ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಹಂಕಾರ ತೊರೆದು
ಹಗುರವಾಗಿ ಬಿಡು
ಹಗುರವೇ ಸುಲಭ
ಎತ್ತರಕ್ಕೆ ಏರಲು.

ಹಣವಿದ್ದ ಮಾತ್ರಕೆ
ಸಿಗಬಹುದು ವಸ್ತು ,
ಕಷ್ಟ ಮಾರಲಾಗದು
ಶಾಂತಿ ಕೊಳ್ಳಲಾಗದು.

ಎಂದೂ ಭೇಟಿ ಆಗವು
ಅಳುವು ಮತ್ತು ನಗೆ
ಅಕಸ್ಮಾತ್ ಭೇಟಿಯೇ
ಮರೆಯದ ಘಳಿಗೆ.

ಘಾಸಿ ಮಾಡಿದವರ
ತೆಗಳುವ ಬದಲು
ಅವರೆದುರವರ
ವೈರಿಗಳ ಹೊಗಳು.

ಹಸಿವಾದಾಗ ಮಾತ್ರ
ರುಚಿ ಒಂದೊಂದಗಳು
ಹೊಟ್ಟೆಯು ತುಂಬಿರಲು
ಹುಗ್ಗಿಯೂ ಮುಳ್ಳು ಮುಳ್ಳು.

ಸಿಟ್ಟು ದ್ವೇಷ ಅಸೂಯೆ
ಎಲ್ಲವ ಅಳಿಸಲು
ಕೊಟ್ಟಿರುವ ನಮಗೆ
ಒಂದು ಮುಗುಳುನಗೆ

———————————————

About The Author

2 thoughts on “ವ್ಯಾಸ ಜೋಶಿ ಅವರ ತನಗಗಳು”

  1. ನೀನು ಬಾಲ್ಯದಲ್ಲಿ ಮಾಡುತ್ತಿದ್ದ ಆ ನಾಟಕಗಳ ಚಾಪು ಈಗ ಕವನ ರೂಪದಲ್ಲಿ ಬಂದಿದೆ ಅಷ್ಟೇ

  2. ಕೆರೋಡಿ. ಎಂ. ಲೋಲಾಕ್ಷಿ.. ಮೈಸೂರು

    ಶ್ರೀ. ಜೋಶಿ ಅವರ ತನಗಗಳೆಲ್ಲವೂ
    ಬದುಕಿನ ಸೂಕ್ತಿಗಳೇ..
    ಧನ್ಯವಾದಗಳು

Leave a Reply

You cannot copy content of this page

Scroll to Top