ಕಾವ್ಯ ಸಂಗಾತಿ
ಹಮೀದಾಬೇಗಂ ದೇಸಾಯಿ
ಮೂಕ ವೇದನೆ.

ಯಾರಿಗೆ ಹೇಳಲಿ ನನ್ನೆದೆಯ ಅಳಲು
ಸಹಿಸುತಿರುವೆ ಮೂಕವೇದನೆಯಾ
ಪಂಜರದ ಪಕ್ಷಿಯಾ ತೆರದಿ
ಮೌನದಿ ಚಡಪಡಿಸುತಿರುವೆ
ರೀತಿ – ರಿವಾಜುಗಳ ಸಂಕೋಲೆ
ಬಿಗಿದು ಬಂಧಿಸಿದೆ ಏಳದಂತೆ
ಪ್ರತಿಷ್ಠೆಯ ಡಂಭಾಚಾರದ ಪರದೆ
ಮುಸುಕು ಹಾಕಿದೆ ಸುತ್ತ ನೋಡದಂತೆ..
ಭಾವ ಕುಸುಮ ಬಾಡಿ ಮುರುಟಿ
ಪ್ರೀತಿ ಪಕಳೆ ಉದುರಿ ಹೋಗಿವೆ
ಎದೆಯಲವಿತ ನೋವು ಮುದುರಿ
ನಲುಗಿ ನಲುಗಿ ನಡುಗಿವೆ ..
ರೆಕ್ಕೆ ಮುರಿದ ಹಕ್ಕಿ ನಾನು
ಹೇಗೆ ಹಾರಿ ಹೋಗಲೇ..
ಸೂರು ಬಿದ್ದ ಮನೆಯಲಿ
ಹೇಗೆ ನಾನು ಬದುಕಲೇ…
———
ಹಮೀದಾಬೇಗಂ ದೇಸಾಯಿ





Nice one
Suuper