ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬರೆಯುವುದಿಲ್ಲ  ಕವಿತೆ
ಅಡಿಗಡಿಗೆ
ಹೇಳುವುದಿಲ್ಲ
ಮನದ ಭಾವನೆಗಳ
ಕ್ಷಣ  ಕ್ಷಣಕೆ
ಅರಹುದಿಲ್ಲ  ಮನದ
ವೇದನೆಗಳನು
ಬಾರಿ  ಬಾರಿ
ನೀರವ  ಮೌನದಲಿ
ಮಿಂದೆದ್ದು
ನನ್ನೊಳಗಿನ  ನನ್ನನ್ನು
ಸಂತೈಸಿಕೊಳ್ಳುತ್ತಾ
ಸುತ್ತಮುತ್ತಲಿನ  
ಆಗುಹೋಗುಗಳ
ಸಂಭಾಳಿಸಬೇಕಿದೆ
ಸೈರಣೆಯ  ಪರಾಕಾಷ್ಟೆಯನ್ನು
ಮುಟ್ಟಬೇಕಿದೆ
ಭಾವನೆಗಳನ್ನು  ಒಳಗೊಳಗೆ
ಕಟ್ಟಿಹಾಕಬೇಕಿದೆ
ಮುಗುಳ್ನಗೆಯ ಹೊದಿಕೆಯನ್ನು
ಹೊದ್ದು  ಮನದ ವಿಚಾರಗಳಿಗೆ
ಮುಸುಕು  ಹಾಕಬೇಕಿದೆ
ಅಂತರ್ಗತದ  ತಳಮಳವನ್ನು
ನಿಭಾಯಿಸಬೇಕಿದೆ
ಒಳಿತು,-ಕೆಡಕುಗಳ
ಲೆಕ್ಕಾಚಾರವನ್ನು  ಅರಗಿಸಿಕೊಳ್ಳಬೇಕಿದೆ
ಬವಣೆಗಳ  ಸರಮಾಲೆಯ
ಹೊತ್ತು  ತಿರುಗಬೇಕಿದೆ
ಒಂದಿನಿತೂ  ಬೇಸರಿಸದೆ
ಹೊಂದಾಣಿಕೆ ಮಾಡಿಕೊಳ್ಳಬೇಕಿದೆ

 ಸುಧಾ  ಪಾಟೀಲ 

About The Author

2 thoughts on “ಸುಧಾ ಪಾಟೀಲ ಅವರ ಕವಿತೆ-ಬರೆಯುವುದಿಲ್ಲ ಕವಿತೆ”

  1. ಡಾ. ಮೀನಾಕ್ಷಿ ಪಾಟೀಲ್ ವಿಜಯಪುರ

    ಅತ್ಯಂತ ಆಪ್ತವಾದ ಭಾವ ಕವಿತೆಯಲ್ಲಿ ಒಡಮೂಡಿದೆ ಧನ್ಯವಾದಗಳು ಮೇಡಂ

Leave a Reply

You cannot copy content of this page

Scroll to Top