಲ. ಎಂದಿಲ್ಲದ ಇಂದೇಕೋ ಅವಳ ಕಣ್ಣುಗಳಿಗೆ ಎಲ್ಲವೂ ಮಸುಕಾಗಿ ಕಾಣುತ್ತಿತ್ತು. ತಡವರಿಸುತ್ತಾ ಹೇಗೋ ಮಗಳು ವಾಸವಿದ್ದ ಅನಾಥಾಶ್ರಮದ ಬಾಗಿಲ ಮುಂದೆ ಬಂದು ನಿಂತಳು. ತಲೆ ಸುತ್ತು ಬಂದಂತೆ ಅನುಭವವಾಯಿತು. ಅಲ್ಲಿಯೇ ಮೆಟ್ಟಿಲ ಮೇಲೆ ಕುಳಿತಳು. ಸ್ವಲ್ಪ ಸುಧಾರಿಸಿದ ನಂತರ ಮೆಲ್ಲನೆ ಎದ್ದು ಬಾಗಿಲನ್ನು ತಟ್ಟಿದಳು. ಅನಾಥಾಶ್ರಮದ ಮಕ್ಕಳಲ್ಲಿ ಒಬ್ಬ ಹುಡುಗಿ ಬಂದು ಬಾಗಿಲು ತೆರೆದಳು…. ಯಾರು ನೀವು? ಯಾರು ಬೇಕಿತ್ತು ನಿಮಗೆ? ಎಂದು ಕೇಳಿದಳು. ಆ ಹುಡುಗಿಯ ಮುಖ ಸುಮತಿಗೆ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಹಾಗಾಗಿ ತನ್ನ ಮಗಳ ಹೆಸರನ್ನು ಹೇಳಿ…”ಅವರು ಇಲ್ಲಿದ್ದಾರೆಯೇ”…. ಎಂದು ಕೇಳಿದಳು. ಒಳಗೆ ಕುಳಿತು ಆಶ್ರಮಕ್ಕೆ ಬೇಕಾದ ದಿನಸಿಗಳ ಪಟ್ಟಿಯನ್ನು ಮಾಡುತ್ತಿದ್ದ ಸುಮತಿಯ ಎರಡನೇ ಮಗಳು ಅಮ್ಮನ ಧ್ವನಿ ಕೇಳಿದಂತಾಗಿ ಎದ್ದು ಹೊರಗೆ ಬಂದಳು.  ಓಹ್!! ಅಮ್ಮ ಬಂದಿದ್ದಾಳೆ…. ಎಂದು ಹೇಳುತ್ತಾ ಕೋಣೆಯಿಂದ ಹೊರ ಬಂದ ಮಗಳ ಮುಖದಲ್ಲಿ ಮಂದಹಾಸ ಮೂಡಿತು. ಆದರೆ ಮರುಕ್ಷಣವೇ ಅವಳ ಹಣೆಯಲ್ಲಿ ಗೆರೆಗಳು ಮೂಡಿದವು. ಅಮ್ಮ ಏಕೆ ಇಷ್ಟು ಬೆಳಗ್ಗೆ ನನ್ನನ್ನು ಹುಡುಕಿಕೊಂಡು ಬಂದಿದ್ದಾಳೆ? ನಾನು ಮನೆಗೆ ಹೋಗಿ ಬಂದು ಒಂದೆರಡು ದಿನಗಳಷ್ಟೇ ಆಗಿವೆ ಎಂದುಕೊಳ್ಳುತ್ತಾ ಅಚ್ಚರಿಯಿಂದ ಅಮ್ಮನನ್ನು ಒಮ್ಮೆ ನೋಡಿದಳು. ಓಡು ನಡಿಗೆಯಲ್ಲಿ ಸುಮತಿಯ ಬಳಿ ಬಂದು ಕೈಹಿಡಿದುಕೊಂಡು, … “ನಾನು ಇಲ್ಲೇ ಇರುವುದು…. ಅಮ್ಮ ಒಳಗೆ ಬಾ”…. ಎಂದಳು. ಮಗಳ ಧ್ವನಿ ಕೇಳಿ ಸುಮತಿ ಅವಳೆಡೆಗೆ ನೋಡಿದಳು. ಅವಳ ಮುಖ ಅಸ್ಪಷ್ಟವಾಗಿ ಕಂಡಿತು. ಕಣ್ಣುಗಳು ಹನಿಗೂಡಿದವು. ಮಗಳ ಕೈ ಹಿಡಿದು ತಡವರಿಸುತ್ತಾ ಅನಾಥಾಶ್ರಮದ ಒಳಗೆ ಹೆಜ್ಜೆ ಇಟ್ಟಳು. ಕುತೂಹಲದಿಂದ ಯಾರಿರಬಹುದೆಂದು ನೋಡಲು ಅನಾಥಾಶ್ರಮದ ಮಕ್ಕಳೆಲ್ಲ ಅಲ್ಲಿ ಬಂದು ಸೇರಿದರು….”ಇವರು ನನ್ನ ತಾಯಿ”…. ಎಂದು ಮಕ್ಕಳಿಗೆ ಪರಿಚಯಿಸಿದಳು. ಮಕ್ಕಳೆಲ್ಲರೂ….”ನಮಸ್ತೆ ಅಮ್ಮಾ”….ಎಂದು ಕೈ ಮುಗಿದರು. ಸುಮತಿ ಮುಗುಳ್ನಕ್ಕಳಷ್ಟೇ, ಮಾತನಾಡಲು ಅವಳಿಂದ ಸಾಧ್ಯವಾಗಲಿಲ್ಲ. ಇದನ್ನರಿತ ಮಗಳು ತನ್ನ ಕೋಣೆಯ ಕಡೆಗೆ ಅಮ್ಮನನ್ನು ಕರೆದುಕೊಂಡು ಹೋದಳು. ಸುಮತಿಯ ಕೈಗಳು ನಡುಗುತ್ತಿದ್ದವು. ಬಾಯಿ ಒಣಗಿತ್ತು. ಏನೋ ಹೇಳಲು ಮುಂದಾದಳು ಆದರೆ ಧ್ವನಿ ಗಂಟಲಿನಿಂದ ಆಚೆ ಬರಲಿಲ್ಲ. ಅಮ್ಮನ ಈ ಸ್ಥಿತಿಯನ್ನು ಕಂಡು ಮಗಳಿಗೆ ತುಂಬಾ ಗಾಬರಿಯಾಯಿತು. ಮೂರು ಬೆಂಚುಗಳನ್ನು ಸೇರಿಸಿ ಮಂಚದಂತೆ ಮಾಡಿಕೊಂಡಿದ್ದ ಹಾಸಿಯ ಮೇಲೆ ಅಮ್ಮನನ್ನು ಕುಳ್ಳಿರಿಸಿ, ಒಬ್ಬ ಹುಡುಗಿಯನ್ನು ಕರೆದು ಸ್ವಲ್ಪ ನೀರನ್ನು ತರುವಂತೆ ತಿಳಿಸಿದಳು. 

