ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಚಿಕಣಿ ಜೀವದ ವಿಪರ್ಯಾಸವು,
ಅವಳ ಬದುಕ ವಿಡಂಬನೆಯೇ?
ಗುರಿಯ ಪವಣಿಸುವ ಪ್ರತಿಬಿಂಬವೇ?
ವೈದ್ಯೆಯಾಗುವ ಭವಿಷ್ಯದ ಪ್ರಮೆಯೇ
ನುಡಿಯುತ್ತಿದೆ ದರ್ಪಣ….!!೧!!

ಅವಳೊಬ್ಬ ಅನಾಥ ಬಿಕ್ಷುಕಿಯು
ಕಾಣದ ಬಟ್ಟೆ ಅತ್ತ ಪಯಣವು
ಅನತಿ‌ ದೂರದ ಗುರಿಯು
ತುತ್ತು ಅನ್ನ- ಗೇಣು ಬಟ್ಟೆಗಾಗಿ,
ನಾಳೆಯ ಹಸು ನಿಗಿಸುವ ಚಿಂತೆಯು..!!೨!!

ಹಾಗೆ ಹೀಗೆ ಹೇಗೋ ಅನ್ನುವ -ಕಂತೆ
ಎತ್ತಲೋ ಉಂಡು ಮಲಗುವ -ಕಥೆ
ಉಸಿರಾಡುತ್ತಿರುವ ದೇಹದ ವ್ಯಥೆ
ಇದೇಂಥ ಕನ್ನಡಿಯ ಪ್ರತಿಬಿಂಬವು
ಬೆಳೆದು ನಿಂತು ನಸುನಗುತಿರೆ………!!೩!!

ಬರಡು ಕೊರಡು ಕೊನರಿದಂತೆ
ಬಂಜೆ ಆಕಳು ಹಾಲು ಕರಿದಂತೆ
ಒಣಗಿದ ಮರ ಚಿಗುರಿ ನಿಂತಂತೆ
ನೋಡುತಿರೆ ಸತ್ಯವೋ ಮಿಥ್ಯವೋ
ಕನಸಿನ ಮಧುರ ಮಂಟಪು……!!೪!!

ಹಬ್ಬಿ ಹೆಣೆದು ನಿಂತು ನಗುತಿದೆ
ನೂರಾರು ನೊಂದ ಬೆಂದ ಜೀವಕ್ಕೆ
ಅನಾಥ ಅಸಹಾಯಕ ಬಡತನಕ್ಕೆ ,
ಬಿಸಿಲು ಚಳಿ ಗಾಳಿ ಮೆಟ್ಟಿದ -ಬಡವರ ಭಾಗ್ಯೋದಯವಾಗೆಂದು………!!೫!!

ಜೀವನದ ಕಾಡಿನದೆಯಿಂದ ಚಿಮ್ಮಿದ
ನೊರೆ ಹಾಲುಂಡು ಕಲಿತು ,ಸಾವಿರಾರು
ನೊಂದವರ ಸುಶ್ರುಷಯ ಮಾಡುವ,
ಉಚಿತ- ಉಪಚಾರಿ ದೇವ-ದ್ಯೆವನಾಗು
ಉಚ್ಚರಿಸಿತು-ನಿರ್ಮಲ ಪ್ರತಿಬಿಂಬ…!೬!

ಕನ್ನಡಿ ನೋಡಿ ನೀನ್ಯಾರು ಯಾಕೆ
ಇಲ್ಲಿ ಎನ್ನಲು , ಹೇಳುತಿರೆ.. ನಿನ್ನ
ಹೊಂಗನಸು “ನಾ” ಸಾಧಿಸಿ ಜಯಿಸು …

ಜೀವಭಾವ ಪವಣಿಸುತ ಪೊರೆ ….
ಪೇಳುತಿದೆ ತರ್ಪಣ- ದರ್ಪಣ..!೭!


About The Author

2 thoughts on “ಸವಿತಾ ದೇಶಮುಖ ಅವರ ಕವಿತೆ-ಹೊಂಗನಸು”

Leave a Reply

You cannot copy content of this page

Scroll to Top