Read Post »

ಕಾವ್ಯಯಾನ

ಡಾ. ಗೀತಾ ದಾನಶೆಟ್ಟಿಬಾಗಲಕೋಟ “ನೀ ನನ್ನ ಕವಿತೆ”

ಕಾವ್ಯ ಸಂಗಾತಿ ಡಾ. ಗೀತಾ ದಾನಶೆಟ್ಟಿ ಬಾಗಲಕೋಟ “ನೀ ನನ್ನ ಕವಿತೆ” ದೇಹಕ್ಕೆ ಉಸಿರಾದೆಭಾವಕ್ಕೆ ಬೆಸುಗೆಮೌನಕ್ಕೆ ಮಾತಾದೆಮಾತಿಗೆ ಮುತ್ತಾದೆನೀ ನನ್ನ ಕವಿತೆ ಸ್ನೇಹಕ್ಕೆ ಗೆಳೆಯಪ್ರೇಮಕ್ಕೆ ಇನಿಯಹೃದಯಕ್ಕೆ ಸನಿಹಪ್ರೀತಿಗೆ ನೀ ಪ್ರಾಣನೀ ನನ್ನ ಕವಿತೆ ಅರಿವಿಗೆ ಗುರು ನೀನುಸಾಧನೆಗೆ ಸ್ಪೂರ್ತಿಜ್ಞಾನದ ದೇಗಲವುಬಾಳಿಗೆ ನೀ ಬೆಳಕುನೀ ನನ್ನ ಕವಿತೆ ಮಮತೆಗೆ ತಾಯ್ಮಡಿಲುಮುಗ್ದತೆಗೆ ನೀ ಮಗವುಭೇದವಿಲ್ಲದ ಒಲವುಸಂಬAಧಕ್ಕೆ ಜೀವ ಸೆಲೆನೀ ನನ್ನ ಕವಿತೆ ರಾಗಕ್ಕೆ ಸ್ವರ ನೀನುನೆರಳಿಗೆ ನೀ ಮರವುನೋವಿಗೆ ನಲಿವುಮನಸಿಗೆ ಮುದವುನೀ ನನ್ನ ಕವಿತೆ ಬರಹಕ್ಕೆ ಮುಣ್ಣುಡಿಯುನುಡಿಗೆ ನೀ ಜೀವನಾಡಿಬದುಕಿಗೆ ಬರವಸೆಬಾಳಸಂಗಾತಿ ನೀನುನೀ ನನ್ನ ಕವಿತೆ ಡಾ. ಗೀತಾ ದಾನಶೆಟ್ಟಿ

ಡಾ. ಗೀತಾ ದಾನಶೆಟ್ಟಿಬಾಗಲಕೋಟ “ನೀ ನನ್ನ ಕವಿತೆ” Read Post »

You cannot copy content of this page

Scroll to Top